ಇದು ಯಾವ ಚಿತ್ರದ ಲುಕ್
(ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್ಸ್ಟಾಗ್ರಾಮ್)
ಜಾಕೆಟ್ ಅಂತು ಸ್ಟೀಲ್ ಬಟನ್ ಗಳಿಂದಲೇ ತುಂಬಿರುತ್ತಿದ್ದವು. ಪಕ್ಕಾ ಡಿಸ್ಕೋ ಲುಕ್ ಅಲ್ಲಿಯೇ ಇರ್ತಾ ಇದ್ದರು. ಲವ್ಲಿ ಸ್ಟಾರ್ ಪ್ರೇಮ್ ಕೂಡ ಹಾಗೆ ಕಾಣಿಸುತ್ತಿದ್ದಾರೆ. ಇವರ ಲುಕ್ ಆ ದಿನಗಳ ಹೀರೋಗಳನ್ನ ನೆನಪಿಸುವಂತೆ ಇದೆ.
ನೆನಪಿರಲಿ ಪ್ರೇಮ್ ವಿಡಿಯೋದಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. ಕಾರ್ ಒಳಗೆ ಕುಳಿತು ಪೋಸ್ ಕೊಟ್ಟಿದ್ದಾರೆ. ಕಾರ್ ಸ್ಟೇರಿಂಗ್ ಹಿಡಿದು ಸಹ ಪೋಸ್ ಕೊಟ್ಟಿದ್ದಾರೆ.
ಕಾರಿನ ಮುಂದಿನ ಸೀಟ್ ಅಲ್ಲಿ ಮಲಗಿ ಕೊಂಡು, ಕಿಟಕಿ ಹೊರಗೆ ಕಾಲು ಹಾಕಿ ಪೋಸ್ ಕೊಟ್ಟಿದ್ದಾರೆ. ರೆಟ್ರೋ ಕಾರ್ ಮುಂದೆ ನಿಂತ ಒಂದಷ್ಟು ಪೋಸ್ ಕೂಡ ಕೊಟ್ಟಿದ್ದಾರೆ. ಇದೆಲ್ಲ ಅಷ್ಟೆ ಆಕರ್ಷಕವಾಗಿಯೇ ಇದೆ.
ನೆನಪಿರಲಿ ಪ್ರೇಮ್ ಅವರ ಪತ್ನಿ ಜ್ಯೋತಿ ಪ್ರೇಮ್ ಈ ಒಂದು ಕಾನ್ಸೆಪ್ಟ್ ಪ್ಲಾನ್ ಮಾಡಿದ್ದಾರೆ. ಈ ವಿಷಯವನ್ನ ಸ್ವತಃ ನೆನಪಿರಲಿ ಪ್ರೇಮ್ Special Mention: jyothi prem ಅಂತಲೇ ಹೇಳಿಕೊಂಡಿದ್ದಾರೆ.
ರೆಟ್ರೋ ಕಾರ್-ಡಿಸ್ಕೋ ಲುಕ್
(ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್ಸ್ಟಾಗ್ರಾಮ್)
ಆದರೆ, ಕಾಸ್ಟೂಮ್ ಅಂತ ಬಂದ್ರೆ ಅದನ್ನ ಲಕ್ಷ್ಮಿ ಕೃಷ್ಣ ಮಾಡಿದ್ದಾರೆ. ಪ್ರಶು ಟೆಡ್ಡಿ ಈ ಒಂದು ಫೋಟೋ ಶೂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿರೋ ದಿ ಶೈರ್ ಸ್ಟುಡಿಯೋದಲ್ಲಿಯೇ ಈ ಒಂದು ಶೂಟಿಂಗ್ ಮಾಡಲಾಗಿದೆ.
ನೆನಪಿರಲಿ ಪ್ರೇಮ್ ಅವರ ಈ ಲುಕ್ ಯಾವುದೋ ಚಿತ್ರಕ್ಕಾಗಿ ಅಲ್ವೇ ಅಲ್ಲ. ಜೀ ಕನ್ನಡದ ಜೋಡಿ ನಂಬರ್ ಒನ್ ಶೋಗಾಗಿಯೇ ನೆನಪಿರಲಿ ಪ್ರೇಮ್ ಈ ಒಂದು ಲುಕ್ ಅಲ್ಲಿ ಕಾಣಿಸಿಕೊಂಡಿದ್ದಾರೆ.
ನೆನಪರಲಿ ಪ್ರೇಮ್ ಒಂದಷ್ಟು ಸಿನಿಮಾಗಳನ್ನ ಮಾಡುತ್ತಿದ್ದಾರೆ. ಸ್ಪಾರ್ಕ್ ಚಿತ್ರದಲ್ಲಿ ಸ್ಪೆಷಲ್ ರೋಲ್ ಮಾಡಿದ್ದಾರೆ. ಡಿ ಡಿ ಢಿಕ್ಕಿ ಚಿತ್ರದಲ್ಲಿ ಇವರೇ ಹೀರೋ ಆಗಿದ್ದಾರೆ.
ಇವರ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಮಗನ ಪಾತ್ರ ಮಾಡಿದ್ದಾನೆ. ರಂಜನಿ ರಾಘವನ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಚಿತ್ರವೇ ಆಗಿದೆ.
ಈ ಚಿತ್ರಕ್ಕೆ ಇಳಯರಾಜಾ ಸಂಗೀತ ಕೊಟ್ಟಿದ್ದಾರೆ. ಕತೆ ಚೆನ್ನಾಗಿದೆ, ಇದಕ್ಕೆ ನಾನು ಸಂಗೀತ ಮಾಡ್ಲಾ ಅಂತಲೇ ಇಳಯರಾಜಾ ಕೇಳಿದ್ದಾರೆ. ಆ ರೀತಿಯ ಕತೆಯ ಚಿತ್ರ ಇದಾಗಿದೆ. ಇನ್ನುಳಿದಂತೆ ನೆನಪಿರಲಿ ಪ್ರೇಮ್ ದಿನೇ ದಿನೇ ಯಂಗ್ ಆಗಿ ಕಾಣಿಸುತ್ತಿದ್ದಾರೆ ಅಂತ ಹೇಳಬಹುದು.












