RCB ಬ್ಲೌಸ್‌ಗೆ ಈಗ ಸಖತ್ ಡಿಮ್ಯಾಂಡ್! ಬ್ಲೂ ರೆಡ್, ಗೋಲ್ಡ್ ಕಲರ್‌ ರವಿಕೆಯಲ್ಲಿ ಮಿಂಚಿದ ಸುಂದರಿ | ಕ್ರೀಡಾ ಸುದ್ದಿ | ACTPnews

ಡಿಸೈನರ್​ ಅಂಜಲಿ


Last Updated:

RCB ತಂಡ ಫೈನಲ್ ತಲುಪಿದೆ. ಕ್ರೇಜ್ ಡಬಲ್ ಆಗಿದೆ. ಆರ್​ಸಿಬಿ ಫೈನಲ್ ಮ್ಯಾಚ್ ಹಿನ್ನೆಲೆ ಮಾಡೆಲ್ ಒಬ್ಬರು RCB ಸ್ಟೈಲಿಷ್ ಬ್ಲೌಸ್ ತೊಟ್ಟು ಮಿಂಚಿದ್ದಾರೆ. ನೆಟ್ಟಿಗರ ಗಮನ ಸೆಳೆದಿದ್ದಾರೆ.

ಡಿಸೈನರ್​ ಅಂಜಲಿ
ಡಿಸೈನರ್​ ಅಂಜಲಿ

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್​ ಅನ್ನು ಹಬ್ಬದಂತೆ (Festival) ಆಚರಿಸಲಾಗುತ್ತದೆ. ಇನ್ನು ಐಪಿಎಲ್​​ನಲ್ಲಿ ಆರ್​ಸಿಬಿ (Royal Challengers Bengaluru) ಕ್ರೇಜ್​ ಬಗ್ಗೆ ಮಾತನಾಡೆದೆ ಬೇಡ ಬಿಡಿ, ಆರ್​ಸಿಬಿ ತಂಡ ಇಡೀ ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಫ್ಯಾನ್​ ಬೇಸ್​​ (Fan Base) ಹೊಂದಿರುವ ತಂಡವಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಫೈನಲ್​ ತಲುಪಿದೆ. ಕ್ರೇಜ್​ ಡಬಲ್​ ಆಗಿದೆ. ಆರ್​ಸಿಬಿ ಫೈನಲ್​ ಮ್ಯಾಚ್​ ಹಿನ್ನೆಲೆ ಮಾಡೆಲ್​ ಒಬ್ಬರು ಆರ್​ಸಿಬಿ ಸ್ಟೈಲಿಷ್​ ಬ್ಲೌಸ್​ ತೊಟ್ಟು ಮಿಂಚಿದ್ದಾರೆ. ನೆಟ್ಟಿಗರ ಗಮನ ಸೆಳೆದಿದ್ದಾರೆ.

ಬ್ಲೌಸ್​ನಲ್ಲಿ ಮೂಡಿದ ಆರ್​ಸಿಬಿ

ಬೆಂಗಳೂರಿನ ಮಾಡೆಲ್ ಕಮ್​ ಡಿಸೈನರ್ ಅಂಜಲಿ ಅವರು RCB ಥೀಮ್​ನ ಸ್ಟೈಲಿಷ್​​ ಬ್ಲೌಸ್ ಮತ್ತು ಸ್ಯಾರಿಯನ್ನು ವಿನ್ಯಾಸಗೊಳಿಸಿದ್ದು ನೆಟ್ಟಿಗರ ಗಮನ ಸೆಳೆದಿದೆ. ಸಿನಿ ತಾರೆಯರ ಮಾಡೆಲ್ ಡಿಸೈನರ್ ಆಗಿರುವ ಅಂಜಲಿ ಅವರು ಆರ್​ಸಿಬಿ ತಂಡದ ಮೇಲಿನ ತಮ್ಮ ಅಪ್ಪಟ ಅಭಿಮಾನವನ್ನು ಪ್ರದರ್ಶಿಸಿದ್ದಾರೆ. ರಾಯಲ್​ ಚಾಲೆಂಜರ್ಸ್​ ತಂಡದ ಜೆರ್ಸಿಯ ಬಣ್ಣಗಳಾದ ಬ್ಲೂ, ರೆಡ್​ ಮತ್ತು ಗೋಲ್ಡ್ ಕಲರ್​ನಲ್ಲಿ ಬ್ಲೌಸ್​​ ಸಿದ್ಧಪಡಿಸಿದ್ದಾರೆ. ಅಲ್ಲದೇ ಬ್ಲೌಸ್​ನಲ್ಲಿ ಆರ್​ಸಿಬಿ ಅಭಿಮಾನಿಗಳ ಫೇವರಿಟ್​ ಸ್ಲೋಗನ್​ ‘ಈ ಸಲ ಕಪ್ ನಮ್ದೆ’ ಎಂದು ಬರೆಯಲಾಗಿದೆ.

ಆರ್​ಸಿಬಿ ಫ್ಯಾನ್ಸ್​ಗಳಿಗೆ ಬೆಂಗಳೂರು ಪೊಲೀಸರು ಶಾಕ್​!

ಇಂದು ಐಪಿಎಲ್ ಫೈನಲ್ ಪಂದ್ಯ ಹಿನ್ನಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆದಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ರಾತ್ರಿ 9:30 ರಿಂದಲೇ ಎಲ್ಲಾ ಪೊಲೀಸರು ರಸ್ತೆಯಲ್ಲಿ ಇರಬೇಕು, ಹೊಯ್ಸಳ ವಾಹನಗಳು ಪಂದ್ಯ ಮುಗಿಯೋವರೆಗೂ ರೌಂಡ್ಸ್ ಇರಬೇಕು, ಜೊತೆಗೆ ಡಿಸಿಪಿ, ಎಸಿಪಿಗಳು ಹಾಗೂ ಇನ್ಸ್ಪೆಕ್ಟರ್​ಗಳು ರೌಂಡ್ಸ್ ಮಾಡಲು ಸೂಚನೆ ಕೊಡಲಾಗಿದೆ.

ಅಭಿಮಾನಿಗಳು ಯಾವುದೇ ಕಾರಣಕ್ಕೂ ರಸ್ತೆ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಬಾರದು, ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದ್ರೆ ಕೇಸ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಮೈದಾನದಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ ಎಂದು ಖಡಕ್​ ಆಗಿ ಸೂಚನೆ ನೀಡಲಾಗಿದೆ.

(ವರದಿ: ಹಂಸ ಶ್ಯಾಮಲ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed