Murugan Ashwin: ಐಪಿಎಲ್ ಮುಗಿಯುವ ಮುನ್ನವೇ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ಮಾಜಿ ಆರ್​ಸಿಬಿ ಪ್ಲೇಯರ್ ಗುಡ್​ ಬೈ! | ಕ್ರೀಡಾ ಸುದ್ದಿ | ACTPnews

ಮುರುಗನ್ ಅಶ್ವಿನ್


Last Updated:

ಐಪಿಎಲ್ ಫ್ರಾಂಚೈಸಿಗಳು ಮತ್ತು ತಮಿಳುನಾಡನ್ನು (Tamil Nadu) ವಿವಿಧ ಸ್ವರೂಪಗಳಲ್ಲಿ ಪ್ರತಿನಿಧಿಸಿರುವ 35 ವರ್ಷದ ಮುರುಗನ್ ಅಶ್ವಿನ್ ಸೋಮವಾರ ತಮ್ಮ ನಿರ್ಧಾರವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಮುರುಗನ್ ಅಶ್ವಿನ್
ಮುರುಗನ್ ಅಶ್ವಿನ್

ಭಾರತದ ಲೆಗ್-ಸ್ಪಿನ್ನರ್ ಮುರುಗನ್ ಅಶ್ವಿನ್ (Murugan Ashwin) ಸೋಮವಾರ ದೇಶೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ಫ್ರಾಂಚೈಸಿಗಳು ಮತ್ತು ತಮಿಳುನಾಡನ್ನು (Tamil Nadu) ವಿವಿಧ ಸ್ವರೂಪಗಳಲ್ಲಿ ಪ್ರತಿನಿಧಿಸಿರುವ 35 ವರ್ಷದ ಮುರುಗನ್ ಅಶ್ವಿನ್ ಸೋಮವಾರ ತಮ್ಮ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ದೀರ್ಘ ಹೇಳಿಕೆಯಲ್ಲಿ, ಐಪಿಎಲ್ ಪ್ರಯಾಣದ ಜೊತೆಗೆ ತಮ್ಮ ದೇಶೀಯ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಆದಾಗ್ಯೂ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರವಾಗಿಲ್ಲ ಮತ್ತು ಹೊಸ ಅವಕಾಶಗಳು ಮತ್ತು ಸವಾಲುಗಳತ್ತ ಹೆಜ್ಜೆ ಹಾಕಲು ಬಯಸುವುದಾಗಿ ತಿಳಿಸಿದ್ದಾರೆ. ಅಂದರೆ ವಿದೇಶಿ ಲೀಗ್​​​ಗಳಲ್ಲಿ ಆಡಲು ಬಯಸುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ಸ್ಟಾ ಪೋಸ್ಟ್​​ ಮೂಲಕ ನಿವೃತ್ತಿ

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕ್ರಿಕೆಟ್​​​ ಅನುಭವಗಳನ್ನು ಹಂಚಿಕೊಂಡಿದ್ದಾರೆ. ” ನಾನು 6 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ, ನನಗೆ ಆಟದ ಬಗ್ಗೆ ಆಳವಾದ ಪ್ರೀತಿ ಇದೆ. ಕ್ರಿಕೆಟ್​ ನನಗೆ ತುಂಬಾ ನೀಡಿದೆ. ಕ್ರಿಕೆಟ್ ನನ್ನನ್ನು ಒಬ್ಬ ವ್ಯಕ್ತಿಯಾಗಿ ರೂಪಿಸಿದೆ. ಅದು ಮೈದಾನದಲ್ಲಿ ನನ್ನನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಅವಕಾಶವನ್ನು ನೀಡಿದೆ. ಇಲ್ಲಿಯವರೆಗಿನ ಪ್ರಯಾಣ ಅದ್ಭುತವಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ನಿಮ್ಮೆಲ್ಲರೊಂದಿಗೆ ಒಂದು ಅಪ್‌ಡೇಟ್ ಹಂಚಿಕೊಳ್ಳಲು ಬಯಸುತ್ತೇನೆ.”

” ನನ್ನ ದೇಶೀಯ ಕ್ರಿಕೆಟ್ ವೃತ್ತಿಜೀವನ ಮತ್ತು ಐಪಿಎಲ್‌ನಲ್ಲಿ ನನ್ನ ಪ್ರಯಾಣವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ ಎಂದು ಘೋಷಿಸಲು ಬಯಸುತ್ತೇನೆ. ಆದಾಗ್ಯೂ, ನಾನು ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಹುಡುಕುತ್ತೇನೆ. ನಾನು ಯಾವಾಗಲೂ ಹೊಂದಿರುವಂತೆಯೇ ಸ್ಪರ್ಧಾತ್ಮಕ ಮನೋಭಾವದಿಂದ ಆಟವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಐಪಿಎಲ್ ಫ್ರಾಂಚೈಸಿಗಳಿಗೆ ಧನ್ಯವಾದ

ಮುರುಗನ್​​ ಅಶ್ವಿನ್ ಐಪಿಎಲ್ ವೃತ್ತಿಜೀವನದಲ್ಲಿ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಈ ಬಗ್ಗೆಯೂ ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. “ನನ್ನ ಐಪಿಎಲ್ ವೃತ್ತಿಜೀವನದಲ್ಲಿ ನಾನು ಪ್ರತಿನಿಧಿಸಿದ ಆರು ತಂಡಗಳಾದ ರೈಸಿಂಗ್ ಪುಣೆ ಸೂಪರ್‌ಜೈಂಟ್, ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್), ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ” ಎಂದು ಬರೆದಿದ್ದಾರೆ.

ಕೊಹ್ಲಿ ಸೇರಿ ದಿಗ್ಗಜರೊಂದಿಗೆ ಪಯಣ

ಭಾರತೀಯ ಕ್ರಿಕೆಟ್‌ನ ಕೆಲವು ದೊಡ್ಡ ಹೆಸರುಗಳೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶದ ಬಗ್ಗೆ ಅಶ್ವಿನ್ ಮಾತನಾಡುತ್ತಾ , “ಐಪಿಎಲ್‌ನಲ್ಲಿನ ನನ್ನ ದಶಕದ ಅನುಭವವು ಆಟದ ಕೆಲವು ಶ್ರೇಷ್ಠ ಆಟಗಾರರೊಂದಿಗೆ ಬೆರೆಯುವಂತೆ ಮಾಡಿದೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ರೋಹಿತ್ ಶರ್ಮಾ ಅವರಂತಹ ದಂತಕಥೆಯ ಕ್ರಿಕೆಟಿಗರ ನಾಯಕತ್ವದಲ್ಲಿ ಆಡಲು ಅವಕಾಶವನ್ನು ನೀಡಿದೆ. ಈ ಅನುಭವಗಳು 2016 ರಲ್ಲಿ ನನ್ನ ಚೊಚ್ಚಲ ಪಂದ್ಯದ ನಂತರ ನನ್ನ ಮೇಲೆ ಕೆಲಸ ಮಾಡಲು ಮತ್ತು ಉತ್ತಮ ಕ್ರಿಕೆಟಿಗನಾಗಲು ನನಗೆ ಸಹಾಯ ಮಾಡಿವೆ” ಎಂದು ಹೇಳಿಕೊಂಡಿದ್ದಾರೆ.

ಮುರುಗನ್ ದಾಖಲೆಗಳು

ಮುರುಗನ್ ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 2016 ಮತ್ತು 2023 ರ ನಡುವೆ 34 ಲಿಸ್ಟ್ ಎ ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ, 117 ಟಿ20 ಪಂದ್ಯಗಳಲ್ಲಿ 115 ವಿಕೆಟ್ ಪಡೆದಿದ್ದಾರೆ.

ಅಶ್ವಿನ್ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್‌ಗೆ ಅಶ್ವಿನ್ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ತಮಿಳುನಾಡು ಪರ ಟಿ20ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲು ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದ್ದಾರೆ. ಮುರುಗನ್ ಅಶ್ವಿನ್ ತಮ್ಮಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಮತ್ತು ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಪಡೆಯಲು ಸಿದ್ಧ ಎಂದು ವಿದೇಶಿ ಲೀಗ್​ಗಳಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports