Last Updated:
ಈ ನಟ ಹೀರೋ ಆಗಿ ಅಷ್ಟೇ ಅಲ್ಲ ನಿರ್ಮಾಪಕನಾಗಿ ಹಿಟ್ ಆಗಿದ್ದಾರೆ. ಈ ಸ್ಟಾರ್ ಹೀರೋ ನಿರ್ಮಿಸಿದ ಸಿನಿಮಾಗಳೆಲ್ಲ ಬ್ಲಾಕ್ಬಸ್ಟರ್ ಹಿಟ್ ಆಗಿವೆ.
ಬಹುಭಾಷಾ ನಟ (Actor) ಮಾಡಿದ ಸಿನಿಮಾಗಳೆಲ್ಲ ಹಿಟ್ ಆಗುತ್ತವೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ್ರೂ ಅಪಾರ ಮೆಚ್ಚುಗೆ ಗಳಿಸಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಳ್ಳೋದು ಈ ನಟನಿಗೆ ಕಾಮನ್. ಇವರು ನಟನಾಗಿ ಹಿಟ್ ಕೊಡಬಹುದು, ಆದರೆ ನಿರ್ಮಾಪಕನಾಗಿ (Producer) ಬ್ಲಾಕ್ಬಸ್ಟರ್ ಹಿಟ್ಗಳನ್ನೇ ಕೊಡೋದು.
ಹೌದು, ಇವರು ಹೀರೋ ಆಗಿ, ನಟನಾಗಿ ಎಷ್ಟು ಸಕ್ಸಸ್ಫುಲ್ ಇದ್ದಾರೋ ನಿರ್ಮಾಣದಲ್ಲಿ ಅದಕ್ಕೂ ಮೀರಿಸಿ ಎಕ್ಸ್ಪರ್ಟ್ ಆಗಿದ್ದಾರೆ. ಅವರ ಇತ್ತೀಚಿನ ಸಿನಿಮಾ ಒಂದು ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಯಾರದು?
ಆ ನಟ ಇನ್ಯಾರೂ ಅಲ್ಲ, ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ, ಪುಷ್ಪ ಮೂವಿಯಲ್ಲಿ ಅಬ್ಬರಿಸಿದ ಫಹದ್ ಫಾಸಿಲ್. ಫಹದ್ ಫಾಸಿಲ್ ಮೊದಲು ನಟ, ನಂತರ ನಿರ್ಮಾಪಕ. ಅವರು ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಬೆಂಗಳೂರು ಡೇಸ್, ಆವೇಶಂ, ವಿಕ್ರಂ, ಪುಷ್ಪ ಹೀಗೆ ಹಲವಾರು ಮೂವಿ ಹಿಟ್ ಲಿಸ್ಟ್ನಲ್ಲಿವೆ.
ಆದರೆ ಅವರು ನಿರ್ಮಿಸಿದ ಸಿನಿಮಾಗಳ ಲಿಸ್ಟ್ ನೋಡಿದರೆ ತಲೆ ಸುತ್ತೋ ಹಾಗಿದೆ. ಅಷ್ಟು ಚೆನ್ನಾಗಿ ಆಡಿಯನ್ಸ್ಗೆ ಏನು ಬೇಕು ಎಂದು ತಿಳಿದುಕೊಂಡು ಸಿನಿಮಾಗಳನ್ನ ನಿರ್ಮಿಸ್ತಾರೆ ಫಹದ್ ಫಾಸಿಲ್.
ಮಲಯಾಳಂ ಬಾಕ್ಸ್ ಆಫೀಸ್ ಮಾತ್ರವಲ್ಲದೆ ತೆಲುಗು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಮಲಯಾಳಂ ಮೂವಿ ಪ್ರೇಮಲು ನಿರ್ಮಿಸಿದ್ದು ಫಹದ್ ಫಾಸಿಲ್. ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಸಿನಿಮಾ ಗಳಿಸಿದ್ದು 130 ಕೋಟಿ ರೂಪಾಯಿ. ಇನ್ನು ಸ್ವತಃ ತಾನೇ ನಟಿಸಿದ ಆವೇಶಂ ಸಿನಿಮಾದಲ್ಲಿ ಅಮ್ಮ-ಮಗನ ಸಂಬಂಧ ಬಿಟ್ಟು ದೊಡ್ಡ ಕಥೆ ಏನೂ ಇರಲಿಲ್ಲ, ಒಂಚೂರು ಮಾಸ್ ಎಲಿಮೆಂಟ್, ಬೆಂಗಳೂರಿಗೆ ಬರುಗ ಕೇರಳದ ವಿದ್ಯಾರ್ಥಿಗಳ ಕಥೆ ಇತ್ತು. ಇದು ಗಳಿಸಿದ್ದು 155 ಕೋಟಿ. ಇತ್ತೀಚೆಗೆ ರಿಲೀಸ್ ಆದ ಬೆತ್ಲಹೇಮ್ ಕುಡುಂಬ ಯುನಿಟ್ ಏಜ್ ಗ್ಯಾಪ್ ಲವ್ಸ್ಟೋರಿ. ಇದು ಗಳಿಸಿದ್ದು 310 ಕೋಟಿ. ಅಲ್ಲಿಗೆ ಫಹದ್ ಎಂಥಾ ಸಕ್ಸಸ್ಫುಲ್ ಪ್ರೊಡ್ಯಸರ್ ಎನ್ನುವುದನ್ನು ಲೆಕ್ಕ ಹಾಕಬಹುದು.














