Meghana Raj: ಮತ್ತೆ ಕಿರುತೆರೆಗೆ ಬಂದ ಮೇಘನಾ ರಾಜ್! ‘ಕಿಚನ್‌’ನಲ್ಲಿ ‘ಕ್ವಾಟ್ಲೆ’ ಮಾಡೋರಿಗೆ ಕ್ಲಾಸ್ ತಗೋತಾರೆ ಚಿರು ಪತ್ನಿ! | | ACTPnews

ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ!


Last Updated:

ಕ್ವಾಟ್ಲೆ ಕಿಚನ್ ಮತ್ತೆ ಶುರು ಆಗಿದೆ. ಮೇಘನಾ ರಾಜ್ ಜಡ್ಜ್ ಆಗಿದ್ದಾರೆ. ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ನಿರೂಪಣೆ ಮಾಡುತ್ತಿದ್ದಾರೆ. ಈ ಶೋದಲ್ಲಿ ಈ ಸಲ ಮಜಾ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

 ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ!
ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ!

ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ (Kwatle Kitchen) ಮತ್ತೆ ಶುರು ಆಗುತ್ತಿದೆ. ಕ್ವಾಟ್ಲೆ ಕಿಚನ್-2 (Kwatle Kitchen-2) ಅಂತಲೆ ಇದು ಶುರು ಆಗುತ್ತಿದೆ. ಸ್ಪರ್ಧಿಗಳ ಲಿಸ್ಟ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಜಡ್ಜ್‌ ಮತ್ತು ನಿರೂಪಕರಲ್ಲೂ ಬದಲಾವಣೆ ಇದೆ. ಹೌದು, ಮೇಘನಾ ರಾಜ್ ಈ ಸಲ ಜಡ್ಜ್ ಆಗಿ ಬಂದಿದ್ದಾರೆ. ಸ್ಪರ್ಧಿಗಳಲ್ಲಿ ಓಂ ಪ್ರಕಾಶ್ ರಾವ್ ಇದ್ದಾರೆ. ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಇದ್ದಾರೆ. ಇದೇ ಬಿಗ್ ಬಾಸ್‌ನ ಸೂರಜ್ (Suraj) ಕೂಡ ಈ ಒಂದು ಶೋಗೆ ಬಂದಿದ್ದಾರೆ. ಈ ಒಂದು ಕ್ವಾಟ್ಲೆ ಕಿಚನ-2 (Kwatle Kitchen-2) ಪ್ರೋಮೋ ಕೂಡ ರಿಲೀಸ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ನೀವು ಯುಟ್ಯೂಬರಾ?

ರಕ್ಷಿತಾ ಶೆಟ್ಟಿ ಈ ಒಂದು ಪ್ರಶ್ನೆ ಕೇಳ್ತಾರೆ. ಇದನ್ನ ಯಾರಿಗೆ ಕೇಳಿರೋದು ಗೊತ್ತಾ? ನೇರವಾಗಿಯೇ ಈ ಒಂದು ಪ್ರಶ್ನೆಯನ್ನ ಜಡ್ಜ್ ಮೇಘನಾ ರಾಜ್ ಅವರಿಗೇನೆ ಕೇಳ್ತಾರೆ.
Colors Kannada Kwatle Kitchen-2 Promo Release

ವಾರಾಂತ್ಯದಲ್ಲಿ ಪ್ರಸಾರ

(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್)

ನಾನು ಯುಟ್ಯೂಬರ್ ಆಗಿದ್ದೇನೆ. ನೀವು ಯುಟ್ಯೂಬರ್ ಅಲ್ವೇ? ಅಂತಲೇ ಕೇಳ್ತಾರೆ. ರಕ್ಷಿತಾ ಶೆಟ್ಟಿ ಅವರ ಈ ಪ್ರಶ್ನೆಗೆ ಮೇಘನಾ ರಾಜ್ ಶಾಕ್ ಆಗುತ್ತಾರೆ. ಮೇಘನಾ ರಾಜ್ ಕುಮಾರ್ ಕಂಟೆಂಟ್ ಕ್ರಿಯೇಟ್ ಮಾಡ್ತಾರೆ. ಅದನ್ನ ಯುಟ್ಯೂಬ್‌ಗೆ ಹಾಕೋದು ಇದೆ.

ಓಂ ಪ್ರಕಾಶ್ ರಾವ್

ಈ ಒಂದು ಕ್ವಾಟ್ಲೆ ಕಿಚನ್-2 ಅಲ್ಲಿ ಈ ಸಲ ಸ್ಪರ್ಧೀ ಆಗಿ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಬಂದಿದ್ದಾರೆ. ತಮ್ಮ ಎಂದಿನ ರೀತಿಯ ಶೈಲಿಯಲ್ಲಿಯೇ ಮಾತಿನ ಮತ್ತು ಬೈಗುಳದ ಕಿಕ್ ಕೊಡುತ್ತಿದ್ದಾರೆ.

ಈ ಕಾರ್ಯಕ್ರಮದ ನಿರೂಪಕಿ ಸುಷ್ಮಾ ಅವರು ಇವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಯಾಕೆ ಸರ್ ನಿಮ್ಮನ್ನ ನೋಡಿದರೆ ಎಲ್ಲರಿಗೂ ಯಾಕೆ ಭಯ ಅಂತ ಕೇಳುತ್ತಾರೆ.

ಆಗ ಓಂ ಪ್ರಕಾಶ್ ರಾವ್ ಕೇಳ್ತಾರೆ. ನಾನು ಯಾರಿಗಾದರೂ ಬೈದಿದೇನಾ? ತಪ್ಪಾಗಿ ನಡೆದುಕೊಂಡಿದ್ದೇನಾ? ಹಾಗಾದ್ರೆ ನೀವೇ ಕೇಳಿ ನಿಮಗೇನು ಬಂದಿದೆ ದೊಡ್ಡರೋಗ ಅಂತಲೇ ಓಂ ಪ್ರಕಾಶ್ ರಾವ್ ಹೇಳುತ್ತಾರೆ.

ಸೂರಜ್ ಸಿಂಗ್

ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಕೂಡ ಈ ಶೋಗೆ ಬಂದಿದ್ದಾರೆ. ದೊಡ್ಮನೆಯಲ್ಲಿಯೇ ಅದೆಷ್ಟೋ ಜನರನ್ನ ಸಹಿಸಿಕೊಂಡಿದ್ದೇನೆ.

Colors Kannada Kwatle Kitchen-2 Promo Release

ಮಿಸ್ಸಿಂಗ್ ಅನುಪಮಾ ಗೌಡ

(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್)

ಇನ್ನು ಇಲ್ಲಿ ಕೊಡುವ ಕ್ವಾಟ್ಲೆಯ ವಿಚಾರ ಏನೂ ದೊಡ್ಡದಲ್ಲ. ಇದನ್ನೂ ಸಹಿಸಿಕೊಳ್ಳುತ್ತೇನೆ ಅಂತಲೇ ಸೂರಜ್ ಸಿಂಗ್ ಹೇಳುತ್ತಾರೆ.

ವಾರಾಂತ್ಯದಲ್ಲಿ ಪ್ರಸಾರ

ಕ್ವಾಟ್ಲೆ ಕಿಚನ್-2 ಶನಿವಾರ ಹಾಗೂ ಭಾನುವಾರ ಪ್ರಸಾರ ಆಗುತ್ತಿದೆ. ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಆಗುತ್ತಿದೆ. ಈ ವಿಷಯವನ್ನು ಹೇಳುವ ಪ್ರೋಮೋ ಕೂಡ ರಿಲೀಸ್ ಆಗಿದೆ.

ಮಿಸ್ಸಿಂಗ್ ಅನುಪಮಾ ಗೌಡ

ಈ ಹಿಂದಿನ ಕ್ವಾಟ್ಲೆ ಕಿಚನ್ ಶೋವನ್ನ ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದರು. ಆದರೆ, ಈ ಸಲ ಆ ಜಾಗದಲ್ಲಿ ಸುಷ್ಮಾ ಬಂದಿದ್ದಾರೆ. ಇವರ ಜೋಡಿಯಾಗಿ ಮತ್ಯಾರು ಇರ್ತಾರೆ ಅನ್ನುವ ಪ್ರಶ್ನೆನೂ ಇದೆ. ಇಲ್ಲವೆ ಸುಷ್ಮಾ ಅವರೊಬ್ಬರೇ ಇರ್ತಾರಾ ಅನ್ನುವ ಕುತೂಹಲವೂ ಇದೆ.

ಒಟ್ಟಾರೆ, ಕ್ವಾಟ್ಲೆ ಕಿಚನ್-2 ಶೋ ಕಲರ್ಸ್ ಕನ್ನಡದಲ್ಲಿ ಮತ್ತೆ ಬರ್ತಿದೆ. ಈ ಶೋ ಪ್ರಿಯರಿಗೆ ಮತ್ತೊಮ್ಮೆ ಇದನ್ನ ಎಂಜಾಯ್ ಮಾಡುವ ಅವಕಾಶ ಸಿಗ್ತಾ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed