Last Updated:
ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯ ಮಂದಿಯೆಲ್ಲ ಈ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಆದರೆ, ಇದು ಅಷ್ಟೆ ಸರಳವಾಗಿಯ ನಡೆದಿದೆ. ಹಾಗೆ ನಿರಂಜನ್ ಸುಧೀಂದ್ರ ಅವರು ಎಂಗೇಜ್ ಆದ ಹುಡುಗಿ ಯಾರು ಅನ್ನೋದು ಸೇರಿದಂತೆ ಇತರ ಮಾಹಿತಿ ಇಲ್ಲಿದೆ ಓದಿ.
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಅಣ್ಣನ ಮಗ ನಟ ನಿರಂಜನ್ ಸುಧೀಂದ್ರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಯಾವಾಗ ಅನ್ನೋದು ಇನ್ನು ಗೊತ್ತಾಗಿಲ್ಲ. ಆದರೆ, ಮನೆಯವರೆಲ್ಲ ಖಾಸಗಿ ಹೋಟೆಲ್ ಒಂದರಲ್ಲಿ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥ (Engagement) ಮಾಡಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಹಾಗೂ ಉಪೇಂದ್ರ ಅವರು ಈ ಸಡಗರದಲ್ಲಿ ಭಾಗಿ ಆಗಿದ್ದಾರೆ. ಈ ಮೂಲಕ ಪ್ರಿಯಾಂಕಾ ಅವರು ನಿರಂಜನ್ ಹಾಗೂ ಸಂಜನಾ ಬಿ. ರಾಜ್ (Sanjana B Raj) ಅವರಿಗೆ ಶುಭ ಹಾರೈಸಿದ್ದಾರೆ. ಈ ಕ್ಷಣದ ಕೆಲವು ಫೋಟೋಗಳು ಇದೀಗ ಮಾಧ್ಯಗಳಿಗೂ ಹಂಚಿಕೊಳ್ಳಲಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ನಿರಂಜನ್-ಸಂಜನಾ ನಿಶ್ಚಿತಾರ್ಥ
ಸಿಂಪಲ್ ಆಗಿಯೇ ನಡೆದ ಈ ಒಂದು ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು ಭಾಗಿ ಆಗಿದ್ದರು. ಪ್ರಿಯಾಂಕಾ ಉಪೇಂದ್ರ ಹಾಗೂ ಉಪೇಂದ್ರ ವಿಶೇಷವಾಗಿಯೇ ಕಾಣಿಸಿಕೊಂಡರು.
ಸಂಜನಾ ಬಿ ರಾಜ್ ಅವರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿಲ್ಲ. ಇವರು ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. ಸ್ತ್ರಿರೋಗ ತಜ್ಞೆ ಅನ್ನೋದು ಗೊತ್ತಾಗಿದೆ.
ಇಷ್ಟು ಬಿಟ್ಟರೆ, ಇದೀಗ ನಿರಂಜನ್ ಸುಧೀಂದ್ರ ಅವರೊಟ್ಟಿಗ ಎಂಗೇಜ್ ಆಗಿದ್ದಾರೆ. ಮದುವೆ ಡೇಟ್ ಎಲ್ಲ ಇನ್ನಷ್ಟೆ ಗೊತ್ತಾಗಬೇಕಿದೆ.
ಸಂಜನಾ ಬಿ.ರಾಜ್ ಯಾರು
ನಿರಂಜನ್ ಸುಧೀಂದ್ರ ಒಂದಷ್ಟು ಸಿನಿಮಾಗಳನ್ನ ಮಾಡುತ್ತಿದ್ದಾರೆ. ಸ್ಪಾರ್ಕ್ ಸಿನಿಮಾ ಕೆಲಸ ನಡೀಯುತ್ತಿದೆ. ಅರ್ಜುನ್ ಸರ್ಜಾ ಅವರ ನಿರ್ದೇಶನದ ಸೀತಾಪಯಣದಲ್ಲಿ ಲೀಡ್ ರೋಲ್ ಮಾಡಿದ್ದರು. ಐಶ್ವರ್ಯ ಸರ್ಜಾ ಅವರಿಗೆ ಜೋಡಿ ಆಗಿದ್ದರು. ಈ ಚಿತ್ರವನ್ನ ಜನ ಮೆಚ್ಚಿಕೊಂಡಿದ್ದರು.
ಪ್ರಿಯಾಂಕಾ ಉಪೇಂದ್ರ ಅವರು ಕಾನ್ಸ್‌ನಿಂದ ವಾಪಾಸ್ ಬಂದಿದ್ದಾರೆ. ಅಲ್ಲಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ್ದಾರೆ. ಚೆಂದದ ಗೌನ್ ತೊಟ್ಟು ಕಂಗೊಳಿಸಿದ್ದಾರೆ.
ಪ್ರಿಯಾಂಕಾ ಅವರ ಸೆಪ್ಟೆಂಬರ್-21 ಚಿತ್ರ ಕಾನ್ಸ್ ಚಿತ್ರೋತ್ಸವಕ್ಕೆ ಸೆಲೆಕ್ಟ್ ಆಗಿತ್ತು. ಅದಕ್ಕೇನೆ ಪ್ರಿಯಾಂಕಾ ಅವರು ಕಾನ್ಸ್‌ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಬಂದ್ಮೇಲೆ ಮನೆಯ ಈ ಒಂದು ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಕ್ಷಣದ ಕೆಲವು ಫೋಟಗಳನ್ನು ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
May 26, 2026 10:21 AM IST













