GT vs RCB IPL Final 2026: ಮೊದಲ 6 ಓವರ್​​ಗಳಲ್ಲಿ ಇದೊಂದು ನಡೆದರೆ ಆರ್​ಸಿಬಿಗೆ ಸುಲಭ ಜಯ! | ಕ್ರೀಡಾ ಸುದ್ದಿ | ACTPnews

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್


Last Updated:

ಇಂದು ಭಾನುವಾರ, ಐಪಿಎಲ್ 2026 ರ ಹೈವೋಲ್ಟೇಜ್ ಫೈನಲ್ ಪಂದ್ಯ. ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್

ಐಪಿಎಲ್ (IPL) 2026ರ ರಣರೋಚಕ ಫೈನಲ್ (Final) ಪಂದ್ಯ (Match) ಎಲ್ಲರ ಚಿತ್ತ ನೆಟ್ಟಿದೆ. ಭಾನುವಾರ (Sunday) ಸಂಜೆ 7:30 ಗಂಟೆಗೆ ಅಹಮದಾಬಾದ್‌ (Ahmedabad) ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ನಡುವೆ ಅದ್ದೂರಿ ಫೈನಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳು (Teams) ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು ಕಾತುರದಿಂದ ಕಾದು ಕುಳಿತಿವೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಿರುವ ರಜತ್ ಪಾಟೀದಾರ್ (Rajat Patidar) ನಾಯಕತ್ವದ ಆರ್​​ಸಿಬಿ ಫೈನಲ್ ಪಂದ್ಯದಲ್ಲಿ ಫೇವರಿಟ್ ತಂಡವಾಗಿ ಆಡುತ್ತಿದೆ. ಮತ್ತೊಂದೆಡೆ ಶುಭ್​ಮನ್ ಗಿಲ್ (Shubman Gill) ನೇತೃತ್ವದ ಗುಜರಾತ್ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಗುಜರಾತ್ ಕ್ವಾಲಿಫೈಯರ್ (Qualifier) 1 ಪಂದ್ಯ ಸೋತರೂ, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

ಅಹಮದಾಬಾದ್ ತವರು ಮೈದಾನವಾಗಿರುವುದು ಗುಜರಾತ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಆದರೆ, ಕಳದೆ ವರ್ಷ ಇದೇ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್​​ಸಿಬಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಹೀಗಾಗಿ, ಅಹಮದಾಬಾದ್ ಮೈದಾನ ಎರಡೂ ತಂಡಗಳಿಗೆ ಗೆಲ್ಲಲು ಉತ್ತಮ ವೇದಿಕೆಯಾಗಿದೆ. ಆದರೆ ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮೊದಲ 6 ಓವರ್​​ಗಳಲ್ಲಿ ಇದೊಂದು ನಡೆದರೆ ಆರ್​ಸಿಬಿ ಸುಲಭ ಜಯ ದಾಖಲಿಸಲಿದೆ.

ಆರ್​​ಸಿಬಿ ಇರುವ ಏಕೈಕ ಅವಕಾಶ

ವಿಶ್ವದ ಅತಿದೊಡ್ಡ ಪಿಚ್ ಆಗಿರುವ ನರೇಂದ್ರ ಮೋದಿ ಕ್ರೀಡಾಂಗಣವು ಬ್ಯಾಟಿಂಗ್ ನೆರವಾಗಲಿದೆ. ಈ ಆವೃತ್ತಿಯಲ್ಲಿ ಕೆಲವು ಬಿಗ್ ಸ್ಕೋರ್‌ಗಳನ್ನು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ 229 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಆದರೆ, ಇಲ್ಲಿನ ಪಿಚ್ ಪರಿಸ್ಥಿತಿಗಳನ್ನು ಗಮನಿಸಿದರೆ, ವೇಗದ ಬೌಲರ್‌ಗಳು (ಸುಮಾರು ಶೇಕಡಾ 76) ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಗುಜರಾತ್ ತಂಡಕ್ಕೆ ಖೆಡ್ಡಾ ತೋಡಲು ಆರ್‌ಸಿಬಿ ಇದನ್ನೇ ಉತ್ತಮ ಅವಕಾಶವಾಗಿ ಬಳಸಿಕೊಳ್ಳಬೇಕಾಗಿದೆ.

ಮೊದಲ 6 ಓವರ್ ನಿರ್ಣಾಯಕ

ಹೌದು, ಆರ್​​ಸಿಬಿ ವೇಗದ ಬೌಲಿಂಗ್ ಅಸ್ತ್ರ ಎಂದರೆ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್​ವುಡ್, ಜೇಕಬ್ ಡಫಿ ಮತ್ತು ರಸಿಕ್ ದಾರ್. ಈ ನಾಲ್ವರು ವೇಗಿಗಳು ಮೊದಲ ಕ್ಯಾಲ್ವಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈಗ ಫೈನಲ್ ಪಂದ್ಯದಲ್ಲಿ ಆರ್​​ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೆ, ಗುಜರಾತ್ ತಂಡದ ಟಾಪ್ ಆರ್ಡರ್ ಬ್ಯಾಟರ್​​ಗಳಾದ ಶುಭ್​​ಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರನ್ನು ಮೊದಲ 6 ಓವರ್​​ಗಳಲ್ಲಿ ಔಟ್ ಮಾಡಬೇಕು. ಈ ಮಹತ್ವದ ಜವಾಬ್ದಾರಿ ಆರ್​​ಸಿಬಿಯ ನಾಲ್ವರು ವೇಗಿಗಳ ಮೇಲಿದೆ.

ಮೊದಲ 6 ಓವರ್​​ಗಳಲ್ಲಿ ಶುಭ್​​ಮನ್ ಗಿಲ್, ಸಾಯಿ ಸುದರ್ಶನ್ ಅಥವಾ ಜೋಸ್ ಬಟ್ಲರ್ ಮೂರಲ್ಲಿ ಇಬ್ಬರು ಔಟಾದರೆ ಆರ್​​ಸಿಬಿ ಎರಡನೇ ಟ್ರೋಫಿ ಗೆಲ್ಲುವುದು ಫಿಕ್ಸ್. ಏಕೆಂದರೆ ನಂತರ ಬರುವ ಗುಜರಾತ್ ಬ್ಯಾಟರ್​ಗಳಿಗೆ ಆರ್​​ಸಿಬಿ ಬೌಲಿಂಗ್ ದಾಳಿ ವಿರುದ್ಧ ಮ್ಯಾಚ್ ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಹೀಗಾಗಿ ಆರ್​​ಸಿಬಿ ವೇಗಿಗಳು ಈ ಮೂವರನ್ನು ಬೇಗ ಔಟ್ ಮಾಡಬೇಕು.

ಮೊದಲು ಬ್ಯಾಟಿಂಗ್ ಮಾಡಿದರೆ ಏನು?

ಒಂದು ವೇಳೆ ಆರ್​​ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಪರಿಸ್ಥಿತಿ ಬಂದರೆ, ಮೊದಲ 6 ಓವರ್​​ಗಳಲ್ಲಿ 70-80 ರನ್​​ಗಳಿಗೂ ಹೆಚ್ಚು ರನ್ ಗಳಿಸಬೇಕು. ಈ ಮೂಲಕ ಗುಜರಾತ್ ಟೈಟಾನ್ಸ್ ಬೌಲರ್​​ಗಳನ್ನು ಒತ್ತಡಕ್ಕೆ ಸಿಲುಕಿಸಬೇಕು. ಇದು ನಂತರ ಬರುವ ಬ್ಯಾಟರ್​​ಗಳಿಗೆ ಸುಗಮ ಬ್ಯಾಟಿಂಗ್ ಮಾಡಲು ಮತ್ತು ಉತ್ತಮ ಸ್ಕೋರ್ ಗಳಿಸಲು ನೆರವಾಗುತ್ತದೆ. ಈ ಮೂಲಕ ಆರ್​​ಸಿಬಿ ತಂಡ ಬೃಹತ್ ಮೊತ್ತವನ್ನು ಕಲೆ ಹಾಕುವುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed