Rice Price: ಶೀಘ್ರದಲ್ಲೇ ಅಕ್ಕಿ ಸಿಗಲ್ವಾ? ಬರೋಬ್ಬರಿ 150 ರೂಪಾಯಿಯಷ್ಟು ಬೆಲೆ ಏರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಅಕ್ಕಿ ಬೆಲೆ ಏರಿಕೆ


Last Updated:

ಬೆಂಗಳೂರು ಅಕ್ಕಿ ಬೆಲೆ ಜಿಗಿತ, ಪ್ರತಿ ಕೆಜಿಗೆ 6-10 ರೂ ಏರಿಕೆ, 26 ಕೆಜಿ ಚೀಲಕ್ಕೆ 150 ರೂ ಹೆಚ್ಚಳ, ರಫ್ತು, ಇಂಧನ ವೆಚ್ಚ, ದಾಸ್ತಾನು ಕೊರತೆಯಿಂದ ನವೆಂಬರ್ ತನಕ ಒತ್ತಡ ಸಾಧ್ಯ.

 ಅಕ್ಕಿ ಬೆಲೆ ಏರಿಕೆ
ಅಕ್ಕಿ ಬೆಲೆ ಏರಿಕೆ

ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ ಬೆಲೆಗಳ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅಕ್ಕಿ (Rice) ಬೆಲೆ ( Price) ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿರುವ ಕಾರಣ, ಪ್ರತಿ ಕೆಜಿ ಅಕ್ಕಿ ಮೇಲೆ 6 ರಿಂದ 10 ರೂಪಾಯಿಯಷ್ಟು ಏರಿಕೆಯಾಗಿದ್ದು (Hike), 26 ಕೆಜಿ ಅಕ್ಕಿಯ ಚೀಲದ ಮೇಲೆ ಬರೋಬ್ಬರಿ 150 ರಷ್ಟು ಬೆಲೆ ಏರಿಕೆಯಾಗಿದೆ. ಇದು ಗೃಹಿಣಿಯರ ಆತಂಕಕ್ಕೆ ಕಾರಣವಾಗಿದೆ.

ಏಕೆ ಈ ಏರಿಕೆ?

ಮಾರುಕಟ್ಟೆಯಲ್ಲಿ ಅಕ್ಕಿಗೆ ಭಾರೀ ಬೇಡಿಕೆಯಿದೆ, ಆದರೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಅವಕಾಶ ನೀಡಿರುವುದರಿಂದ, ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ದಾಸ್ತಾನು ಕೊರತೆ ಉಂಟಾಗಿದೆ. ಸದ್ಯ ಜಾಗತಿಕ ರಾಜಕೀಯ ಪರಿಸ್ಥಿತಿ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳಿಂದಾಗಿ ಇಂಧನದ ಬೆಲೆ ಹೆಚ್ಚಾಗಿರುವುದು ಕೂಡ ಅಕ್ಕಿ ಸಾಗಾಣಿಕೆ ವೆಚ್ಚದ ಮೇಲೆ ಪರಿಣಾಮ ಬೀರಿದೆ ಎಂದು ಕನ್ನಡಪ್ರಭ ಪತ್ರಿಕೆ ವರದಿ ಮಾಡಿದೆ.
ಸೋನಾ ಮಸೂರಿ ಬೆಲೆ ಜಿಗಿತ

ಈ ಅಕ್ಕಿ ಬೆಲೆ ಏರಿಕೆಯ ಬಿಸಿ ಪ್ರಮುಖ ತಳಿಗಳ ಮೇಲೆ ಬಿದ್ದಿದೆ. ಸೋನಾ ಮಸೂರಿ ಅಕ್ಕಿ 43 ರಿಂದ 49 ಕ್ಕೆ ಮತ್ತು ಸೋನಾ ರೈಸ್ 52 ರಿಂದ 59 ರೂಪಾಯಿ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲೇ ಈ ಬೆಲೆ ಏರಿಕೆ ಕಂಡುಬಂದಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ನವೆಂಬರ್ ತನಕ ಕಷ್ಟವೇ?

ಸ್ಥಳೀಯ ವ್ಯಾಪಾರಿಗಳ ಪ್ರಕಾರ, ನವೆಂಬರ್ ತಿಂಗಳವರೆಗೆ ಮಾರುಕಟ್ಟೆಯಲ್ಲಿ ಹೊಸ ಅಕ್ಕಿಯ ದಾಸ್ತಾನು ಬರುವವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಅಕ್ಕಿ ಕೊರತೆಯಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. “ಅಕ್ಕಿ ಬೆಲೆ ಏರಿಕೆಯಿಂದ ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮ ಬೀರದಿದ್ದರೂ, ಜನರು ಊಟ ಮಾಡಲೇಬೇಕು. ಆದರೆ ಗ್ರಾಹಕರು ಬೆಲೆ ಕೇಳಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ,” ಎಂದು ಮಳಿಗೆಯ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed