Janhvi Kapoor: ಪೆದ್ದಿ ಹೀರೋಯಿನ್ ಜಾನ್ವಿ ಕಪೂರ್ ಟ್ರೋಲ್ ಆಗ್ತಿರೋದ್ಯಾಕೆ? ಅಭಿನಯಕ್ಕಲ್ಲ, ವಿಷಯ ಬೇರೆಯೇ ಇದೆ | Janhvi Kapoor trolled for the role in Peddi movie | | ACTPnews

ಜಾನ್ವಿ


Last Updated:

Janhvi Kapoor: ಶ್ರೀದೇವಿ ಅವರ ಮುದ್ದಿನ ಮಗಳು ಜಾನ್ವಿ ಕಪೂರ್ ಪೆದ್ದಿ ಸಿನಿಮಾದ ಪಾತ್ರಕ್ಕಾಗಿ ಭಾರೀ ಟ್ರೋಲ್ ಆಗುತ್ತಿದ್ದಾರೆ. ಏನು ಕಾರಣ?

ಜಾನ್ವಿ
ಜಾನ್ವಿ

ಪೆದ್ದಿ ಸಿನಿಮಾ (Peddi Movie) ರಿಲೀಸ್ ಆಗಿದೆ. ಗೇಮ್ ಚೇಂಜರ್ (Game Changer) ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ನಂತರ ರಾಮ್ ಚರಣ್ (Ram Charan) ಅವರನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ಯಾವಾಗ ನೋಡ್ತೀವಿ ಅಂತ ಕಾಯ್ತಿದ್ದರು ಅಭಿಮಾನಿಗಳು. ಸಿನಿಮಾ (Cinema) ರಿಲೀಸ್ ಆಗಿ ಉತ್ತಮ ಓಪನಿಂಗ್ (Opening) ಪಡೆದುಕೊಂಡಿದೆ. ಆದರೆ ಸಿನಿಮಾ ಬಿಗ್ ಹಿಟ್ ಎನ್ನುವ ರಿವ್ಯೂ ಪಡೆದುಕೊಂಡಿಲ್ಲ. ಅದರಲ್ಲೂ ಜಾನ್ವಿ ಕಪೂರ್  (Janhvi Kapoor) ಪಾತ್ರ ಭಾರೀ ಟ್ರೋಲ್ ಆಗುತ್ತಿದೆ.

ನಟಿ ಜಾನ್ವಿ ಕಪೂರ್ ಅವರ ಪಾತ್ರ ಅವರ ಅಭಿನಯದಿಂದಾಗಿ ಅಲ್ಲ ಬದಲಾಗಿ ನಿರ್ದೇಶಕರು ಆ ಪಾತ್ರವನ್ನು ತೋರಿಸಿರುವ ವಿಚಾರವಾಗಿ ಭಾರೀ ಟ್ರೋಲ್ ಆಗುತ್ತಿದೆ. ಅಷ್ಟಕ್ಕೂ ಏನಿದು ವಿಚಾರ? ಇಲ್ಲಿ ಓದಿ.

ಸಿನಿಮಾಗಳಲ್ಲಿ ಹೀರೋಯಿನ್ ಎಂದರೆ ಕಂಪ್ಲೀಟ್ ಮನೋರಂಜನೆ. ಗ್ಲಾಮರ್, ಎಕ್ಸ್​ಪೋಸ್ ಅನ್ನೋ ಕಾನ್ಸೆಪ್ಟ್ ಹಿಂದಿನಿಂದಲೇ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ಸ್ವಲ್ಪ ಬದಲಾಯಿಸಲಾಗುತ್ತಿದೆ. ಮಹಿಳಾ ಪಾತ್ರಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಆದರೆ ದೇವರ ಸಿನಿಮಾದಂತೆಯೇ ಜಾನ್ವಿ ಕಪೂರ್ ಅವರು ಈ ಸಿನಿಮಾದಲ್ಲಿಯೂ ಜಸ್ಟ್ ಗ್ಲಾಮರ್ ಗೊಂಬೆಯಾಗಿದ್ದಾರೆ.

ಸಿನಿಮಾದಲ್ಲಿ ಮಸಾಲೆ ತುಂಬೋದಿಕ್ಕಷ್ಟೇ ಹೀರೋಯಿನ್​ ಅನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ ಎನ್ನುವುದು ಸಿನಿಮಾ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ. ಇದೇ ಕಾರಣದಿಂದ ಜಾನ್ವಿ ಕಪೂರ್ ಪಾತ್ರ ಟ್ರೋಲ್ ಆಗುತ್ತಿದೆ.

ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಪೆದ್ದಿ ಸಿನಿಮಾ ಬಿಡುಗಡೆಯಾಯಿತು. ಬಿಡುಗಡೆಯಾದಾಗಿನಿಂದ, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ ಸಿನಿಮಾದಲ್ಲಿ ಹೀರೋಯಿನ್ ಪಾತ್ರದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಅನೇಕ ವೀಕ್ಷಕರು ಚಿತ್ರವು ಅವಳನ್ನು ವಸ್ತುನಿಷ್ಠವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪಾತ್ರವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಟೀಕೆ ವೈರಲ್ ಆಗಿದ್ದು ಬಹಳಷ್ಟು ಜನರು ಇದರೊಂದಿಗೆ ಹೌದು ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ಅಚಿಯಮ್ಮ (ಜಾನ್ವಿ ಕಪೂರ್) ಬಗ್ಗೆ ಪೆದ್ದಿ (ರಾಮ್ ಚರಣ್) ವರ್ತನೆಯು ವಸ್ತುನಿಷ್ಠೀಕರಣದಂತಿದೆ ಎಂದು ಅನೇಕ ವೀಕ್ಷಕರು ವಾದಿಸಿದ್ದಾರೆ.

ಇದನ್ನೂ ಓದಿ: Anu Prabhakar: ಅನು ಪ್ರಭಾಕರ್ ಟೈಗರ್ ಪ್ರಭಾಕರ್ ಮಗಳಾ? ಅನು ಹೇಳಿದ್ದಿಷ್ಟು?

ಚಿತ್ರದ ನಿರ್ದೇಶನ ಅಥವಾ ಒಟ್ಟಾರೆ ನಿರೂಪಣೆಗಿಂತ ಹೆಚ್ಚಾಗಿ ಜಾನ್ವಿ ಕಪೂರ್ ಪಾತ್ರದ ಬರವಣಿಗೆಯ ಮೇಲೆ ಹೆಚ್ಚಿನ ಪ್ರತಿಕ್ರಿಯೆ ಕೇಂದ್ರೀಕೃತವಾಗಿದೆ. ವೀಕ್ಷಕರು ಅವರ ಪಾತ್ರವು ಕಥೆಗೆ ಸೀಮಿತ ಪ್ರಸ್ತುತತೆಯನ್ನು ಹೊಂದಿದ್ದು,  ಒಂದು ಗ್ಲಾಮರ್ ಗೊಂಬೆಯಂತೆ ಚಿತ್ರೀಕರಿಸಲಾಗಿದೆ ಎಂದಿದ್ದಾರೆ. ಅಂತೂ ಜಾನ್ವಿ ಅವರ ಪಾತ್ರ ಮಾತ್ರ ಭಾರೀ ಟೀಕೆ ಎದುರಿಸಿತ್ತಿದೆ.

Janhvi Kapoor trolled for the role in Peddi movie

ಜಾನ್ವಿ ಕಪೂರ್

ಈ ಹಿಂದೆ ದೇವರ ಸಿನಿಮಾದಲ್ಲಿಯೂ ಹೀರೋಯಿನ್​ಗೆ ಹೆಚ್ಚಾಗಿ ಆ್ಯಕ್ಟಿಂಗ್ ಸ್ಪೇಸ್ ಕೊಡದೆ ಗ್ಲಾಮರ್ ಹೈಲೈಟ್ ಮಾಡಲಾಗಿತ್ತು. ಈಗ ಇಲ್ಲಿಯೂ ಅದನ್ನೇ ಮಾಡಲಾಗಿದೆ. ಜಾನ್ವಿ ಅವರ ಪಾತ್ರವನ್ನು ಬರೀ ಗ್ಲಾಮರ್, ಮಸಾಲೆಯ ಉದ್ದೇಶಕ್ಕೆ ಮಾತ್ರ ಬಳಸಿದ್ದಾರೆ ಎನ್ನುವುದು ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed