ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ಕ್ವಾಡ್ರುಪ್ಲಿಂಗ್ (ಚತುಷ್ಪಥ) ಯೋಜನೆಯಡಿಯಲ್ಲಿ ನಡೆಯುತ್ತಿರುವ ವೈಟ್‌ಫೀಲ್ಡ್ ಯಾರ್ಡ್ (ಹಂತ 1) ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಬರುವ ಕೆಲವು ವಾರಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಾಸ ಮಾಡಲಾಗಿದೆ.
ಮುಂದಿನ ಕೆಲವು ದಿನಗಳವರೆಗೆ ಒಟ್ಟು 42 ರೈಲುಗಳು ಸಂಪೂರ್ಣವಾಗಿ ರದ್ದಾಗಿವೆ. ಇದರಲ್ಲಿ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ 27 ಮೆಮು (MEMU) ರೈಲುಗಳೇ ಸೇರಿವೆ ಎಂಬುದು ಗಮನಾರ್ಹ.
* ಬೆಂಗಳೂರು – ಬಂಗಾರಪೇಟೆ – ಬೆಂಗಳೂರು
* ಬಂಗಾರಪೇಟೆ – ಬೆಂಗಳೂರು – ಬಂಗಾರಪೇಟೆ
* ಬಂಗಾರಪೇಟೆ – ಎಸ್‌ಎಂವಿಟಿ (SMVT) – ಬಂಗಾರಪೇಟೆ
* ಬಂಗಾರಪೇಟೆ – ವೈಟ್‌ಫೀಲ್ಡ್ – ಬಂಗಾರಪೇಟೆ
* ವೈಟ್‌ಫೀಲ್ಡ್ – ಮಾರಿಕುಪ್ಪಂ – ವೈಟ್‌ಫೀಲ್ಡ್
* ಬಾಣಸವಾಡಿ – ಕುಪ್ಪಂ – ಬಾಣಸವಾಡಿ
* ಕುಪ್ಪಂ – ಬೆಂಗಳೂರು – ಕುಪ್ಪಂ
* ಕೆ.ಆರ್.ಪುರ – ಕುಪ್ಪಂ – ಕೆ.ಆರ್.ಪುರ
* ಮಾರಿಕುಪ್ಪಂ – ಕೆ.ಆರ್.ಪುರ – ಮಾರಿಕುಪ್ಪಂ
* ಬೆಂಗಳೂರು – ಮಾರಿಕುಪ್ಪಂ – ಬೆಂಗಳೂರು
* ಬೆಂಗಳೂರು – ಜೋಲಾರ್‌ಪೆಟ್ಟೈ – ಬೆಂಗಳೂರು
* ಕುಪ್ಪಂ – ಬಂಗಾರಪೇಟೆ – ಕುಪ್ಪಂ
* ಎಂಜಿಆರ್ ಚೆನ್ನೈ ಸೆಂಟ್ರಲ್ – ಅಶೋಕಪುರಂ – ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
* ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಎಕ್ಸ್‌ಪ್ರೆಸ್
* ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು – ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
* ಯಶವಂತಪುರ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ – ಯಶವಂತಪುರ ಎಕ್ಸ್‌ಪ್ರೆಸ್
* ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೊಲ್ಲಂ ಎಕ್ಸ್‌ಪ್ರೆಸ್ – ಎಸ್‌ಎಸ್‌ಎಸ್ ಹುಬ್ಬಳ್ಳಿ
* ಮೈಸೂರು – ಎಂಜಿಆರ್ ಚೆನ್ನೈ – ಮೈಸೂರು
* ದಾನಾಪುರ – ಕೆ.ಆರ್.ಪುರ – ದಾನಾಪುರ ಎಕ್ಸ್‌ಪ್ರೆಸ್
ಲೇಟಾಗಿ ಬರುವ, ಭಾಗಶಃ ರದ್ದಾಗುವ ರೈಲುಗಳ ಕಥೆಯೇನು?
ಭಾಗಶಃ ರದ್ದು (7 ರೈಲುಗಳು): ಅನಂತಪುರ – ಕೆಎಸ್ಆರ್ ಬೆಂಗಳೂರು ಮೆಮು ರೈಲು ಸೇರಿದಂತೆ ಒಟ್ಟು 7 ರೈಲುಗಳ ಸಂಚಾರ ಜುಲೈ 3ರ ನಂತರ ಭಾಗಶಃ ರದ್ದಾಗಲಿವೆ.
ಟೈಮಿಂಗ್ಸ್ ಚೇಂಜ್ (13 ರೈಲುಗಳು): ಒಟ್ಟು 13 ರೈಲುಗಳು ಹೊರಡುವ ನಿಲ್ದಾಣದಿಂದಲೇ 60 ರಿಂದ 120 ನಿಮಿಷಗಳಷ್ಟು (1 ರಿಂದ 2 ಗಂಟೆ) ತಡವಾಗಿ ಹೊರಡಲಿವೆ. ಜೊತೆಗೆ ಮಾರ್ಗಮಧ್ಯೆ ಕಾಮಗಾರಿ ನಡೆಯುವಲ್ಲಿ ಕೆಲ ನಿಮಿಷ ಸ್ಥಗಿತಗೊಂಡು ವಿಳಂಬವಾಗಿ ಚಲಿಸಲಿವೆ.
ರೂಟ್ ಬದಲು (23 ರೈಲುಗಳು): ಕೆ.ಆರ್ ಪುರಂ – ವೈಟ್‌ಫೀಲ್ಡ್ ಮಾರ್ಗದಲ್ಲಿ ಸಂಚರಿಸುವ ಬರೋಬ್ಬರಿ 23 ರೈಲುಗಳನ್ನು ಬೇರೆ ಮಾರ್ಗದಲ್ಲಿ (Divert) ಓಡಿಸಲು ನಿರ್ಧರಿಸಲಾಗಿದೆ.
ಈ ಕಾಮಗಾರಿಗಳು ಶೀಘ್ರದಲ್ಲೇ ಮುಗಿಯಲಿದ್ದು, ಜುಲೈ 7 ರಿಂದ ಎಲ್ಲಾ ರೈಲುಗಳು ಎಂದಿನಂತೆ ನಿಗದಿತ ಸಮಯಕ್ಕೆ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಲ್ಲಿಯವರೆಗೆ ಪ್ರಯಾಣಿಕರು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕಿದೆ!












