Bengaluru Auto: ಇದು ಆಟೋನಾ? ವಿಮಾನನಾ? ಟಿವಿ, ಫ್ಯಾನ್, ಬುಕ್ಸ್; ಬೆಂಗಳೂರು ಆಟೋ ಸಖತ್ ವೈರಲ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

News18


Last Updated:

ಕ್ರಿಯೇಟಿವ್ ಬೆಂಗಳೂರು ಆಟೋ ಡ್ರೈವರ್ ಆಟೋವನ್ನು ಲಗ್ಜರಿ ಲಾಂಜ್ ತರ ಮಾಡಿದ್ದು ವೈರಲ್, ಫ್ಯಾನ್, ಟಿವಿ, ಪುಸ್ತಕ, ಚಾರ್ಜಿಂಗ್ ಸೌಲಭ್ಯ ನೋಡಿ ನೆಟ್ಟಿಗರು ಮೆಚ್ಚುಗೆ, ಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗ್ತಿದೆ.

News18
News18

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Traffic) ಎಂದರೇ ಟ್ರಾಫಿಕ್ ಸಮಸ್ಯೆ, ಬಗೆ ಬಗೆಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ. ಆದರೆ ಇಲ್ಲೋರ್ವ ಆಟೋ ಚಾಲಕನ (Auto Driver) ಕ್ರಿಯೇಟಿವಿಟಿ ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ಆಟೋ ಎಂದರೇ ಟಾರ್ಪಾಲಿನ್ ಶೀಟ್ ಹೊದಿಕೆ ಕಾಣುತ್ತದೆ. ಆದರೆ ನೀವು ಈ ಆಟೋ ಹತ್ತಿದರೆ ನಿಮಗೆ ಯಾವುದೋ ವಿಮಾನದಲ್ಲಿ ಹತ್ತಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಅಥವಾ ಲಗ್ಜರಿ ಹೋಟೆಲ್ ರೂಮ್‌ಗೆ (Luxury Experience) ಎಂಟ್ರಿ ಕೊಟ್ಟ ಅನುಭವ ಸಿಗುತ್ತದೆ. ಪೂರ್ಣ ಎಂಬ ಮಹಿಳೆ ತಾವು ಪ್ರಯಾಣಿಸಿದ ಆಟೋ ವಿಡಿಯೋವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಟೋದಲ್ಲಿರುವ ಫೀಚರ್ಸ್ ನೋಡಿದರೆ ನಿಮ್ಮ ಮೈಂಡ್ ಬ್ಲಾಕ್ ಆಗೋದು ಅಂತೂ ಖಂಡಿತ. ವಿಮಾನದಲ್ಲಿ ಲಭ್ಯವಿರುವ ಸೌಲಭ್ಯಗಳು ಇಲ್ಲಿಯೂ ಸಿಗುತ್ತದೆ. ಹೊರಗೆ ಸುಡುವ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು, ಒಳಗೆ ಕುಳಿತುಕೊಂಡಿರುವವರಿಗೆ ತಣ್ಣನೆಯ ಗಾಳಿ ಬೀಸುವಂತೆ ಫ್ಯಾನ್ ಕೂಡ ಏರ್ಪಾಡು ಮಾಡಲಾಗಿದೆ. ಇದು ಇಲ್ಲಿಗೆ ನಿಲ್ಲೋದಿಲ್ಲ, ಇಷ್ಟಕ್ಕೆ ನಿಂತರೆ ಬೆಂಗಳೂರು ಆಟೋ ಹೇಗಾಗುತ್ತದೆ ಹೇಳಿ? ಪ್ರಯಾಣಿಕರಿಗೆ ಬೋರ್ ಆಗದಂತೆ ಇರಲು ಒಂದು ಸಣ್ಣ ಟಿವಿ, ಒಂದು ಪುಸ್ತಕಗಳು, ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಒಂದು ಪ್ಲಗ್ ಪಾಯಿಂಟ್ ಕೂಡ ವ್ಯವಸ್ಥೆ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಾನು ಬಾಡಿಗೆಗೆ ಇರುವ ರೂಮ್‌ಗಿಂತ ಈ ಆಟೋದಲ್ಲಿಯೇ ಹೆಚ್ಚು ಸೌಲಭ್ಯಗಳಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ. ಇದು ಆಟೋ ಅಲ್ಲ, ಚಕ್ರಗಳು ಇರುವ ಲಗ್ಜರಿ ಲಾಂಜ್ ಎಂದು ಮತ್ತೊಬ್ಬರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಓರ್ವ ಮಹಿಳಾ ಪ್ರಯಾಣಿಕರಾಗಿ ತಮಗೆ ಆಟೋದಲ್ಲಿ ಸಿಕ್ಕ ಆಟೋ ಡ್ರೈವರ್ ಅವರ ಶ್ರಮಕ್ಕೆ ಪೂರ್ಣ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ಸಾಮಾನ್ಯ ಆಟೋ ಪ್ರಯಾಣವನ್ನು ಮೆಮೊರಬಲ್ ಎಕ್ಸ್‌ಪೀರಿಯನ್ಸ್ ಆಗಿ ಬದಲಾವಣೆ ಮಾಡಿದ ಆಟೋ ಚಾಲಕನ ಕ್ರಿಯೇಟಿವಿಟಿಗೆ ಈಗ ಎಲ್ಲರೂ ಫಿದಾ ಆಗುತ್ತಿದ್ದಾರೆ.

ಬೆಂಗಳೂರು ಆಟೋ ರಿಕ್ಷಾ ಚಾಲಕರು ನಗರದ ಸಾರಿಗೆ ವ್ಯವಸ್ಥೆಯ ಹೃದಯ ಭಾಗ ಎಂದು ಕರೆಯುತ್ತಾರೆ. ನಗರದಲ್ಲಿ ಸುಮಾರು 3.45 ಲಕ್ಷಕ್ಕೂ ಹೆಚ್ಚು ಆಟೋಗಳು ನೋಂದಣಿಯಾಗಿದೆ. ನಗರದಲ್ಲಿ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡಿದರೆ ಆಟೋದಲ್ಲಿ ಇವುಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed