Last Updated:
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ವೈಭವ್ ಸೂರ್ಯವಂಶಿ ಸಿಡಿಸಿದ 96 ರನ್ಗಳ ನೆರವಿನಿಂದ 214 ರನ್ಗಳ ಸವಾಲಿನ ಮೊತ್ತ ದಾಖಲಿಸಿದರು. ವೈಭವ್ಗೆ ಸಾಥ್ ನೀಡಿದ ಜಡೇಜಾ ಅಜೇಯ 45, ಡೊನೊವನ್ ಫೆರೆರಾ ಅಜೇಯ 38 ರನ್ಗಳಿಸಿದರು.
ಮುಲ್ಲನ್ಪುರದ (ನ್ಯೂ ಚಂಡೀಗಢ) ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ IPL 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ವೈಭವ್ ಸೂರ್ಯವಂಶಿ ಸಿಡಿಸಿದ 96 ರನ್ಗಳ ನೆರವಿನಿಂದ 214 ರನ್ಗಳ ಸವಾಲಿನ ಮೊತ್ತ ದಾಖಲಿಸಿದರು. ವೈಭವ್ಗೆ ಸಾಥ್ ನೀಡಿದ ಜಡೇಜಾ ಅಜೇಯ 45, ಡೊನೊವನ್ ಫೆರೆರಾ ಅಜೇಯ 38 ರನ್ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಇಂದು ಆರಂಭದಲ್ಲೇ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್ 1 ರನ್ಗಳಿಸಿ ಮೊದಲ ಓವರ್ನಲ್ಲೇ ಸಿರಾಜ್ಗೆ ವಿಕೆಟ್ ಒಪ್ಪಿಸಿದರೆ, 2ನೇ ಓವರ್ನಲ್ಲಿ ಜುರೆಲ್ ಕಗಿಸೋ ರಬಾಡ ಬೌಲಿಂಗ್ನಲ್ಲಿ ಗಿಲ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಜಡೇಜಾ ಜೊತೆಗೂಡಿದ ವೈಭವ್ ಸೂರ್ಯವಂಶಿ 3ನೇ ವಿಕೆಟ್ಗೆ 73 ರನ್ ಸೇರಿಸಿದರು. ಜಡೇಜಾ 34 ರನ್ಗಳಿಸಿದ್ದ ವೇಳೆ ಗಾಯಗೊಂಡು ನಿವೃತ್ತಿಯಾದರು. ನಂತರ ರಾಜಸ್ಥಾನ್ ತಂಡ ಕುಸಿತ ಕಂಡಿತು.
ಒಂದು ಕಡೆ ವೈಭವ್ ಸೂರ್ಯವಂಶಿ ಉತ್ತಮವಾಗಿ ಆಡುತ್ತಿದ್ದರೆ, ನಾನ್ಸ್ಟ್ರೈಕರ್ನಲ್ಲಿ ಬಂದವರೆಲ್ಲಾ ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ನಾಯಕ ಪರಾಗ್ ಕೇವಲ 6 ಎಸೆತಗಳಲ್ಲಿ 11 ರನ್ ಹಾಗೂ. ದಾಸುನ್ ಶನಕ 9 ಎಸೆತಗಳನ್ನಾಡಿ ಕೇವಲ 3 ರನ್ಗಳಿಸಿ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು. ಆರ್ಚರ್ 4 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆರ್ಚರ್ ವಿಕೆಟ್ ಬಳಿಕ ಜಡೇಜಾ ಮತ್ತೆ ಕ್ರೀಸ್ಗೆ ಬಂದು ಸೂರ್ಯವಂಶಿ ಜೊತೆಗೆ 7ನೇ ವಿಕೆಟ್ಗೆ 54 ರನ್ ಸೇರಿಸಿದರು. ಸೂರ್ಯವಂಶಿ ಆರಂಭದಲ್ಲಿ ತಮ್ಮ ನೈಜ ಆಟ ಆಡಲು ಸಾಧ್ಯವಾಗಲಿಲ್ಲ.
31 ಎಸೆತಕ್ಕೆ ಅರ್ಧಶತಕ ಸಿಡಿಸಿದ ವೈಭವ್ ಕೊನೆಯಲ್ಲಿ ಅಬ್ಬರಿಸಿದರು. ಮುಂದಿನ 16 ಎಸೆತಗಳಲ್ಲಿ 46 ರನ್ ಸಿಡಿಸಿದರು. 47 ಎಸೆತಗಳನ್ನಾಡಿದ ಸೂರ್ಯವಂಶಿ 8 ಬೌಂಡರಿ, 7 ಸಿಕ್ಸರ್ಗಳ ಸಹಿತ 96 ರನ್ಗಳಿಸಿ ಇಂದೂ ಕೂಡ ಶತಕ ಮಿಸ್ ಮಾಡಿಕೊಂಡರು. ಈ ಸೀಸನ್ನಲ್ಲಿ ವೈಭವ್ ಕೈತಪ್ಪಿದ 3ನೇ ಶತಕವಾಗಿದೆ. ಇದಕ್ಕೂ ಮುನ್ನ ಎಲಿಮಿನೇಟರ್ನಲ್ಲಿ ಹೈದರಾಬಾದ್ ವಿರುದ್ಧ 97(29 ಎಸೆತ), ಲಖನೌ ಸೂಪರ್ ಜೈಂಟ್ಸ್ ವಿರುದ್ಧ 93(28 ಎಸೆತ) ಕೂಡ ಶತಕ ಮಿಸ್ ಮಾಡಿಕೊಂಡಿದ್ದರು. ಮೂರು ಇನ್ನಿಂಗ್ಸ್ಗಳಲ್ಲಿ ಶತಕ ಪೂರೈಸಲು ಇನ್ನೂ ಸಾಕಷ್ಟು ಎಸೆತಗಳಿದ್ದವು ಆದರೆ ಸೂರ್ಯವಂಶಿಯ ಬೌಂಡರಿ-ಸಿಕ್ಸರ್ ಮೂಲಕವೇ ಶತಕ ಪೂರೈಸಬೇಕೆಂದ ಹಠದಿಂದ ಮೂರು ಬಾರಿಯೂ ಕ್ಯಾಚ್ ಔಟ್ ಆಗಿದ್ದಾರೆ.
ವೈಭವ್ 18ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ತಂಡದ ಮೊತ್ತ 172-6 ಇತ್ತು. ಕೊನೆಯ 16 ಎಸೆತಗಳಲ್ಲಿ ರಾಯಲ್ಸ್ 42 ರನ್ ಸೂರೆಗೈದಿತು. ಡೋನವನ್ ಫೆರೇರಾ ಕೇವಲ 11 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ಗಳ ಸಹಿತ ಅಜೇಯ 38 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು. ರಶೀದ್ ಎಸೆದ ಕೊನೆಯ ಓವರ್ನಲ್ಲಿ ಫೆರೇರಾ 4 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಜಡೇಜಾ 35 ಎಸೆತಗಳಲ್ಲಿ 5 ಬೌಂಡರಿ, 1 ಅಜೇಯ 45 ರನ್ಗಳಿಸಿ ಮಿಂಚಿದರು.
ಗುಜರಾತ್ ಟೈಟನ್ಸ್ ಪರ ಜೇಸನ್ ಹೋಲ್ಡರ್ 27ಕ್ಕೆ2, ಕಗಿಸೋ ರಬಾಡ 35ಕ್ಕೆ2, ಮೊಹಮ್ಮದ್ ಸಿರಾಜ್ 42ಕ್ಕೆ1, ಪ್ರಸಿದ್ಧ್ ಕೃಷ್ಣ 42ಕ್ಕೆ1 ವಿಕೆಟ್ ಪಡೆದರು. ರಶೀದ್ ಖಾನ್ ಕೇವಲ 2 ಓವರ್ ಎಸೆದು 45 ರನ್ ಬಿಟ್ಟುಕೊಟ್ಟು ದುಬಾರಿಯಾದರು.













