Last Updated:
West Bengal By-Election: ಮುರ್ಷಿದಾಬಾದ್ನ ರೆಜಿನಗರ ಮತ್ತು ಪುರ್ಬಾ ಮೇದಿನಿಪುರದ ನಂದಿಗ್ರಾಮ್ನಲ್ಲಿ ಪಚುನಾವಣೆಗಳಿಗೆ ಮಂಗಳವಾರ ಮತದಾನ ನಡೆಯಿತು. ಇಂದು ಬೆಳಿಗ್ಗೆಯಿಂದ ಮತ ಎಣಿಕೆ ಪ್ರಾರಂಭವಾಯ್ತು. ಇದೀಗ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಪಶ್ಚಿಮ ಬಂಗಾಳ: ದುರ್ಗಾಪೂಜೆಯ (Durga Puja) ಹೊಸ್ತಿಲಲ್ಲೇ ಪಶ್ಚಿಮ ಬಂಗಾಳದಲ್ಲಿ (West Bengal) ಕಮಲ ಅರಳಿದೆ. ಎರಡು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ (by-election) ಆಡಳಿತಾರೂಢ ಬಿಜೆಪಿ (BJP) ಗೆದ್ದು ಬೀಗಿದೆ. ಮುರ್ಷಿದಾಬಾದ್ನ (Murshidabad) ರೆಜಿನಗರ (Rejinagar) ಮತ್ತು ಪುರ್ಬಾ ಮೇದಿನಿಪುರದ (Purba Medinipur) ನಂದಿಗ್ರಾಮ್ನಲ್ಲಿ (Nandigram) ಉಪಚುನಾವಣೆಗಳಿಗೆ ಮಂಗಳವಾರ ಮತದಾನ ನಡೆಯಿತು. ಇಂದು ಬೆಳಿಗ್ಗೆಯಿಂದ ಮತ ಎಣಿಕೆ ಪ್ರಾರಂಭವಾಯ್ತು. ಇದೀಗ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಮುಸ್ಲಿಂ ಮತಗಳೇ ಹೆಚ್ಚಿರುವ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಸಖರೋವ್ ಸರ್ಕಾರ್ ಬರೋಬ್ಬರಿ 72,710 ಮತಗಳ ಅಂತರದಿಂದ ಗೆದ್ದಿದ್ದಾರೆ. ಶೇಕಡಾ 72ರಷ್ಟು ಜನರು ಅಲ್ಪಸಂಖ್ಯಾತರಾಗಿರುವ ರೆಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಖರೋವ್ ಸರ್ಕಾರ್ ಭಾರಿ ಮುನ್ನಡೆಯೊಂದಿಗೆ ಗೆದ್ದಿದ್ದಾರೆ.
ಇನ್ನು ಹುಮಾಯೂನ್ ಕಬೀರ್ ಅವರ ಪಕ್ಷ ಆಮ್ ಜನತಾ ಉನ್ನಯನ್ ಅಂದರೆ ಎಜೆಯುಪಿ ಪಕ್ಷದಿಂದ ಅವರ ಪುತ್ರ ಗುಲಾಮ್ ನಹಿ ಆಜಾದ್ ಸ್ಪರ್ಧಿಸಿದ್ದು, ಎರಡನೇ ಸ್ಥಾನ ಪಡೆದ್ರು. ಕಾಂಗ್ರೆಸ್ ಅಭ್ಯರ್ಥಿ ಅಬುಲ್ಲಾಹಿಲ್ ಕಾಫಿ ಮೂರನೇ ಸ್ಥಾನ ಪಡೆದ್ರು. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದೆ, ಸಿಪಿಎಂ ಐದನೇ ಸ್ಥಾನದಲ್ಲಿದೆ, ಡೆಮಾಕ್ರಟಿಕ್ ತೃಣಮೂಲ ಆರನೇ ಸ್ಥಾನದಲ್ಲಿದೆ.
ಅತ್ತ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪ್ರತಿನಿಧಿಸುತ್ತಿದ್ದ, ಹಾಲಿ ಸಿಎಂ ಸುವೇಂದು ಅಧಿಕಾರಿ ಅವರಿಂದ ತೆರವಾದ ನಂದಿಗ್ರಾಮ ಕ್ಷೇತ್ರದಲ್ಲಿಯೂ ಬಿಜೆಪಿ ಗೆದ್ದು ಬೀಗಿದೆ. ನಂದಿಗ್ರಾಮ್ನಲ್ಲಿ ಬಿಜೆಪಿ ಅಭ್ಯರ್ಥಿ ಹಾಸಿರಾಣಿ ರಥ್ ಬರೋಬ್ಬರಿ 1 ಲಕ್ಷ 22 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಾಸಿರಾಣಿ ಅವರು ಖುದ್ದು ಸಿಎಂ ಸುವೇಂದು ಅಧಿಕಾರಿ ಅವರ ದಾಖಲೆ ಮುರಿದಿದ್ದಾರೆ. ಇನ್ನು ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಎರಡನೇ ಸ್ಥಾನ ಪಡೆದ್ರು. ಸಿಪಿಎಂನ ಶಾಂತಿಗೋಪಾಲ್ ಗಿರಿ ಮೂರನೇ ಸ್ಥಾನದಲ್ಲಿದ್ದಾರೆ. ಋತಬ್ರತ-ತೃಣಮೂಲ ಅಭ್ಯರ್ಥಿ ಎಹ್ತೆಸ್ಮುಲ್ ಹಕ್ ಕೇವಲ 853 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಭರ್ಜರಿ ಗೆಲುವಿನ ಬಳಿಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ರು. “ಪಶ್ಚಿಮ ಬಂಗಾಳದಲ್ಲಿ ಮೇ 9, 2026 ರಂದು ಬಿಜೆಪಿ ಸರ್ಕಾರ ರಚನೆಯಾದ ನಂತರ, ಮರುಚುನಾವಣೆಗಳು ನಡೆದವು, ಜನರು ದಾಖಲೆಯ ಮತಗಳಿಂದ ಗೆದ್ದರು. ಇನ್ನೂ ಎರಡು ಕೇಂದ್ರಗಳಲ್ಲಿ ಉಪಚುನಾವಣೆಗಳು ನಡೆದವು. ನಾನು ನಂದಿಗ್ರಾಮದಲ್ಲಿ ದಾಖಲೆಯ ಮತಗಳೊಂದಿಗೆ ಗೆದ್ದಿದ್ದೇನೆ, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದೇನೆ ಮತ್ತು ನನ್ನ ಅತ್ಯುನ್ನತ ದಾಖಲೆಯಾದ 82,000 ಅನ್ನು ಮುರಿದಿದ್ದೇನೆ. ಹಸಿರಾಣಿ ರಥ ಗೆದ್ದಿದ್ದಾರೆ. ನಂದಿಗ್ರಾಮದ 60 ಅಲ್ಪಸಂಖ್ಯಾತ ಬೂತ್ಗಳಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ, ಅವರು ಸರ್ಕಾರದ ಅಭಿವೃದ್ಧಿಯಲ್ಲಿ ಸೇರಿಕೊಂಡಿದ್ದಾರೆ” ಎಂದು ಮುಖ್ಯಮಂತ್ರಿ ಹೇಳಿದರು.
ಕೋಲ್ಕತ್ತಾ ಪುರಸಭೆ ಮತ್ತು ಹೌರಾ ಪುರಸಭೆಯಲ್ಲಿ ಶೀಘ್ರದಲ್ಲೇ ಚುನಾವಣೆಗಳು ಬರಲಿವೆ. ದೊಡ್ಡ ಗೆಲುವುಗಳು ಕಂಡುಬರುತ್ತವೆ. ಮುಂದಿನ ವರ್ಷ, ನಾವು ಇತರ ಪುರಸಭೆಗಳಲ್ಲಿ ಚುನಾವಣೆಗಳನ್ನು ಗೆಲ್ಲುತ್ತೇವೆ. ಮುಂದಿನ ವರ್ಷ, ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಪಂಚಾಯತ್ ಚುನಾವಣೆಗಳಲ್ಲಿ ಸತತ ಗೆಲುವುಗಳನ್ನು ನೀಡುತ್ತೇವೆ. ನಾನು ಇಂದು ನಿಮಗೆ ಅದನ್ನು ಭರವಸೆ ನೀಡಿದ್ದೇನೆ” ಎಂದು ಹೇಳಿದರು.














