DK Shivakumar: ಆರ್​ಸಿಬಿಗೆ ಆಲ್ ದಿ ಬೆಸ್ಟ್ ಹೇಳಿದ ಡಿಕೆಶಿ! ಆದ್ರೆ, ‘ನಮಗೆ ಅನ್ಯಾಯ ಆಗಿದೆ’ ಅಂತಾ ಹೇಳಿದ್ಯಾಕೆ? | ಕ್ರೀಡಾ ಸುದ್ದಿ | ACTPnews

ಡಿಕೆ ಶಿವಕುಮಾರ್​


Last Updated:

ಪಂದ್ಯಕ್ಕೂ ಮುನ್ನ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​

ಬೆಂಗಳೂರು: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್​ಸಿಬಿ (RCB) ಮತ್ತು ಗುಜರಾತ್​​ ಟೈಟಾನ್ಸ್​ ವಿರುದ್ಧ ಫೈನಲ್​ ಪಂದ್ಯ ಶುರುವಾಗಿದೆ. ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಆರ್​ಸಿಬಿ ತಂಡ ಭರ್ಜರಿ ಬೌಲಿಂಗ್​ ಮಾಡಿದೆ. ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ತಂಡ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಎರಡನೇ ಬಾರಿಗೆ ಕಪ್​​ ಎತ್ತಿ ಹಿಡಿಯಲು ಸಜ್ಜಾಗಿದೆ. ಪಂದ್ಯಕ್ಕೂ ಮುನ್ನ ರಾಜ್ಯದ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ (DK Shivakumar)​ ಅವರು ಆರ್​ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜಕಾರಣದಿಂದ ಅವರು ತೆಗೆದುಕೊಂಡು ಹೋಗಿದ್ದಾರೆ

ಅಭಿಮಾನಿಯಾಗಿರುವ ಡಿಕೆ ಶಿವಕುಮಾರ್​ ಅವರು ಆರ್​​ಸಿಬಿ ಫೈನಲ್​ ತಲುಪಿರುವ ಬಗ್ಗೆ ಮಾತನಾಡಿದರು. ರಾಯಲ್​ ಚಾಲೆಂಜರ್ಸ್​ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಫೈನಲ್​​​ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದ್ರೆ, ರಾಜಕಾರಣದಿಂದ ಅವರು ಅಹಮದಾಬಾದ್​​ಗೆ ತೆಗೆದುಕೊಂಡು ಹೋಗಿದ್ದಾರೆ. ನಮಗೆ ಅನ್ಯಾಯವಾಗಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಆರ್​ಸಿಬಿ ತಂಡ ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಚೆನ್ನಾಗಿ ಆಡುತ್ತಿದೆ. ಆರ್​ಸಿಬಿ ಟೀಮ್​ಗೆ ಶುಭವಾಗಲಿ ಎಂದು ಹೇಳಿದರು.

ಬೆಂಗಳೂರಿನಿಂದ ಅಹಮದಾಬಾದ್​ಗೆ ಶಿಫ್ಟ್​ ಆಗಿದ್ದ ಫೈನಲ್​ ಪಂದ್ಯ

ಐಪಿಎಲ್​ ಟೂರ್ನಿ ಆರಂಭಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ಲೇ ಆಫ್​​ ಮತ್ತು ಫೈನಲ್​​ ಪಂದ್ಯವನ್ನು ಆಯೋಜಿಸಲಾಗಿತ್ತು. ಆದ್ರೆ, ಟೂರ್ನಿಯ ಅರ್ಧದಲ್ಲಿ ಫೈನಲ್​ ಮತ್ತು ಪ್ಲೇ ಆಫ್​ ಪಂದ್ಯವನ್ನು ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಶಿಫ್ಟ್​ ಮಾಡಲಾಗಿತ್ತು. ಈ ವಿಚಾರ ರಾಜಕೀಯ ವಾಗ್ಯುದ್ಧಕ್ಕೂ ಸಹ ಕಾರಣವಾಗಿತ್ತು. ಇದೀಗ ನಿಯೋಜಿತ ಸಿಎಂ ಡಿಕೆ ಶಿವಕುಮಾರ್​ ಅವರು ಇದೇ ವಿಚಾರವನ್ನು ಪ್ರಸ್ತಾಪಿಸಿ ನಮಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಫೈನಲ್​ನಲ್ಲಿ ಮಿಂಚಿದ ಆರ್​ಸಿಬಿ ಬೌಲರ್​ಗಳು

ಐಪಿಎಲ್​​ ಫೈನಲ್​​ನ ಪಂದ್ಯದಲ್ಲಿ ಆರ್​ಸಿಬಿ ತಂಡದ ನಾಯಕ ರಜತ್​ ಪಾಟೀದಾರ್​​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟ್​ ಮಾಡಿದ ಗುಜರಾತ್​ ತಂಡ ಆರಂಭಿಕ ಆಟಗಾರರಾದ ನಾಯಕ ಶುಭಮನ್ ಗಿಲ್ ಉತ್ತಮವಾಗಿ ಆಡುತ್ತಿದ್ದರು. ಆದರೆ, ಬೌಲಿಂಗ್ ದಾಳಿಗಿಳಿದ ಆರ್​ಸಿಬಿ ವೇಗದ ಬೌಲರ್ ಜೋಶ್ ಹ್ಯಾಜಲ್​ವುಡ್ 3 ಓವರ್​​ನ ಎರಡನೇ ಎಸೆತದಲ್ಲಿ ಗಿಲ್ (10 ರನ್) ಕ್ಯಾಚ್ ಕೊಟ್ಟು ಔಟಾದರು.

ಇದಾದ ಬಳಿಕ ಭುವನೇಶ್ವರ್ ಕುಮಾರ್ 4 ಓವರ್​​ನ 4ನೇ ಎಸೆತದಲ್ಲಿ ಸಾಯಿ ಸುದರ್ಶನ್ (12) ಅವರನ್ನು ಔಟ್ ಮಾಡಿದರು. ಬಳಿಕ ಬಂದ ಬ್ಯಾಟ್ಸಮನ್​ಗಳು ಹೆಚ್ಚು ಕ್ರೀಸ್​ನಲ್ಲಿ ನಿಲ್ಲಲು ಆರ್​ಸಿಬಿ ಬೌಲರ್​ಗಳು ಅವಕಾಶ ಮಾಡಿಕೊಡಲಿಲ್ಲ. ಸತತ ವಿಕೆಟ್​ಗಳನ್ನು ಕಳೆದುಕೊಂಡು ಗುಜರಾತ್​ ಟೈಟಾನ್ಸ್​​ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಫೈನಲ್​ನಲ್ಲಿ ಮೇಲುಗೈ ಸಾಧಿಸಿರುವ ಆರ್​ಸಿಬಿ ತಂಡ ಎರಡನೇ ಬಾರಿಗೆ IPL ಟ್ರೋಫಿಯನ್ನು ಎತ್ತಿಹಿಡಿಯಲು ಸನ್ನಿಹಿತವಾಗಿದೆ.

(ವರದಿ: ಕಾರ್ತಿಕ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports