Last Updated:
ಕೇರಳಂನ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ)ನ ಹಿರಿಯ ನಾಯಕ ಪಿಣರಾಯಿ ವಿಜಯನ್ ಮನೆ ಸೇರಿದಂತೆ ಅವರಿಗೆ ಸಂಬಂಧ ಪಟ್ಟಂತಹ ಹಲವು ಕಡೆಗಳಲ್ಲಿ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಸಿಪಿಐ(ಎಂ)ನ ಕಾರ್ಯಕರ್ತರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಅಧಿಕಾರಿಗಳ ಕಾರು ಪೀಸ್ ಪೀಸ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.
ತಿರುವನಂತಪುರಂ (ಕೇರಳಂ): ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ಕೇರಳಂನ (Keralam) ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ)ನ ಹಿರಿಯ ನಾಯಕ ಪಿಣರಾಯಿ ವಿಜಯನ್ಗೆ (Pinarayi Vijayan) ಜಾರಿ ನಿರ್ದೇಶನಾಲಯ ಬಿಗ್ಶಾಕ್ ತಟ್ಟಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ವಿಜಯನ್ ಮನೆ ಸೇರಿದಂತೆ ಅವರಿಗೆ ಸಂಬಂಧ ಪಟ್ಟಂತಹ ಹಲವು ಕಡೆಗಳಲ್ಲಿ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಸಿಪಿಐ(ಎಂ)ನ ಕಾರ್ಯಕರ್ತರು ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಅಧಿಕಾರಿಗಳ ಕಾರು ಪೀಸ್ ಪೀಸ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.
ಇಂದು ಬೆಳಗ್ಗೆ ಇಡಿ ಅಧಿಕಾರಿಗಳು ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ತಿರುವನಂತಪುರಂನ ಬೇಕರಿ ಜಂಕ್ಷನ್ನಲ್ಲಿರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ಮನೆಗೆ ಪ್ರವೇಶಿಸಿದರು. ಅದರೊಂದಿಗೆ ಕಣ್ಣೂರಿನ ಮನೆ, ಮಗಳು ವೀಣಾ ಅವರ ಪತಿ ಮತ್ತು ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರ ಕೋಝಿಕ್ಕೋಡ್ ಮನೆ ಸೇರಿ ಒಟ್ಟು 12 ಕಡೆಗಳಲ್ಲಿ ದಾಳಿ ಮಾಡಿದರು.
#WATCH | Keralam: Commotion outside the residence of former Chief Minister and present LoP Pinarayi Vijayan in Thiruvananthapuram, as CPI(M) workers attacked a vehicle of ED officials.
The workers are protesting against the central agency over its searches at 10 premises in… pic.twitter.com/fx7Y4xutLB
— ANI (@ANI) May 27, 2026
ಏತನ್ಮಧ್ಯೆ, ಇಡಿ ದಾಳಿ ನಡೆಯುತ್ತಿದ್ದಾಗಲೇ ನೂರಾರು ಸಿಪಿಎಂ ಕಾರ್ಯಕರ್ತರು ಬೇಕರಿ ಜಂಕ್ಷನ್ ಮನೆಯ ಮುಂದೆ ಜಮಾಯಿಸಿ ಕೇಂದ್ರ ಸರ್ಕಾರ ಮತ್ತು ಇಡಿ ವಿರುದ್ಧ ಘೋಷಣೆ ಕೂಗಿದರು. ಕೆಲವು ಕಾರ್ಯಕರ್ತರು ಬ್ಯಾರಿಕೇಡ್ ದಾಟಿ ಮನೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರೊಂದಿಗೆ ತಳ್ಳಾಟ ನಡೆಯಿತು. ಈ ವೇಳೆ, ಕಾರ್ಯಕರ್ತರು ವಿಜಯನ್ ಮನೆಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದಾಗ ಘರ್ಷಣೆ ನಡೆದಿದ್ದು, ಕೆಲ ಕಾರ್ಯಕರ್ತರು ಭದ್ರತಾ ಸಿಬ್ಬಂದಿಯ ಮೇಲೆ ಬಾಟಲ್ ಹಾಗೂ ಹೆಲ್ಮೆಟ್ಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಇನ್ನೂ, ಸ್ಥಳದಲ್ಲಿ ಮಾಜಿ ಸಚಿವರಾದ ವಿ. ಶಿವನ್ಕುಟ್ಟಿ ಮತ್ತು ಕಡಕಂಪಳ್ಳಿ ಸುರೇಂದ್ರನ್ ಸೇರಿದಂತೆ ಸ್ಥಳೀಯ ನಾಯಕರು ಜೊತೆಗಿದ್ದಾರೆ.
ಇಡಿ ಶೋಧವು ಕೋಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್ಎಲ್) ಮತ್ತು ವೀಣಾ ವಿಜಯನ್ ಅವರ ಹಿಂದಿನ ಸಂಸ್ಥೆ ಎಕ್ಸಾಲಾಜಿಕ್ ನಡುವಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದೆ. 2017-2021ರ ಅವಧಿಯಲ್ಲಿ ಎಕ್ಸಾಲಾಜಿಕ್ ಸಂಸ್ಥೆಗೆ ಸಿಎಂಆರ್ಎಲ್ನಿಂದ ಮಾಸಿಕ ರಿಟೈನರ್ ರೂಪದಲ್ಲಿ ಸುಮಾರು 1.72 ಕೋಟಿಯಿಂದ 2.73 ಕೋಟಿ ರೂಪಾಯಿ ಪಾವತಿಯಾಗಿದೆ, ಆದರೆ ಯಾವುದೇ ಸೇವೆ ಸಲ್ಲಿಕೆಯಾಗಿಲ್ಲ ಎಂಬುದು ಆರೋಪ.
ಏತನ್ಮಧ್ಯೆ, ನಿನ್ನೆ ಕೇರಳ ಹೈಕೋರ್ಟ್, ಸಿಎಂಆರ್ಎಲ್ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿ ಇಡಿ ತನಿಖೆ ಮುಂದುವರಿಸಲು ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ದಾಳಿ ನಡೆದಿದೆ. ರಾಜ್ಯ ಸರ್ಕಾರದ ಕೆಎಸ್ಐಡಿಸಿಗೆ ಸಿಎಂಆರ್ಎಲ್ನಲ್ಲಿ 14% ಪಾಲು ಇದೆ ಎಂಬ ಅಂಶವೂ ತನಿಖೆಯಲ್ಲಿದೆ. ಇದರೊಂದಿಗೆ, ವಿಜಯನ್ ಮತ್ತು ವೀಣಾ ಈ ಹಿಂದೆ ಹಲವು ಬಾರಿ ವ್ಯವಹಾರ ಪಾರದರ್ಶಕವಾಗಿದೆ, ಬ್ಯಾಂಕ್ ಮೂಲಕ ಹಣ ವರ್ಗಾವಣೆಯಾಗಿದೆ ಮತ್ತು ತೆರಿಗೆ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಪತ್ರಿಕಾಗೋಷ್ಠಿಯಲ್ಲಿ ಇಡಿ ದಾಳಿಯನ್ನು “ಸಂಘ ಪರಿವಾರದ ಯೋಜಿತ ದಾಳಿ” ಎಂದು ಕರೆದರು. “ಇದು ರಾಜಕೀಯ ಪ್ರೇರಿತ. ಎಫ್ಐಆರ್ ಕೂಡ ಇಲ್ಲದ ಪ್ರಕರಣದಲ್ಲಿ ವಿಜಯನ್ ಅವರನ್ನು ಆರೋಪಿಯನ್ನಾಗಿ ಮಾಡುವ ಯತ್ನ ನಡೆಯುತ್ತಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹಿಂದೆ ಇದೇ ಆರೋಪಗಳನ್ನು ತಳ್ಳಿಹಾಕಿವೆ” ಎಂದು ಹೇಳಿದರು.
Thiruvananthapuram [Trivandrum],Thiruvananthapuram,Kerala













