ನಾನು ಪ್ರಭಾಕರ್ ಮಗಳಲ್ಲ…
(ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್)
ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಹಾಡನ್ನ ಕಲಿತುಕೊಳ್ಳಲು ಟೇಪ್ ರೆಕಾರ್ಡ್ ಕೊಟ್ಟಿದ್ದರು. ಇದನ್ನ ಕೇಳಿಯೇ ಅನು ಪ್ರಭಾಕರ್ ಗಾಬರಿ ಆಗಿದ್ದರು.
ಒಂದೇ ಉಸಿರಿನಲ್ಲಿರೋ ಈ ಹಾಡನ್ನ ಕಲಿಯೋದು ಹೇಗೆ ಅನ್ನೋದು ಟೆನ್ಷನ್ ಕೂಡ ಇವರಿಗಿತ್ತು ನೋಡಿ. ಶಾಂತಿ ಕ್ರಾಂತಿ ಚಿತ್ರದಲ್ಲಿ ಅನು ಪ್ರಭಾಕರ್ ಬಾಲ ನಟಿ ಆಗಿಯೇ ನಟಿಸಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್, ನಾಗಾರ್ಜುನ್ ಅವರೊಟ್ಟಿಗಿನ ಕೆಲಸವನ್ನು ಇವರು ನೆನಪಿಸಿಕೊಂಡಿದ್ದಾರೆ.
ಅನು ಪ್ರಭಾಕರ್ ಅವರಿಗೆ ಒಂದು ಕನಸು ಬಿದ್ದಿತ್ತು. ಅಪ್ಪ ತಾವು ಇರೋ ಮನೆಯಲ್ಲಿ ಸತ್ತು ಹೋಗ್ತಾರೆ. ಹಾಗಂತಲೇ ರಾತ್ರಿ ಮಲಗಿದಾಗ ಇವರಿಗೆ ತಮ್ಮ ತಂದೆ ಬಗ್ಗೆ ಕನಸು ಕಂಡಿದ್ದರು.
ಆ ಒಂದು ಕನಸು ಬೆಳಗ್ಗೇನೆ ನೆನಪಿತ್ತು. ಆದರೆ, ಆ ಕನಸು ಮುಂದೆ ಕೆಲವು ದಿನಗಳಲ್ಲಿ ನಿಜವೇ ಆಯಿತು. ಪ್ರೀತಿಯ ಅಪ್ಪ ಹೋಗಿರೋದನ್ನ ಅಷ್ಟೆ ಬೇಸರದಿಂದಲೇ ಇಂದಿಗೂ ನೆನೆಯುತ್ತಾರೆ.
ಅನು ಪ್ರಭಾಕರ್ ಅವರಿಗೆ ಕನಸು ನೆನಪಿರುತ್ತವೆ. ರಾತ್ರಿ ಕಂಡ ಕನಸುಗಳು ಮರೆತು ಹೋಗಿರೋದಿಲ್ಲ. ಅವು ಬೆಳಗ್ಗೇನೂ ನೆನಪು ಇರುತ್ತವೆ. ಅದನ್ನು ಹೇಳಿಕೊಳ್ಳುವ ಅನು ಪ್ರಭಾಕರ್ ಅವರಿಗೆ ಒಂದು ಬೇಸರ ಇದೆ.
ಅನು ಪ್ರಭಾಕರ್ ಅವರು ಎರಡನೇ ಮದುವೆ ಆದರು. ನಟ ರಘು ಮುಖರ್ಜಿ ಅವರನ್ನ ವಿವಾಹ ಆದರು. ಆದರೆ, ಅದಕ್ಕೂ ಮೊದಲು ಅನು ಪ್ರಭಾಕರ್ ಅವರು ಅಭಿನಯ ಶಾರದೆ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನ ಮದುವೆ ಆಗಿದ್ದರು. 10 ವರ್ಷದ ಬಳಿಕ ಡಿವೋರ್ಸ್ ಪಡೆದರು.
ಕಾಮೆಂಟ್ ಹರ್ಟ್ ಮಾಡ್ತವೆ
(ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್)
ನಮ್ಮ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೂ ಕೆಟ್ಟದಾಗಿಯೇ ಕಾಮೆಂಟ್ ಮಾಡ್ತಾರೆ. ಒಂದು ಯುಟ್ಯೂಬ್ ಚಾನೆಲ್ ಅಲ್ಲಿ ಎರಡನೇ ಮದುವೆ ಆದ ನಟಿಯರು ಅನ್ನುವ ಸುದ್ದಿ ಇತ್ತು. ಅದರಲ್ಲಿ ನನ್ನ ಫೋಟೋನೂ ಇತ್ತು.
ಇದೆಲ್ಲ ಒಂದು ಮ್ಯಾಟರಾ ? ಹೀಗೆ ಪ್ರಶ್ನೆ ಮಾಡುವ ಅನು ಪ್ರಭಾಕರ್ ಅವರಿಗೆ ಕಾಮೆಂಟ್ಗಳು ಹರ್ಟ್ ಮಾಡ್ತವೆ. ನಮ್ಮ ಜೀವನದ ಬಗ್ಗೆ ಯಾರಿಗೂ ಗೊತ್ತೇ ಇರೋದಿಲ್ಲ. ಆದರೂ ಕಾಮೆಂಟ್ ಹಾಕ್ತಾರೆ. ಇದೆಷ್ಟು ಸರಿ ಅಂತಲೇ ಅನು ಪ್ರಭಾಕರ್ ಕೇಳ್ತಾರೆ.
ಅಭಿನಯ ಶಾರದೆ ಜಯಂತಿ ಅವರ ಬಗ್ಗೆನೂ ಮಾತನಾಡಿದ್ದಾರೆ. ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಜೊತೆಗೆ 10 ವರ್ಷ ಜೀವನ ಮಾಡಿದ್ದಾರೆ. ಈ ಒಂದು ಸಮಯದಲ್ಲಿ ಜಯಂತಿ ಅಮ್ಮ ತುಂಬಾನೆ ಸಪೋರ್ಟ್ ಮಾಡಿದ್ದಾರೆ.
ಅನು ಪ್ರಭಾಕರ್ ಅವರನ್ನ ನಟ ಪ್ರಭಾಕರ್ ಅಂತಲೇ ಅದೆಷ್ಟೋ ಜನ ತಿಳಿದುಕೊಳ್ತಾರೆ. ಆದರೆ, ಅನು ಪ್ರಭಾಕರ್ ಅವರು ಎಂ.ವಿ.ಪ್ರಭಾಕರ್ ಮತ್ತು ಗಾಯಿತ್ರಿ ಪ್ರಭಾಕರ್ ಅವರ ಮಗಳಾಗಿದ್ದಾರೆ. ಅಂದ್ಹಾಗೆ ವಿನೋದ್ ಪ್ರಭಾಕರ್ ಅವರಿಗೂ ನಿಮ್ಮ ಅಕ್ಕ ಚೆನ್ನಾಗಿದ್ದಾರಾ ಅಂತಲೂ ಕೇಳ್ತಾರೆ. ಈ ವಿಷಯವನ್ನ ವಿನೋದ್ ಪ್ರಭಾಕರ್ ಹೇಳಿರೋದು ಇದೆ.
ಈ ತಮ್ಮನಿಗೆ ನಾನು ಇತ್ತೀಚಿಗೆ ಒಂದು ಅವಾರ್ಡ್ ಫಂಕ್ಷನ್ ಅಲ್ಲಿ ಅವಾರ್ಡ್ ಕೂಡ ಕೊಟ್ಟಿದ್ದೇನೆ ಅಂತಲೂ ಅನು ಪ್ರಭಾಕರ್ ಇಲ್ಲಿ ಹೇಳಿಕೊಂಡಿದ್ದಾರೆ. ಈ ತರದ ಸುಮಾರು ವಿಚಾರಗಳನ್ನ ಅನು ಪ್ರಭಾಕರ್ ಹೇಳಿಕೊಂಡಿದ್ದಾರೆ.
ಆರ್.ಜೆ.ರಾಜೇಶ್ ಅವರ Rajesh Reveals ಪಾಡ್ ಕಾಡ್ಕಾಸ್ಟ್ ಅಲ್ಲಿಯೇ ಈ ಎಲ್ಲ ವಿಚಾರಗಳನ್ನ ಅನು ಪ್ರಭಾಕರ್ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.












