Happy Life: ಒತ್ತಡದ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ, ಆಟೋ ಓಡಿಸಿ ಈ ಮಹಿಳೆ ಗಳಿಸುತ್ತಿರುವುದು ಎಷ್ಟು ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram)


Last Updated:

ಐಟಿ ಉದ್ಯೋಗ ತೊರೆದು ಆಟೋ ಓಡಿಸುತ್ತಿರುವ ಬೆಂಗಳೂರಿನ ಮಹಿಳೆ ತಿಂಗಳಿಗೆ ಸುಮಾರು 60 ಸಾವಿರ ಸಂಪಾದನೆ, ಕಡಿಮೆ ಒತ್ತಡದ ಜೀವನದಿಂದ ಸಂತೋಷ, ಕಥೆ ಇಂಟರ್ನೆಟ್‌ನಲ್ಲಿ ವೈರಲ್.

ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram)
ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram)

ಬೆಂಗಳೂರು (Bengaluru) ಅಂದ್ರೆ ಸಾಕು, ಕಣ್ಣಮುಂದೆ ಬರೋದು ಗಗನಚುಂಬಿ ಐಟಿ (IT) ಪಾರ್ಕ್‍ಗಳು, ದುಬಾರಿ ಲ್ಯಾಪ್‍ಟಾಪ್‍ಗಳು (Laptop) ಮತ್ತು ಸ್ಟ್ರೆಸ್ ತುಂಬಿದ ಕಾರ್ಪೊರೇಟ್ ಲೈಫ್ (Life). ಆದರೆ ಇಲ್ಲೊಬ್ಬ ಮಹಿಳೆ ಎಲ್ಲವನ್ನೂ ತೊರೆದು, ಐಟಿ ಉದ್ಯೋಗಕ್ಕಿಂತ ಆಟೋ (Auto) ಓಡಿಸುವುದೇ ಬೆಸ್ಟ್ ಎಂದು ಸಾಬೀತುಪಡಿಸಿದ್ದಾರೆ.

ನೆಮ್ಮದಿಯೇ ಮುಖ್ಯ

ಹೌದು, ಈ ಮಹಿಳೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವರ್ಷಗಟ್ಟಲೆ ದುಡಿದವರು. ಕೈತುಂಬಾ ಸಂಬಳವಿದ್ದರೂ, ಮಾನಸಿಕ ಒತ್ತಡ, ಎಂಡ್‍ಲೆಸ್ ಮೀಟಿಂಗ್‍ಗಳು ಮತ್ತು ಪರ್ಸನಲ್ ಲೈಫ್ ಮರೆತಿದ್ದ ಅವರಿಗೆ ಕಾರ್ಪೊರೇಟ್ ಜೀವನ ಅಕ್ಷರಶಃ ನರಕವಾಗಿತ್ತು. ಕೊನೆಗೆ, ಇದೆಲ್ಲಾ ಸಾಕು, ನೆಮ್ಮದಿಯೇ ಮುಖ್ಯ ಎಂದು ನಿರ್ಧರಿಸಿ, ಐಟಿ ಸಂಸ್ಥೆಗೆ ಗುಡ್‍ಬೈ ಹೇಳಿ ಆಟೋರಿಕ್ಷಾದ ಸ್ಟಿಯರಿಂಗ್ ಹಿಡಿದಿದ್ದಾರೆ ಎಂದು ಡೈಜಿವರ್ಲ್ಡ್.ಕಾಮ್ ವೆಬ್‍ಸೈಟ್ ವರದಿ ಮಾಡಿದೆ.
60 ಸಾವಿರ ಆದಾಯ, ಆದರೂ ನೆಮ್ಮದಿ

ಕೆಲವರು ಕೇಳಬಹುದು, ಐಟಿ ಜಾಬ್ ಬಿಟ್ಟು ಆಟೋ ಓಡಿಸಿದ್ರೆ ದುಡ್ಡು ಬರುತ್ತಾ? ಎಂದು. ಆದರೆ, ಇವರು ಆಟೋ ಓಡಿಸುತ್ತಲೇ ತಿಂಗಳಿಗೆ ಅಂದಾಜು 60,000 ರೂಪಾಯಿ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈಗ ತಮ್ಮದೇ ಆದ ವೇಳಾಪಟ್ಟಿಯಲ್ಲಿ ಕೆಲಸ ಮಾಡಬಹುದು, ಯಾರಿಗೂ ಉತ್ತರ ಹೇಳುವ ಹಂಗಿಲ್ಲ, ಬಾಸ್‍ನ ಕಿರಿಕಿರಿ ಇಲ್ಲ. ನಾನು ಮೊದಲಿಗಿಂತ ಈಗ ತುಂಬಾ ಸಂತೋಷವಾಗಿದ್ದೇನೆ, ಕೆಲಸದ ಒತ್ತಡವಿಲ್ಲದ ಶಾಂತಿಯುತ ಜೀವನ ಸಿಕ್ಕಿದೆ ಎನ್ನುತ್ತಾರೆ ಈ ದಿಟ್ಟ ಮಹಿಳೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಈ ಕಥೆ ಈಗ ಇಂಟರ್ನೆಟ್‍ನಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಇವರ ನಿರ್ಧಾರವನ್ನು ಹುಬ್ಬೇರಿಸಿ ನೋಡುತ್ತಿದ್ದಾರೆ. ಕೆಲವರು, 18 ವರ್ಷ ಐಟಿ ಕ್ಷೇತ್ರದಲ್ಲಿ ಇದ್ದರೂ ಆ ಒತ್ತಡ ಬಿಡಲಾಗಲ್ಲ, ಇವರ ಧೈರ್ಯ ಮೆಚ್ಚಲೇಬೇಕು ಎಂದು ಶ್ಲಾಘಿಸುತ್ತಿದ್ದಾರೆ. ಇನ್ನು ಕೆಲವರು, ಈಗಾಗಲೇ ಇವರ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯ ಇರಬೇಕು, ಅದಕ್ಕೇ ಈ ಧೈರ್ಯ ಎಂದು ತಮ್ಮದೇ ಆದ ತರ್ಕಗಳನ್ನು ಹರಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed