Last Updated:
ಫ್ಯೂಚರ್ ಆಫ್ ವರ್ಕ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ದೊಡ್ಡ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಘೋಷಣೆ ಮಾಡಿದ್ದರು.
ಭಾರತದ ಸಿಲಿಕಾನ್ ವ್ಯಾಲಿ (Silicon Valley) ಎಂದು ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು (Bengaluru) ಈಗ ದೇಶದ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಯುತ್ತಿದ್ದು, ಇದರ ನಡುವೆಯೇ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಮೆರಿಕ ಮೂಲದ ಖ್ಯಾತ ಸೆಮಿಕಂಡಕ್ಟರ್ ಸಾಧನಗಳ ತಯಾರಿ ದಿಗ್ಗಜ ‘ಅಪ್ಲೈಡ್ ಮೆಟಿರಿಯಲ್ಸ್ ಇಂಕ್’ಗಾಗಿ (Applied Materials Inc.) ಬೆಂಗಳೂರಿನಲ್ಲಿ 140 ಎಕರೆ ಭೂಮಿಯನ್ನು ನಿಗದಿ ಮಾಡಲಾಗಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನತಿ ದೂರದಲ್ಲೇ ಇರುವ ಬೆಂಗಳೂರು ಸಿಗ್ನೇಚರ್ ಪಾರ್ಕ್ (ಬಿಎಸ್ಬಿಪಿ)ಯಲ್ಲಿ (Bengaluru Airport) ಈ ದೊಡ್ಡ ಪ್ರಾಜೆಕ್ಟ್ಗೆ ಭೂಮಿ ನೀಡಲಾಗಿದೆ ಎಂದು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಇದರೊಂದಿಗೆ ರಾಜ್ಯದ ಸೆಮಿಕಂಡಕ್ಟರ್ ರಂಗಕ್ಕೆ ಭಾರಿ ಬಲ ಸಿಕ್ಕಂತೆ ಆಗಿದೆ.
ಯೋಜನೆಯ ಮುಖ್ಯಾಂಶಗಳು!
- ಸ್ಥಳ: ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪದ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್.
- ಭೂಮಿ: 140 ಎಕರೆ
- ಷರತ್ತು: ಗುತ್ತಿಗೆ ಮತ್ತು ಮಾರಾಟದ ಆಧಾರದ ಮೇಲೆ ಹಂಚಿಕೆ
- ಬೆಲೆ: ಸರ್ಕಾರವು ಕಂಪನಿಗೆ ಪ್ರತಿ ಚದರ ಅಡಿಗೆ 1,288 ರೂ. ದರದಲ್ಲಿ ಭೂಮಿಯನ್ನು ಹಂಚಿಕೆ ಮಾಡಲು ನಿರ್ಧರಿಸಿದೆ, ಒಟ್ಟು 780 ಕೋಟಿ ರೂ. ಮೌಲ್ಯದ್ದಾಗಿದೆ.
ಸೆಮಿಕಂಡಕ್ಟರ್ ಉದ್ಯಮಕ್ಕೆ ನೀಡಿರುವ ಭೂಮಿಯೂ ಕಾನೂನು ಅನುಮತಿ ಮತ್ತು ಬೆಲೆ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಬಿಎಸ್ಬಿಪಿಯಲ್ಲಿ ಉಳಿದಿರುವ 267 ಎಕರೆ ಭೂಮಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಸರ್ಕಾರ ಕೆಲಸ ಮಾಡುತ್ತಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಪಾರದರ್ಶಕತೆಗಾಗಿ ತಜ್ಞರ ಸಲಹೆ ಬಳಿಕ ಮುಂದಿನ ಕಾರ್ಯ ವಿಧಾನಗಳನ್ನು ರೂಪಿಸಲಾಗುತ್ತದೆ ಎಂದು ಕೈಗಾರಿಕಾ ಇಲಾಖೆ ತಿಳಿಸಿದೆ.
ಕರ್ನಾಟಕ ತನ್ನ ಸೆಮಿಕಂಡಕ್ಟರ್ ಮತ್ತು ಸುಧಾರಿತ ತಂತ್ರಜ್ಞಾನ ಕಾರ್ಯತಂತ್ರ ಬಗ್ಗೆ ಹೆಚ್ಚು ಗಮನಹರಿಸುತ್ತಿರುವ ಕಾರಣ ಮಹತ್ವದ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಅಂದಹಾಗೆ, 2008ರಲ್ಲಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಅನ್ನು ಸ್ಥಾಪನೆ ಮಾಡಿತ್ತು. ಪಿಪಿಎ ಮಾದರಿಯಲ್ಲಿ ಅಂದರೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಕೈಗಾರಿಕಾ ಇಲಾಖೆ ಹೂಡಿಕೆಯ ಗಾತ್ರ ಮತ್ತು ಇತರ ವಿವರಗಳನ್ನು ನೀಡಬೇಕಿದೆ.
Bangalore [Bangalore],Bangalore,Karnataka













