Kevin Kunta: ಮೆಗಾ ಪವರ್ ಸ್ಟಾರ್‌ಗೆ ಇವರೇ ರಕ್ಷಾಕವಚ! ಯಾರು ಈ ರಗಡ್ ಬಾಡಿಗಾರ್ಡ್? ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ? | | ACTPnews

ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ


Last Updated:

ಮೆಗಾ ಪವರ್ ಸ್ಟಾರ್‌ ರಾಮ್ ಚರಣ್ ನೆರಳಿನಂತೆ ಅವರ ಜೊತೆಗೆ ನಡೆಯುತ್ತಿರುವ ಬಾಡಿಗಾರ್ಡ್ ವೈರಲ್ ಆಗುತ್ತಿದ್ದಾರೆ. ಅಷ್ಟಕ್ಕೂ ರಾಮ್ ಚರಣ್ ಅವರಿಗೆ ರಕ್ಷಾಕವಚವಾಗಿರುವ ಈ ಹೊಸ ಬಾಡಿಗಾರ್ಡ್ ಯಾರು ಎಂದು ತಿಳಿದರೆ ನೀವು ಬೆಚ್ಚಿಬೀಳುವುದು ಗ್ಯಾರೆಂಟಿ.

ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ
ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ

ಗ್ಲೋಬಲ್ ಸ್ಟಾರ್ (Global Star) ರಾಮ್ ಚರಣ್ (Ram Charan) ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಪೆದ್ದಿ’ (Peddi) ಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಹು ಭಾಷೆಗಳಲ್ಲಿ ರಿಲೀಸ್ (Release) ಆಗಲು ಸಜ್ಜಾಗಿರುವ ಈ ಚಿತ್ರವು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ರಾಮ್ ಚರಣ್ ಅವರ ಲುಕ್ (Look) ಎಲ್ಲರ ಗಮನ ಸೆಳೆದಿದೆ. ಚಿತ್ರದ ಪ್ರಚಾರದಲ್ಲಿಯೂ ರಾಮ್ ಚರಣ್ ಅವರ ರಗಡ್ ಲುಕ್ ಟ್ರೆಂಡಿಂಗ್ (Trending) ಆಗುತ್ತಿದ್ದರೆ, ನೆರಳಿನಂತೆ ಅವರ ಜೊತೆಗೆ ನಡೆಯುತ್ತಿರುವ ಬಾಡಿಗಾರ್ಡ್ (Bodyguard) ಕೂಡ ವೈರಲ್ ಆಗಿದ್ದಾರೆ. ಮೆಗಾ ಪವರ್ ಸ್ಟಾರ್‌ (Mega Power Star) ಗೆ ರಕ್ಷಾಕವಚವಾಗಿರುವ ಈ ಹೊಸ ಬಾಡಿಗಾರ್ಡ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರಾಮ್ ಚರಣ್ ಅವರ ಹೊಸ ಬಾಡಿಗಾರ್ಡ್ ಬಗ್ಗೆ ಕೇಳಿದ್ರೆ ಬೆಚ್ಚಿಬೀಳುವುದು ಗ್ಯಾರೆಂಟಿ. ಹೌದು, ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ರಾಮ್ ಚರಣ್ ಜೊತೆ ಸದಾ ಕಾಣಿಸಿಕೊಳ್ಳುವ ಈ ವ್ಯಕ್ತಿ ಸಾಮಾನ್ಯರಲ್ಲ. ಅವರ ಹೆಸರು ಕೆವಿನ್ ಕುಂಟಾ. ಹಾಲಿವುಡ್ ಆ್ಯಕ್ಷನ್ ಹೀರೋನಂತೆ ಕಾಣುವ, ಸಿಕ್ಸ್ ಪ್ಯಾಕ್ ಬಾಡಿ ಹೊಂದಿರುವ ಕೆವಿನ್ ಈಗ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಕೆವಿನ್ ಕುಂಟಾ ಯಾರು?

ಕೆವಿನ್ ಕುಂಟಾ ಮೂಲತಃ ಆಫ್ರಿಕನ್ ದೇಶವಾದ ಗ್ಯಾಂಬಿಯಾದವರಾಗಿದ್ದು, ಪ್ರಸ್ತುತ ಇಟಲಿಯ ಫ್ಲಾರೆನ್ಸ್‌ನಲ್ಲಿ ನೆಲೆಸಿದ್ದಾರೆ. ಕೆವಿನ್ ಕುಂಟಾ ಅವರು ಒಬ್ಬ ವೃತ್ತಿಪರ ಮಿಶ್ರ ಸಮರ ಕಲೆಗಳ (MMA) ಫೈಟರ್. ಹೀಗಾಗಿ ಎಂಎಂಎ  ಅಭಿಮಾನಿಗಳಿಗೆ ಅವರ ಹೆಸರು ಪರಿಚಿತ. ಅವರು 2021 ರಲ್ಲಿ ಇಟಾಲಿಯನ್ ರಾಷ್ಟ್ರೀಯ MMA ತಂಡವನ್ನು ಸಹ ಪ್ರತಿನಿಧಿಸಿದ್ದು, ಇಟಾಲಿಯನ್ ಎಂಎಂಎ ಬೆಲ್ಟ್ ಅನ್ನು ಸಹ ಗೆದ್ದಿದ್ದಾರೆ. ಈಗ, ರಾಮ್ ಚರಣ್ ಭದ್ರತೆಗಾಗಿ ಅಂತಾರಾಷ್ಟ್ರೀಯ ಮಟ್ಟದ ಫೈಟರ್ ಅನ್ನು ನೇಮಿಸಿಕೊಂಡಿರುವುದು ಟಾಲಿವುಡ್‌ನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ಕೆವಿನ್ ಕುಂಟಾ ಸಂಬಳ ಎಷ್ಟು?

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಕೆವಿನ್ ಅವರಿಗೆ ದಿನಕ್ಕೆ ಸುಮಾರು 2 ಲಕ್ಷ ರೂ. ಅಂದರೆ, ತಿಂಗಳಿಗೆ ಸುಮಾರು 60 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಇದು ನಿಜವಾಗಿದ್ದರೆ, ಕೆವಿನ್ ಕುಂಟಾ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಅಂಗರಕ್ಷಕರ ಪಟ್ಟಿಗೆ ಸೇರುತ್ತಾರೆ. ಈಗಾಗಲೇ ಕೆವಿನ್ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಟಾಲಿವುಡ್​​ನಲ್ಲಿ ಹೊಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೆವಿನ್ ಬಗ್ಗೆ ಚರ್ಚೆ ಆಗುತ್ತಿದೆ.

ಯಾವ ಹೀರೋ ಕಮ್ಮಿಯಿಲ್ಲ

ಇತ್ತೀಚೆಗೆ ನಡೆದ ಪೆಡ್ಡಿ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಕೆವಿನ್, ಚರಣ್ ಸುತ್ತಮುತ್ತಲಿನ ಜನಸಂದಣಿ ಮತ್ತು ಭದ್ರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಕಂಡುಬಂದಿತು . ಅವರ ಎತ್ತರದ ನಿಲುವು, ಆಕರ್ಷಕ ನೋಟ ಮತ್ತು ಶಾಂತ ವರ್ತನೆ ಸೋಶಿಯಲ್ ಮೀಡಿಯಾಗಳಲ್ಲಿ ಕ್ಷಣಾರ್ಧದಲ್ಲೇ ವೈರಲ್ ಆಯಿತು. ಕೆವಿನ್ ಕುಂಟಾ ಕೇವಲ ಬಾಡಿಗಾರ್ಡ್ ಅಲ್ಲ, ಅವರ ಡ್ರೆಸ್ಸಿಂಗ್ ಶೈಲಿಯೂ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ರಾಮ್ ಚರಣ್ ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ಕ್ಯಾಶುಯಲ್ ಉಡುಪುಗಳಲ್ಲಿ ಕಾಣಿಸಿಕೊಂಡರೆ, ಕೆವಿನ್ ಪರಿಪೂರ್ಣವಾದ ಫಿಟ್ಟಿಂಗ್ ಸೂಟ್‌ಗಳು ಮತ್ತು ಫಾರ್ಮಲ್ ಉಡುಗೆಯಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಾರೆ. ಹೀಗಾಗಿ ಕೆವಿನ್ ಅವರನ್ನು ಅತ್ಯಂತ ಸ್ಟೈಲಿಶ್ ಸೆಲೆಬ್ರಿಟಿ ಬಾಡಿಗಾರ್ಡ್‌ಗಳಲ್ಲಿ ಒಬ್ಬರು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed