Darshan Case: ರೇಣುಕಾಸ್ವಾಮಿ ಕೇಸ್​ನ ಮಹತ್ವದ ಹಂತ! ಮಾಫಿ ಸಾಕ್ಷಿ ಹೇಳಿಕೆ ದಾಖಲು ಆರಂಭ | Renukaswamy case darshan approver pradosh statement filing big udpate | | ACTPnews

ಪವಿತ್ರಾ-ದರ್ಶನ್-ಪ್ರದೋಷ್-ರೇಣುಕಾಸ್ವಾಮಿ


Last Updated:

ರೇಣುಕಾಸ್ವಾಮಿ ಕೇಸ್​ ಈಗ ಮಹತ್ವದ ಹಂತ ತಲುಪಿದೆ. ದರ್ಶನ್ ಲಾಯರ್ ಅರ್ಜಿ ವಜಾ ಆದ ನಂತರ ಇದೀಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ಶುರುವಾಗಿದೆ.

ಪವಿತ್ರಾ-ದರ್ಶನ್-ಪ್ರದೋಷ್-ರೇಣುಕಾಸ್ವಾಮಿ
ಪವಿತ್ರಾ-ದರ್ಶನ್-ಪ್ರದೋಷ್-ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ಮಹತ್ವದ ಹಂತಕ್ಕೆ ತಲುಪಿದೆ. ದರ್ಶನ್ (Darshan) ಪರ ವಕೀಲರಿಂದ (Lawyer) ಮಾಫಿ ಸಾಕ್ಷಿ ತಡೆಯೋ ಸಾಕಷ್ಟು ಪ್ರಯತ್ನಗಳ ನಂತರ ಅದೆಲ್ಲವೂ ವಿಫಲವಾಗಿ ಈಗ ಕೋರ್ಟ್​ನಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿ ದಾಖಲು ಪ್ರಕ್ರಿಯೆ ಶುರುವಾಗಿದೆ.

ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್

ವಿಚಾರಣೆ ಆರಂಭವಾಗಿದ್ದು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ ಹಿನ್ನೆಲೆ ಕೇಸ್ ಗೆ ಸಂಬಂಧಿಸಿದ ವಕೀಲರು ಬಿಟ್ಟರೆ ಎಲ್ಲರೂ ಹೊರ ಹೋಗುವಂತೆ ಜಡ್ಜ್ ಸೂಚನೆ ಕೊಟ್ಟಿದ್ದಾರೆ. ಇನ್‌ ಕ್ಯಾಮೆರಾ ಪ್ರೊಸಿಡಿಂಗ್ಸ್ ನಲ್ಲಿ ಪ್ರದೂಷ್ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದ್ದು ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಕೋರ್ಟ್ ಶುರು ಮಾಡಿದೆ.

ಆರೋಪಿಗಳೆಲ್ಲಾ ಕೋರ್ಟ್ ಗೆ ಹಾಜರಾಗಿದ್ದು ವಿಸಿ ಮೂಲಕ ದರ್ಶನ್ ಹಾಗೂ ಪವಿತ್ರಾಗೌಡ ಹಾಜರಾಗಿದ್ದಾರೆ. ದೇವರ ಮೇಲೆ ಪ್ರಮಾಣ ಮಾಡಿ ಪ್ರದೂಷ್ ಹೇಳಿಕೆ ದಾಖಲಿಸಲು ಮುಂದಾಗಿದ್ದಾನೆ.

ವರದಿ: ಮಾದೇಶ್ ಸಿಎನ್. ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed