Gulveer Singh: 5 ದಿನಗಳಲ್ಲಿ 3 ರೇಸ್, 3 ಪದಕ! ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಸಾಧನೆ | ಕ್ರೀಡಾ ಸುದ್ದಿ | ACTPnews

ಗುಲ್ವೀರ್ ಸಿಂಗ್ AFP)


Last Updated:

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಓಟಗಾರ ಗುಲ್ವೀರ್ ಸಿಂಗ್ ಅಂತಹದೇ ಒಂದು ಅದ್ಭುತ ಮತ್ತು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಂದೇ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಮೂರು ಪದಕಗಳನ್ನು ಜಯಿಸಿದ ಭಾರತದ ಎರಡನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಗುಲ್ವೀರ್ ಪಾತ್ರರಾಗಿದ್ದಾರೆ.

ಗುಲ್ವೀರ್ ಸಿಂಗ್ AFP)
ಗುಲ್ವೀರ್ ಸಿಂಗ್ AFP)

ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಕೆಲವು ಸಾಧನೆಗಳು ಕೇವಲ ಪದಕಗಳ ಪಟ್ಟಿಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಮುಂಬರುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗುತ್ತವೆ. ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತದ ಓಟಗಾರ ಗುಲ್ವೀರ್ ಸಿಂಗ್ (Gulveer Singh) ಅಂತಹದೇ ಒಂದು ಅದ್ಭುತ ಮತ್ತು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಂದೇ ಏಷ್ಯನ್ ಗೇಮ್ಸ್ ಆವೃತ್ತಿಯಲ್ಲಿ ಮೂರು ಪದಕಗಳನ್ನು ಜಯಿಸಿದ ಭಾರತದ ಎರಡನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಗುಲ್ವೀರ್ ಪಾತ್ರರಾಗಿದ್ದಾರೆ.

ಪಿ.ಟಿ. ಉಷಾ ಸಾಲಿಗೆ ಸೇರಿದ ಗುಲ್ವೀರ್ 

ಇವರಿಗಿಂತ ಮುನ್ನ ಈ ಐತಿಹಾಸಿಕ ದಾಖಲೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್ ಪಿ.ಟಿ. ಉಷಾ ಅವರ ಹೆಸರಿನಲ್ಲಿತ್ತು. ಪಿ.ಟಿ. ಉಷಾ ಅವರು 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ 4 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ಗೆದ್ದು ಇಡೀ ಏಷ್ಯಾವನ್ನೇ ಬೆರಗುಗೊಳಿಸಿದ್ದರು. 1986ರ ಆ ಸ್ಮರಣೀಯ ಕ್ರೀಡಾಕೂಟದ ದಶಕಗಳ ನಂತರ, ಗುಲ್ವೀರ್ ಸಿಂಗ್ ಅಂತಹದೇ ಇತಿಹಾಸವನ್ನು ಪುನರಾವರ್ತಿಸುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳು ಹೆಮ್ಮೆಪಡುವಂತೆ ಮಾಡಿದ್ದಾರೆ.

5 ದಿನಗಳಲ್ಲಿ 4 ಕಠಿಣ ರೇಸ್‌

ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಗುಲ್ವೀರ್ ಸಿಂಗ್ ಅವರ ಪಯಣ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ. ಅವರು ಕೇವಲ 5 ದಿನಗಳಲ್ಲಿ 4 ಕಠಿಣ ರೇಸ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯನ್ನು ಸಾಬೀತುಪಡಿಸಿದ್ದಾರೆ. 1500 ಮೀಟರ್‌ನಿಂದ ಹಿಡಿದು 10,000 ಮೀಟರ್‌ವರೆಗಿನ ರೇಸ್‌ಗಳಲ್ಲಿ ಗುಲ್ವೀರ್ ಟ್ರ್ಯಾಕ್‌ಗೆ ಇಳಿದಾಗಲೆಲ್ಲಾ ಪದಕದೊಂದಿಗೇ ಮರಳಿ ದೇಶದ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ.

10,000 ಮತ್ತು 1500 ಮೀಟರ್‌ನಲ್ಲಿ ಬೆಳ್ಳಿ ಪದಕದ ಬೇಟೆ 

ಗುಲ್ವೀರ್ ಅವರ ಈ ಐತಿಹಾಸಿಕ ಹ್ಯಾಟ್ರಿಕ್ ಪದಕದ ಸಾಧನೆ ಆರಂಭವಾಗಿದ್ದು ಪುರುಷರ 10,000 ಮೀಟರ್ ರೇಸ್ ಮೂಲಕ. ಅದರಲ್ಲಿ ಅವರು 28 ನಿಮಿಷ 29.38 ಸೆಕೆಂಡುಗಳಲ್ಲಿ ರೇಸ್ ಮುಗಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇದಾದ ನಂತರ ಪುರುಷರ 1500 ಮೀಟರ್ ರೇಸ್‌ನಲ್ಲಿ 3 ನಿಮಿಷ 36.72 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ (Personal Best) ಮತ್ತೊಮ್ಮೆ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡರು.

5000 ಮೀಟರ್‌ನಲ್ಲಿ ಕಂಚು ಗೆದ್ದು ಹ್ಯಾಟ್ರಿಕ್ ಸಾಧನೆ 

ಸತತ ಮೂರು ರೇಸ್‌ಗಳ ಭಾರಿ ಒತ್ತಡ ಮತ್ತು ದಣಿವರಿಯದ ಗುಲ್ವೀರ್ ಅವರ ಹೋರಾಟದ ಕಿಚ್ಚು ಕಮ್ಮಿಯಾಗಲಿಲ್ಲ. ಪುರುಷರ 5000 ಮೀಟರ್ ಫೈನಲ್ ಪಂದ್ಯದಲ್ಲಿ ಅವರು 13 ನಿಮಿಷ 32.75 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕೆ ಮುತ್ತಿಟ್ಟರು. ಈ ಕಂಚಿನ ಪದಕದೊಂದಿಗೆ ಗುಲ್ವೀರ್ ಸಿಂಗ್ ಅವರು ಮೂರು ವಿಭಿನ್ನ ರೇಸ್‌ಗಳಲ್ಲಿ ಮೂರು ಪದಕಗಳನ್ನು ಗೆದ್ದ ಅಪರೂಪದ ಹ್ಯಾಟ್ರಿಕ್ ಸಾಧನೆಯನ್ನು ಪೂರ್ಣಗೊಳಿಸಿದರು.

ಲಕ್ಷಾಂತರ ಯುವ ಅಥ್ಲೀಟ್‌ಗಳಿಗೆ ಪ್ರೇರಣೆ 

ಕೇವಲ 5 ದಿನಗಳಲ್ಲಿ 4 ಕಠಿಣ ರೇಸ್‌ಗಳನ್ನು ಓಡಿ, ಪ್ರತಿಯೊಂದು ವಿಭಾಗದಲ್ಲೂ ಪದಕ ಗೆದ್ದು ದೇಶದ ಧ್ವಜವನ್ನು ಎತ್ತಿ ಹಿಡಿದಿರುವುದು ಗುಲ್ವೀರ್ ಸಿಂಗ್ ಅವರ ಅಪ್ರತಿಮ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ನಗೋಯಾದಲ್ಲಿ ಅವರ ಈ ಅಸಾಧಾರಣ ಪ್ರದರ್ಶನವು ಅವರನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದೆ ಮಾತ್ರವಲ್ಲದೆ, ದೇಶದ ಲಕ್ಷಾಂತರ ಯುವ ಅಥ್ಲೀಟ್‌ಗಳಿಗೆ ಹೊಸ ಆದರ್ಶಪ್ರಾಯ ರಾಯಭಾರಿಯಾಗಿ ಮೂಡಿಬರುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports