Bengaluru Traffic: ಈ ರಸ್ತೆಯಲ್ಲಿ 6 ಗಂಟೆ ಸಂಚಾರ ನಿಷೇಧ; 3 ಕಿಲೋಮೀಟರ್‌ ಓಡಾಟ ಹೆಚ್ಚು, ಈ ರೋಡಲ್ಲಿ ಓಡಾಡಲೇಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸಂಚಾರ ರದ್ದು


Last Updated:

ಬೆಂಗಳೂರು ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಇಂದು ರಾತ್ರಿ 11ರಿಂದ ನಾಳೆ ಬೆಳಗ್ಗೆ 5ರವರೆಗೆ ಕಬ್ಬನ್ ರಸ್ತೆ ಸುತ್ತಮುತ್ತ ಡಿಕ್ಕನ್ಸನ್, ವೆಬ್ಸ್ ಗ್ರೌಂಡ್ ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ಬಂದ್

ಸಂಚಾರ ರದ್ದು
ಸಂಚಾರ ರದ್ದು

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯೇ ಗಮನಿಸಿ! ನೀವು ಇಂದು ರಾತ್ರಿ (Night) ಅಥವಾ ನಾಳೆ ಮುಂಜಾನೆ ವಾಹನ ಹಿಡಿದು ಹೊರಗೆ ಹೊರಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ (Shocking News) ಇದೆ. ಬೆಂಗಳೂರಿನ ಹೃದಯಭಾಗದಲ್ಲಿ ಸಂಚರಿಸುವ ಮುನ್ನ ಈ ಹೊಸ ಟ್ರಾಫಿಕ್ ರೂಲ್ಸ್ ತಿಳಿಯದಿದ್ದರೆ ನೀವು ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ!

ಐಪಿಎಲ್‌ ಸಲುವಾಗಿ ಸಂಚಾರ ನಿಷೇಧ

ಇಂದು ನಡೆಯಲಿರುವ ಐಪಿಎಲ್‌ ಪಂದ್ಯದ ಫೈನಲ್ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಮುಖ ರಸ್ತೆ ಹಾಗೂ ಫ್ಲೈಓವರ್‌ಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ! ಇವತ್ತು ಐಪಿಎಲ್‌ ಸಂಭ್ರಮದ ನಿಮಿತ್ತ ಪಂದ್ಯಾರಂಭ ಹಾಗೂ ಅಂತ್ಯದಲ್ಲಿ ಆಗುವ ಜನದಟ್ಟಣೆ ಹಾಗೂ ಸಂಭ್ರಮಾಚರಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ರಸ್ತೆಗಳು ಬಂದ್ ಆಗುತ್ತಿರುವುದು ಏಕೆ?

ಬೆಂಗಳೂರಿನಲ್ಲಿ ಐಪಿಎಲ್‌ ಫೈನಲ್‌ ಸಲುವಾಗಿ ತುಂಬಾ ಜನದಟ್ಟಣೆಯ ಹಿನ್ನೆಲೆಯಲ್ಲಿ ಕಬ್ಬನ್ ರಸ್ತೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಬಂದ್ ಆಗುವ ಸಮಯ ಯಾವಾಗ?

* ಪ್ರಾರಂಭ: 31-05-2026 (ಇಂದು) ರಾತ್ರಿ 11:00 ಗಂಟೆಯಿಂದ

* ಮುಕ್ತಾಯ: 01-06-2026 (ನಾಳೆ) ಮುಂಜಾನೆ 05:00 ಗಂಟೆಯವರೆಗೆ

ಈ ಅವಧಿಯಲ್ಲಿ ಕೆಳಗೆ ಹೆಸರಿಸಲಾದ ಫ್ಲೈಓವರ್‌ಗಳಲ್ಲಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬಂದ್ ಆಗಲಿರುವ ಪ್ರಮುಖ ಫ್ಲೈಓವರ್‌ಗಳ ಲಿಸ್ಟ್ ಇಲ್ಲಿದೆ

ಇದನ್ನೂ ಓದಿ: Indian Railway: 20 ಬೋಗಿಗಳ ಹೊಸ ಎಕ್ಸ್‌ಪ್ರೆಸ್ ರೈಲು ಜೂನ್‌ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ!

ಡಿಕ್ಕನ್ಸನ್ ರಸ್ತೆ ಫ್ಲೈಓವರ್- ಕಾಮರಾಜ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ಹಾಗೂ ಕಬ್ಬನ್ ರಸ್ತೆಯಿಂದ ಕಾಮರಾಜ ರಸ್ತೆ ಕಡೆಗೆ ಹೋಗುವ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವೆಬ್ಸ್ ಗ್ರೌಂಡ್ ಫ್ಲೈಓವರ್- ಎಂ.ಜಿ. ರಸ್ತೆಯಿಂದ 5ನೇ ಮುಖ್ಯ ರಸ್ತೆ ಕೋರಮಂಗಲ ಮತ್ತು ಕಾಮರಾಜ ರಸ್ತೆ ಕಡೆಗೆ ಹೋಗುವ ಹಾಗೂ 5ನೇ ಮುಖ್ಯ ರಸ್ತೆ ಕೋರಮಂಗಲದಿಂದ ಎಂ.ಜಿ. ರಸ್ತೆ/ಕಾಮರಾಜ ರಸ್ತೆ ಕಡೆಗೆ ಬರುವ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ಸುಗಮ ವ್ಯವಸ್ಥೆಗೆ ಸಹಕರಿಸಲು ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವವರು ಪರ್ಯಾಯ ರಸ್ತೆಗಳನ್ನು ಬಳಸಲು ಸೂಚಿಸಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದು ಗ್ಯಾರಂಟಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed