AI ನಮ್ಮ ಕಡೆಗೆ ನುಗ್ಗಿ ಬರುತ್ತಿದೆ. ಒಂದು ದೊಡ್ಡ ಲಾರಿ ತರವೇ ಇದು ಬರ್ತಿದೆ. ಇದರ ಎದುರು ನಿಲ್ಲುವ ಬದಲು, ಡ್ರೈವರ್ ಸೀಟ್ ಅಲ್ಲಿ ಕುಳಿತು ಈ AI ಲಾರಿಯನ್ನ ಡ್ರೈವ್ ಮಾಡ್ಬೇಕಿದೆ.
ಕಟ್ಟಕಡೆ ಆಟೋ ಡ್ರೈವರ್ಗೂ ನಮನ
(ಚಿತ್ರ ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್)
ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ಒಂದು ಡೈಲಾಗ್ ಬರುತ್ತದೆ. ನಾವು ನಮ್ಮ ಬೇರು ಬಿಡಬಾರದು ಅಂತ ಒಂದು ಪಾತ್ರ ಹೇಳುತ್ತದೆ. ಆದರೆ, ಆತನಿಗೆ ಹಾರಲು ರೆಕ್ಕೆ ಬೇಕು ಅಂತ ಇನ್ನೊಂದು ಪಾತ್ರ ಹೇಳುತ್ತದೆ.
ಆದರೆ, ರೆಕ್ಕೆ ಮತ್ತು ಬೇರೆ ಎರಡೂ ಇದ್ದರೆ ಹಾರೋದು ಹೇಗೆ ಅನ್ನೋದು ಪ್ರಶ್ನೆ ಬರುತ್ತದೆ. ಆದರೂ ನಾವು ನಮ್ಮತನ ಮರೆಯದೇ ಸಿನಿಮಾ ಮಾಡಬೇಕು ಅನ್ನುವ ಅರ್ಥದಲ್ಲಿಯೇ ರಮೇಶ್ ಅರವಿಂದ್ ಹೇಳಿದ್ದಾರೆ.
ಸಿನಿಮಾ ಇಲ್ಲದೆ ಇದ್ದರೆ ಏನ್ ಆಗುತ್ತಿತ್ತು. ನಮ್ಮ ಬಾಲ್ಯ ಜಾಮೆಟ್ರಿ ಬಾಕ್ಸ್ ಹಾಗೂ ರಬ್ಬರ್ ಬಾಲ್ಗೆ ಸೀಮಿತ ಆಗಿರುತ್ತಿತ್ತು. ಆದರೆ, ಸಿನಿಮಾ ಇದನ್ನ ದಾಟಿ ನಾಡನ್ನ ತೋರಿಸಿದೆ.
ಸಿನಿಮಾ ಇಲ್ಲದೆ ಇದ್ದರೆ
(ಚಿತ್ರ ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್)
ಇದನ್ನ ದಾಟಿ ಹಿಮಾಲಯವನನ್ನ ತೋರಿಸಿದೆ. ಒಂದು ಸುಂದರ ಹುಡುಗಿಯನ್ನ ಕ್ಲೋಸ್ ಅಪ್ ಅಲ್ಲಿ ತೋರಿಸಿದ್ದು ಸಿನಿಮಾ. ಹಾಗೆ ಇದೆಲ್ಲವೂ ಸಾಧ್ಯವಾಗಿದ್ದು ಇದೇ ಸಿನಿಮಾದಿಂದಲೇ ಅಂತ ರಮೇಶ್ ಅರವಿಂದ್ ಹೇಳಿಕೊಂಡಿದ್ದಾರೆ.
ನಮ್ಮ ಚಿತ್ರರಂಗ ಸುಮ್ಮನೆ ಆಗಿಲ್ಲ. ನಮ್ಮ ಹಿರಿಯರು ಇದನ್ನ ಕಟ್ಟಿದ್ದಾರೆ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಹಾಗೂ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ವಿತರಕರು ಹೀಗೆ ಇವರ ಕೊಡುಗೇನೂ ಇದೆ.
ಕನ್ನಡ ಚಿತ್ರರಂಗವನ್ನ ಒಂದು ಕಟ್ಟಡ ಅಂದುಕೊಳ್ಳೋಣ. ಇದನ್ನ ಕಟ್ಟಲು ಎಲ್ಲರೂ ಇಟ್ಟಿಗೆ ಆಗಿಯೇ ಶ್ರಮಪಟ್ಟಿದ್ದಾರೆ. ಹಾಗೆ ಒಬ್ಬ ಆಟೋ ಡ್ರೈವರ್ ಪ್ರೇಕ್ಷಕನನ್ನ ಚಿತ್ರಮಂದಿರಕ್ಕೆ ಬಿಡುವವರೆಗೂ ಈ ಚೈನ್ ಮುಂದುವರೆಯುತ್ತದೆ. ಹಾಗಾಗಿಯೇ ಇವರಿಗೂ ನಮನ ಅಂತ ರಮೇಶ್ ಅರವಿಂದ್ ಹೇಳಿದ್ದಾರೆ.
ಕನ್ನಡ ಚಿತ್ರಗಳನ್ನ ಯಾರು ನೋಡ್ತಿಲ್ಲ. ಚಿತ್ರಗಳು ಚೆನ್ನಾಗಿ ಬರ್ತಿಲ್ಲ. ಒಳ್ಳೆ ಸಿನಿಮಾ ಮಾಡಬೇಕಿದೆ. ಈ ಎಲ್ಲ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಇತ್ತೀಚಿಗೆ ಚಂದನವನ ಅಂದು ಇಂದು ಮುಂದು ಅನ್ನುವ ಒಂದು ವಿಚಾರಗೋಷ್ಠಿಯನ್ನ ಮಾಡಿತ್ತು.
ಇದೇ ವಿಚಾರಗೋಷ್ಠಿಗೆ ಆಗಮಿಸಿದ್ದ ರಮೇಶ್ ಅರವಿಂದ್ ಅವರು ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. AI ಬಗೆಗಿನ ತಮ್ಮ ವಿಚಾರಗಳನ್ನ ಹೇಳಿಕೊಂಡಿದ್ದಾರೆ. AI ಅನ್ನ ದೊಡ್ಡ ಲಾರಿಗೂ ಹೋಲಿಸಿದ್ದಾರೆ. ರಮೇಶ್ ಅರವಿಂದ್ ಅವರ ಈ ಎಲ್ಲ ಅಭಿಪ್ರಾಯವನ್ನ kannadascreens.com ವರದಿ ಮಾಡಿದೆ.












