Menstrual Leave: ಶಾಲಾ ಬಾಲಕಿಯರಿಗೆ 3 ದಿನ ಮುಟ್ಟಿನ ರಜೆ! ಕೇರಳಂ ಸರ್ಕಾರದಿಂದ ಮಹತ್ವದ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Menstrual Leave: ತೀವ್ರ ಹೊಟ್ಟೆನೋವು, ಆಯಾಸ, ಬೆನ್ನುನೋವು ಮತ್ತು ಮಾನಸಿಕ ಒತ್ತಡದಿಂದಾಗಿ ಶಾಲಾ ಬಾಲಕಿಯರು ಆ ದಿನಗಳಲ್ಲಿ ತರಗತಿಗಳಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಕೇರಳ ಸರ್ಕಾರ ಪ್ರತಿ ತಿಂಗಳು 3 ದಿನಗಳ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಹೆಣ್ಣು ಮಕ್ಕಳು (Women’s) ಪ್ರೌಢಾವಸ್ಥೆಗೆ ಬಂದ ನಂತರ ಪ್ರತಿ ತಿಂಗಳು ಎದುರಿಸುವ ಮುಟ್ಟಿನ ದಿನಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹತ್ತಾರು ಸವಾಲುಗಳನ್ನು ತರುತ್ತವೆ. ತೀವ್ರ ಹೊಟ್ಟೆನೋವು, ಆಯಾಸ, ಬೆನ್ನುನೋವು ಮತ್ತು ಮಾನಸಿಕ ಒತ್ತಡದಿಂದಾಗಿ (Stress) ಶಾಲಾ ಬಾಲಕಿಯರು (School Students) ಆ ದಿನಗಳಲ್ಲಿ ತರಗತಿಗಳಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ (Health) ದೃಷ್ಟಿಯಿಂದ ಕೇರಳ ಸರ್ಕಾರ ಪ್ರತಿ ತಿಂಗಳು 3 ದಿನಗಳ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ.  

ವಿದ್ಯಾರ್ಥಿನಿಯರಿಗೆ ಆಸರೆ!

ಈ ನಿಯಮ ವಿದ್ಯಾರ್ಥಿನಿಯರ ಆರೋಗ್ಯ ರಕ್ಷಣೆಗೆ ದೊಡ್ಡ ಆಸರೆಯಾಗಲಿದೆ. ಈ ರಜೆಯು ಬಾಲಕಿಯರಿಗೆ ಮನೆಯಲ್ಲೇ ವಿಶ್ರಾಂತಿ ಪಡೆಯಲು ಮುಕ್ತ ಅವಕಾಶ ನೀಡುತ್ತದೆ. ಇದರಿಂದಾಗಿ ಮುಟ್ಟಿನ ದಿನಗಳಲ್ಲಿ ಶಾಲೆಗೆ ಗೈರಾಗುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಲಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಮುಟ್ಟಿನ ಸುತ್ತಲಿನ ಸಾಮಾಜಿಕ ಮುಜುಗರವನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ.

ಉದ್ಯೋಗಸ್ಥ ಮಹಿಳೆಯರಿಗೂ ಸಹಾಯಕ!

ಮಹಿಳೆಯರು ತಾಯಂದಿರಾದ ನಂತರ ವೃತ್ತಿಜೀವನ ಮತ್ತು ಸಂಸಾರವನ್ನು ನಿಭಾಯಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಸೂಕ್ತ ಮಕ್ಕಳ ಆರೈಕೆ ಕೇಂದ್ರಗಳಿಲ್ಲದೆ ಅನೇಕ ಮಹಿಳೆಯರು ತಮ್ಮ ಉದ್ಯೋಗವನ್ನು ಅರ್ಧಕ್ಕೆ ಬಿಡುವ ಪರಿಸ್ಥಿತಿ ಇದೆ. ಇದನ್ನು ಮನಗಂಡು, 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳು, ಕಚೇರಿಗಳು ಮತ್ತು ಉದ್ಯೋಗದ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಡೇ-ಕೇರ್ ಸೆಂಟರ್ ಹಾಗೂ ಶಿಶು ವಿಹಾರಗಳನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾಪ ಮಾಡಲಾಗಿದೆ.

ಮಾನಸಿಕ ಆತಂಕ ದೂರ!

ಈ ಯೋಜನೆಯಿಂದಾಗಿ ಕೆಲಸ ಮಾಡುವ ತಾಯಂದಿರು ತಮ್ಮ ಪುಟ್ಟ ಮಕ್ಕಳನ್ನು ಸುರಕ್ಷಿತವಾಗಿ ಕಚೇರಿಯ ಆವರಣದಲ್ಲೇ ಇರಿಸಬಹುದು. ಕೆಲಸದ ಬಿಡುವಿನ ವೇಳೆಯಲ್ಲಿ ಮಕ್ಕಳನ್ನು ನೋಡಿಬರಲು ಮತ್ತು ಸ್ತನ್ಯಪಾನ ಮಾಡಿಸಲು ಇದು ಅನುಕೂಲ ಮಾಡಿಕೊಡುತ್ತದೆ. ಇದರಿಂದ ಮಹಿಳಾ ಉದ್ಯೋಗಿಗಳ ಮಾನಸಿಕ ಆತಂಕ ದೂರವಾಗಿ, ಅವರು ಹೆಚ್ಚು ನಿಶ್ಚಿಂತೆಯಿಂದ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದು ಕಾರ್ಪೊರೇಟ್ ಮತ್ತು ಸರ್ಕಾರಿ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಲು ಪ್ರೇರಣೆಯಾಗುತ್ತದೆ.

ಸಾಮಾಜಿಕ ಬದಲಾವಣೆಗೆ ಒತ್ತು!

ಕೇರಳ ಸರ್ಕಾರದ ಈ ಎರಡು ಪ್ರಸ್ತಾಪಗಳು ಕೇವಲ ಸೌಲಭ್ಯಗಳಲ್ಲ, ಇವು ಸಾಮಾಜಿಕ ಬದಲಾವಣೆಯ ದಿಕ್ಸೂಚಿಗಳಾಗಿವೆ. ಮುಟ್ಟು ಮತ್ತು ಹೆರಿಗೆಯ ನಂತರದ ಮಕ್ಕಳ ಪಾಲನೆ ಎಂಬುದು ಕೇವಲ ಮಹಿಳೆಯರ ವೈಯಕ್ತಿಕ ವಿಷಯವಲ್ಲ, ಅದು ಇಡೀ ಸಮಾಜ ಮತ್ತು ವ್ಯವಸ್ಥೆಯ ಜವಾಬ್ದಾರಿ ಎಂಬುದನ್ನು ಈ ಯೋಜನೆಗಳು ಸಾರುತ್ತವೆ. ಮಹಿಳೆಯರ ಮತ್ತು ಹೆಣ್ಣುಮಕ್ಕಳ ನೈಸರ್ಗಿಕ ಮತ್ತು ಜೈವಿಕ ಅಗತ್ಯಗಳನ್ನು ಗೌರವಿಸುವ ಮೂಲಕ ಸರ್ಕಾರವು ಲಿಂಗ ಸಮಾನತೆಗೆ ಹೊಸ ಭಾಷ್ಯ ಬರೆದಿದೆ. ಈ ಮಾದರಿ ಯೋಜನೆಗಳು ದೇಶದ ಇತರೆ ರಾಜ್ಯಗಳಿಗೂ ಪ್ರೇರಣೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಮಹಿಳಾ ಸ್ನೇಹಿ ಉದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆ ನಿರ್ಮಾಣಕ್ಕೆ ಬಲವಾದ ಮುನ್ನುಡಿ ಬರೆಯಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed