Darshan: ಪಟ್ಟಣಗೆರೆ ಶೆಡ್‌ನಲ್ಲಿ ಅಂದು ನಡೆದಿದ್ದೇನು? ರೇಣುಕಾಸ್ವಾಮಿ ಮೇಲಿನ ಹ*ಯ ಬಗ್ಗೆ ಪ್ರದೋಷ್ ಮಹತ್ವದ ಹೇಳಿಕೆ | | ACTPnews

News18


Last Updated:

ಇಂದಿನ ವಿಚಾರಣೆಯಲ್ಲಿ ಪ್ರದೋಷ್ ಹೇಳಿಕೆಯ ಹಲವು ಅಂಶಗಳನ್ನು ದಾಖಲಿಸಲಾಗಿದ್ದು, ಇನ್ನೂ ಕೆಲವು ವಿಚಾರಗಳ ಕುರಿತು ಹೇಳಿಕೆ ಪಡೆಯುವುದು ಬಾಕಿಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ನಾಳೆಯೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಸುವ ಸಾಧ್ಯತೆಯಿದೆ.

News18
News18

ಚಿತ್ರದುರ್ಗದ ರೇಣುಕಾಸ್ವಾಮಿ ಕೊ* ಪ್ರಕರಣದ ವಿಚಾರಣೆ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸಿಸಿಎಚ್ ಕೋರ್ಟ್ 59ರಲ್ಲಿ ಮುಂದುವರಿದಿದೆ. ಜೊತೆಗೆ ಪ್ರಕರಣದ ಇತರ ಆರೋಪಿಗಳು, ನಟ ದರ್ಶನ್ ಸೇರಿದಂತೆ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಇಂದಿನ ದಿನದ ವಿಚಾರಣೆಯಲ್ಲಿಯೂ ಪ್ರದೋಷ್ ಸಂಪೂರ್ಣ ಹೇಳಿಕೆ ದಾಖಲು ಪ್ರಕ್ರಿಯೆ ಮುಕ್ತಾಯಗೊಂಡಿಲ್ಲ. ಹೀಗಾಗಿ ನಾಳೆಯೂ ಹೇಳಿಕೆ ಮುಂದುವರಿಯಲಿದೆ.

ಇಂದಿನ ವಿಚಾರಣೆಯಲ್ಲಿ ಪ್ರದೋಷ್ ಹೇಳಿಕೆಯ ಹಲವು ಅಂಶಗಳನ್ನು ದಾಖಲಿಸಲಾಗಿದ್ದು, ಇನ್ನೂ ಕೆಲವು ವಿಚಾರಗಳ ಕುರಿತು ಹೇಳಿಕೆ ಪಡೆಯುವುದು ಬಾಕಿಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ನಾಳೆಯೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಸುವ ಸಾಧ್ಯತೆಯಿದೆ.

ಪ್ರದೋಷ್ ಈಗಾಗಲೇ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಶೆಡ್‌ನಲ್ಲಿ ನಡೆದಿದ್ದ ಹಲ್ಲೆ ಹಾಗೂ ಅಲ್ಲಿ ಸಂಭವಿಸಿದ ಘಟನೆಗಳ ಕುರಿತು ನ್ಯಾಯಾಲಯದ ಮುಂದೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಮೇಲೆ ಆರೋಪಿಗಳು ಹೇಗೆಲ್ಲಾ ಹಲ್ಲೆ ನಡೆಸಿದರು ಎಂಬ ಕುರಿತ ವಿವರಗಳನ್ನೂ ಪ್ರದೋಷ್ ಹೇಳಿಕೆಯಲ್ಲಿ ದಾಖಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್ ಸೇರಿ ಆರೋಪಿಗಳ ಹಾಜರು

ಇನ್ನು ಪ್ರದೋಷ್ ನ ಪೊಲೀಸರು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೆ, ಪ್ರಕರಣದ ಇತರ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿದ್ದಾರೆ. ನಟ ದರ್ಶನ್ ಸೇರಿದಂತೆ ಉಳಿದ ಆರೋಪಿಗಳ ಹಾಜರಾತಿ ವೀಡಿಯೋ ಕಾನ್ಫರೆನ್ಸ್ ಮೂಲಕ ದಾಖಲಾಗಿದೆ.

ಪ್ರದೋಷ್ ಹೇಳಿಕೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಮುಂದಿನ ದಿನಗಳ ವಿಚಾರಣೆಯ ಮೇಲೂ ಕುತೂಹಲ ಮೂಡಿದೆ. ವಿಶೇಷವಾಗಿ ಶವ ಸಾಗಾಟ ಮತ್ತು ಆರೋಪಿಗಳ ಸರೆಂಡರ್‌ಗೆ ಸಂಬಂಧಿಸಿದ ಅಂಶಗಳ ಕುರಿತು ನಾಳೆ ಯಾವ ಮಾಹಿತಿ ದಾಖಲಾಗಲಿದೆ ಎಂಬುದು ಗಮನ ಸೆಳೆದಿದೆ

ಇಂದಿನ ವಿಚಾರಣೆಯಲ್ಲಿ ಪ್ರದೋಷ್ ಹೇಳಿಕೆ ಸಂಪೂರ್ಣವಾಗಿ ಮುಗಿಯದ ಹಿನ್ನೆಲೆಯಲ್ಲಿ ನಾಳೆಯೂ ಪ್ರಕ್ರಿಯೆ ಮುಂದುವರಿಯಲಿದೆ. ನಾಳೆ ರೇಣುಕಾಸ್ವಾಮಿ ಶವ ಸಾಗಾಟಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಆರೋಪಿಗಳು ಸರೆಂಡರ್ ಆದ ಪ್ರಕ್ರಿಯೆಯ ಕುರಿತು ಪ್ರದೋಷ್ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.

ವರದಿ- ಮಂಜುನಾಥ್, ಪ್ರತಿನಿಧಿ, ನ್ಯೂಸ್ 18 ಕನ್ನಡ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed