Chandan Shetty: ‘ಲೈಫ್ ಹಾಳಾಯ್ತು, ಬೆಂಗಳೂರೇ ಬಿಡೋಕೆ ರೆಡಿಯಾಗಿದ್ದೆ’ ಚಂದನ್ ಶೆಟ್ಟಿ ಶಾಕಿಂಗ್ ಕಮೆಂಟ್ಸ್ | | ACTPnews

chandan shetty life changing song unknown facts


ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ಕನ್ನಡ ಹಾಡುಗಳನ್ನ ರಾಪ್ ಶೈಲಿಯಲ್ಲಿಯೇ ಹಾಡೋಕೆ ಶುರು ಮಾಡಿದರು. ಇವರ ಸಂಗೀತದ ಆಲ್ಬಂಗಳು ಹಿಟ್ ಕೂಡ ಆದವು. ಆಗಿನಿಂದಲೇ ಚಂದನ್ ಶೆಟ್ಟಿ ರಾಪರ್ ಚಂದನ್ ಶೆಟ್ಟಿ ಆದರು.
ಗಾಂಜಾ ಸಾಂಗ್ ವಿವಾದ

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಇವರ 3 ಪೆಗ್ ಹಾಡು ವೈರಲ್ ಆಗಿತ್ತು. ಕಾಟನ್ ಕ್ಯಾಂಡಿ ಹಾಡು ಎಲ್ಲರ ಮಗನ ಸೆಳೆಯಿತು. Chocolate Girl, ಟಕೀಲಾ ಈ ಎಲ್ಲ ಆಲ್ಬಂ ಸಾಂಗ್ ಜನರ ಮನ ಗೆದ್ದಿವೆ.

ಹಾಳಾಗೋದೆ…

ಆದರೆ, ಚಂದನ್ ಶೆಟ್ಟಿ ಮೇಲೆ ಹೇಳಿದ ಎಲ್ಲ ಹಾಡುಗಳನ್ನ ಮಾಡೋ ಮೊದಲು ಒಂದು ಹಾಡು ಮಾಡಿದ್ದರು. ಅದು ಹಾಳಾಗೋದೆ ಅನ್ನೋದೇ ಆಗಿದೆ.

ಚಂದನ್ ವಿವಾದಿತ ಹಾಡುಗಳು

ಚಂದನ್ ಶೆಟ್ಟಿ ಒಳ್ಳೆ ಹಾಡುಗಳನ್ನೆ ಕೊಟ್ಟಿದ್ದಾರೆ. ಟ್ರೆಂಡಿ ಗೀತೆಗಳನ್ನೆ ಮಾಡಿದ್ದಾರೆ. ಆದರೆ, ಕೋಲುಮಂಡೆ ಹಾಡು ವಿವಾದಕ್ಕೀಡಾಯಿತು. ಮಂಡ್ಯ, ಮೈಸೂರು, ಚಾಮರಾಜನಗರದ ಜನರಿಗೆ ಈ ಹಾಡಿನಿಂದ ಬೇಸರ ಆಯಿತು. ಇದರಿಂದ ಈ ಹಾಡು ಹೊರಗೆ ಬರಲೇ ಇಲ್ಲ.

ಗಾಂಜಾ ಸಾಂಗ್ ವಿವಾದ

ಈ ಒಂದು ಹಾಡನ್ನ ಅಂತ್ಯ ಅನ್ನುವ ಚಿತ್ರಕ್ಕಾಗಿಯೇ ಚಂದನ್ ಶೆಟ್ಟಿ ಹಾಡಿದ್ದರು. ಆದರೆ, ಇದು ಗಾಂಜಾ ಸೇವನೆಗೆ ಪ್ರಚೋದಿಸುವಂತೆ ಇದೆ ಅಂತಲೇ ಆರೋಪಗಳು ಬಂದವು. ಪೊಲೀಸರು ಚಂದನ್ ಶೆಟ್ಟಿ ಅವರನ್ನ ಪೊಲೀಸರು ವಿಚಾರಣೆಗೂ ಕರೆದಿದ್ದರು.

chandan shetty life changing song unknown facts

ಹಾಳಾಗೋದೆ…

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಇದು ಚಿತ್ರದ ಸನ್ನಿವೇಶಕ್ಕೆ ಮಾಡಿರೋ ಹಾಡಾಗಿದೆ. ಇಲ್ಲಿ ನಾನು ಗಾಯಕ ಅಂತಲೇ ಚಂದನ್ ಶೆಟ್ಟಿ ಹೇಳಿದ್ದರು. ಇದನ್ನ ಹೇಳಿದ್ಮೇಲೆ ವಿವಾದ ತಣ್ಣಗಾಗಿತ್ತು.

ಚಂದನ್ ಶೆಟ್ಟಿ ನೆನಪುಗಳು

ಚಂದನ್ ಶೆಟ್ಟಿ ತಮ್ಮ ಜರ್ನಿಯ ಈ ಎಲ್ಲ ಏರಿಳಿತಗಳ ಬಗ್ಗೆ ಮಾತನಾಡಿದ್ದಾರೆ. ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟ್ ಅಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ.

ಹಾಳಾಗಾದೆ ಹಾಡಿನಿಂದಲೇ ನಾನು ಉದ್ಧಾರ ಆಗಿದ್ದೇನೆ. ಆದರೆ, ಕೋಲಮಂಡೆ, ಗಾಂಜಾ ಸಾಂಗ್ ನಿಂದ ತೊಂದರೆ ಆಯಿತು ಅನ್ನುವುದನ್ನು ಚಂದನ್ ಶೆಟ್ಟಿ ಹೇಳಿದ್ದಾರೆ.

ಡೈನಾಮೈಟ್ ಹೊಸ ಆಲ್ಬಂ

ಡೈನಾಮೈಟ್ ಅನ್ನೋ ಅಂತಾರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಮ್ಯೂಸಿಕ್ ವಿಡಿಯೋವನ್ನ ಚಂದನ್ ಶೆಟ್ಟಿ ಮಾಡಿದ್ದಾರೆ. ಲಕ್ಷ ಲಕ್ಷ ದುಡ್ಡು ಹಾಕಿ ಇದನ್ನ ನಿರ್ಮಿಸಿದ್ದಾರೆ.

ಈ ಡೈನಾಮೈಟ್ ಸಾಂಗ್ ಮೂಲಕ ಮೈಸೂರು ಹುಡುಗಿ ಡಯಾನಾ ಅವರನ್ನ ಪರಿಚಯ ಮಾಡಿದ್ದಾರೆ. ಈ ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಅನ್ನುವ ಕನಸು ಕಂಡಿದ್ದಾರೆ. ಈ ಹಾಡು ಈಗಾಗಲೇ ರಿಲೀಸ್ ಆಗಿ ಗಮನ ಸೆಳೆದಿದೆ.

ಚಂದನ್ ಶೆಟ್ಟಿ ಲೈಫ್

ಚಂದನ್ ಶೆಟ್ಟಿ ಅವರ ಜೀವನದಲ್ಲಿ ನಿವೇದಿತಾ ಗೌಡ ಬಂದ್ರು. ಆದರೆ, ಪರಸ್ಪರ ಒಪ್ಪಿಗೆ ಮೇರೆಗೆ ಇವರು ಡಿವೋರ್ಸ್ ಕೂಡ ಪಡೆದುಕೊಂಡಿದ್ದಾರೆ.

ನಿವೇದಿತಾ ಗೌಡ ಅವರ ಬಗ್ಗೆ ಚಂದನ್ ಶೆಟ್ಟಿ ಆಗಲಿ, ಚಂದನ್ ಬಗ್ಗೆ ನಿವೇದಿತಾನೇ ಆಗಲಿ, ಎಲ್ಲೂ ಕೆಟ್ಟದಾಗಿ ಮಾತನಾಡಿಯೇ ಇಲ್ಲ. ಇಬ್ಬರೂ ಈ ಬಗ್ಗೆ ಇದೇ ಪಾಡ್ ಕಾಸ್ಟ್ ಅಲ್ಲಿಯೇ ಮಾತನಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed