Last Updated:
Modi: ಭಾರತದಲ್ಲಿ ಲಾಂಗೆಸ್ಟ್ ಪಿಎಂ ಆಗಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂದನವನದ ಸ್ಟಾರ್ಗಳು ವಿಶ್ ಮಾಡಿದ್ದಾರೆ.
ಸುದೀರ್ಘ ಅವಧಿಗೆ ಪ್ರಧಾನಿಯಾಗಿ (Prime Minister) ದಾಖಲೆ ಬರೆದ ಮೋದಿಗೆ ನಟ ಕಿಚ್ಚ ಸುದೀಪ್ (Kichcha Sudeep) ಶುಭಾಶಯ ತಿಳಿಸಿದ್ದಾರೆ. ದೀರ್ಘಾವಧಿಯ ಚುನಾಯಿತ ಪ್ರಧಾನಿ ಆದ ಹಿನ್ನೆಲೆ ಸ್ಯಾಂಡಲ್ವುಡ್ (Sandalwood) ಸ್ಟಾರ್ ನಟರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ಪಿಎಂ ಮೋದಿಗೆ ಶುಭಕೋರಿದ ಕಿಚ್ಚ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ ಕಂಡು ಸ್ಯಾಂಡಲ್ ವುಡ್ ಸ್ಟಾರ್ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಈ ಸಾಧನೆಯನ್ನ ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು. 12 ವರ್ಷಗಳು.. ಅದೇ ಶಕ್ತಿ, ಅದೇ ವೇಗ.. ನಿಧಾನಗತಿ ಇಲ್ಲ. ನರೇಂದ್ರ ಮೋದಿ ಅವರೇ ನಿಮ್ಮ ಸಮರ್ಪಣೆ ಮತ್ತು ಸಾಧನೆಗೆ ಹೃತ್ಪೂರ್ವಕ ನಮನ ಎಂದು ಬರೆದಿದ್ದಾರೆ.
ಇದು ನಮಗೆ ಹೆಮ್ಮೆಯ ಕ್ಷಣ ಸರ್. ನೀವು ನಿರಂತರವಾಗಿ ಯಶಸ್ಸು ಸಾಧಿಸಲಿ ಮತ್ತು ಮುಂದೆ ಬರುವ ಎಲ್ಲದರಲ್ಲೂ ಶುಭವಾಗಲಿ ಎಂದು ನಟ ಸುದೀಪ್ ಶುಭಕೋರಿದ್ದಾರೆ. ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ನಟ ರಿಷಬ್ ಶೆಟ್ಟಿ ಕೂಡ ಶುಭಾಶಯ ತಿಳಿಸಿದ್ದಾರೆ. ಐತಿಹಾಸಿಕ ನಾಯಕನಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದ್ದು ಭಾರತದ ಅತಿ ಹೆಚ್ಚು ಕಾಲ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಸತತ ಮೂರು ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟವನ್ನು ಗೆಲುವಿನ ದಡ ಸೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು 2014 ರಿಂದಲೂ ದೇಶದ ಪ್ರಧಾನಿಯಾಗಿದ್ದಾರೆ. ಈ ಮೂಲಕ ದೇಶದ ದೀರ್ಘಾವಧಿ ಚುನಾಯಿತ ಪ್ರಧಾನಿ ಎಂಬ ನೆಹರು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇನ್ನೂ ಈ ದಾಖಲೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, “ಜನತೆಯೇ ನನಗೆ ದೇವರು. ಮಧ್ಯಮ ವರ್ಗದವರು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ನಾವು ಹಗಲಿರುಳು ಶ್ರಮಿಸಬೇಕು. ಜನರು ನಮ್ಮಲ್ಲಿ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ” ಎಂದು ಹೇಳಿದರು.
ವರದಿ: ಸತೀಶ್ ಕನಕಪುರ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka
Jun 11, 2026 11:42 AM IST













