Last Updated:
12 ಗಂಟೆಗೆ ಶುರುವಾದ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ರೇಣುಕಾಸ್ವಾಮಿ ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟನಾ ಪ್ರದೋಷ್?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಿದ್ದು ಇಂದು ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ. 59 ನೇ ಸಿಸಿಎಚ್ ಕೋರ್ಟ್ ನಲ್ಲಿ ಮಾಫಿ ಸಾಕ್ಷಿ (Approver) ಹೇಳಿಕೆ ದಾಖಲು ನಡೆಯುತ್ತಿದ್ದು ಕೋರ್ಟ್ (Court) ಪ್ರದೋಷ್ ನಿಂದ ಹೇಳಿಕೆ ಪಡೆಯುತ್ತಿದ್ದಾರೆ.
ಜಡ್ಜ್ ಸುಜಾತಾ ಎಂ ಸಾಂಬ್ರಾಣಿಯಿಂದ ಹೇಳಿಕೆ ದಾಖಲು ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೂ ಹೇಳಿಕೆ ದಾಖಲು ಪ್ರಕ್ರಿಯೆ ನಡೆದಿದ್ದು ಊಟದ ವಿರಾಮದ ಬಳಿಕ ಮತ್ತೆ ಹೇಳಿಕೆ ದಾಖಲಿಸಲಾಗುತ್ತಿದೆ.
3 ಗಂಟೆ ಬಳಿಕ ಪ್ರದೂಷ್ ನಿಂದ ಮತ್ತೆ ಹೇಳಿಕೆ ದಾಖಲು ನಡೆದಿದ್ದು ತಾನೂ ಅರ್ಜಿಯಲ್ಲಿ ಉಲ್ಲೇಖ ಮಾಡಿದ ಎಲ್ಲಾ ಅಂಶಗಳನ್ನು ಕೋರ್ಟ್ ಮುಂದೆ ಹೇಳಿದ್ದಾನೆ.














