Last Updated:
ಬಿಗ್ ಬಾಸ್ ಕಿಚ್ಚನ ಚಪ್ಪಾಳೆಗೆ ಮತ್ತಷ್ಟು ಬೆಲೆ ಬಂದಿದೆ. ಕಿಚ್ಚನ ಚಪ್ಪಾಳೆ ಪಡೆಯೋ ಸ್ಪರ್ಧಿಗೆ ಇನ್ಮುಂದೆ 1 ಲಕ್ಷ ಬಹುಮಾನ ಕೊಡಲಾಗುತ್ತಿದೆ. ಈ ಬಹುಮಾನ ಈ ವಾರ ಯಾರಿಗೆ ಬಂತು ಅನ್ನುವುದು ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichacha Sudeepa) ಚಪ್ಪಾಳೆಗೆ ಮತ್ತೊಂದು ಬೆಲೆ ಬಂದಿದೆ. ಕಪ್ ಗೆಲ್ತೆವೋ, ಬಿಡ್ತೆವೋ ಅದು ಬೇರೆ ಮಾತು. ಆದರೆ, ಒಮ್ಮೆ ಕಿಚ್ಚನ ಚಪ್ಪಾಳೆ (Kicchana Chappale) ಪಡೆಯಬೇಕು ಅಂತ ಮನೆಯ ಸದಸ್ಯರು ಯೋಚನೆ ಮಾಡ್ತಾ ಇದ್ದರು. ಅಂತಹ ಚಪ್ಪಾಳೆಗೆ ಇದೀಗ ಮತ್ತೊಂದು ಬೆಲೆ ಬಂದಿದೆ. ಚಪ್ಪಾಳೆ (Chappale) ಪಡೆದ ಆಯಾ ಸದಸ್ಯರಿಗೆ ಇನ್ಮುಂದೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡಲಾಗುತ್ತಿದೆ. ಬಿಗ್ ಬಾಸ್ ಸೀಸನ್-13 ರ ಮೊದಲ ಚಪ್ಪಾಳೆಯನ್ನ ಆಸಿಯಾ ಫಿರ್ದೋಸ್ (Aasiya Firdose) ಪಡೆದುಕೊಂಡಿದ್ದಾರೆ. ಕಿಚ್ಚನ ಚಪ್ಪಾಳೆಯ 1 ಲಕ್ಷ ಬಹುಮಾನ ಪಡೆದ ಮೊದಲ ಸ್ಪರ್ಧಿ ಇವರೇ ಆಗಿದ್ದಾರೆ.
ಕಿಚ್ಚ ಸುದೀಪ್ ಸುಮ್ನೆ ಚೆಪ್ಪಾಳೆ ಕೊಡುವುದಿಲ್ಲ. ಅರ್ಹರಿಗೆ ಮಾತ್ರ ಈ ಚಪ್ಪಾಳೆ ಕೊಡ್ತಾರೆ. ಯಾಕೆ ಕೊಡ್ತಾ ಇದ್ದೇನೆ ಅಂತಲೂ ಹೇಳ್ತಾನೇ ಬಂದಿದ್ದಾರೆ.
ಕಿಚ್ಚನ ಚಪ್ಪಾಳೆಗೆ ಭಾರೀ ಬೆಲೆ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಬಿಗ್ ಬಾಸ್ ಸೀಸನ್-13 ರಿಂದ ಈ ಒಂದು ಚಪ್ಪಾಳೆಗೆ ಮತ್ತೊಂದು ಬೆಲೆ ಬಂದಿದೆ. ಕಿಚ್ಚನ ಚಪ್ಪಾಳೆ ಪಡೆಯೋ ಸ್ಪರ್ಧಿಗೆ ಒಂದು ಲಕ್ಷ ರೂಪಾಯಿ ಕೊಡ್ತಾ ಇದ್ದಾರೆ. ಈ ಹಿಂದೆ ಕಿಚ್ಚನ ಚಪ್ಪಾಳೆ ಪಡೆಯೋರಿಗೆ ಕಿಚ್ಚನ ಒಂದು ಗಿಫ್ಟ್ ಕೊಡ್ತಾ ಇದ್ದರು.
ಇನ್ಮುಂದೆ ಕಿಚ್ಚನ ಚಪ್ಪಾಳೆ ಪಡೆಯೋರು ಒಂದು ಲಕ್ಷ ಪಡೆಯಲಿದ್ದಾರೆ. ಈ ಒಂದು ಲಕ್ಷ ರೂಪಾಯಿಯನ್ನ ಮೊದಲು ಆಸಿಯಾ ಫಿರ್ದೋಸ್ ಪಡೆದುಕೊಂಡಿದ್ದಾರೆ.
ಕಿಚ್ಚನ ಚಪ್ಪಾಳೆ ಹಾಗೆ ಒಂದು ಸೀಸನ್ ಅಲ್ಲಿ ಶುರು ಆಯಿತು. ಉತ್ತಮವಾಗಿ ಆಡಿದ ಸ್ಪರ್ಧಿಗೆ ಕಿಚ್ಚ ಸುದೀಪ್ ಚಪ್ಪಾಳೆ ಹೊಡೆದರು. ಅಲ್ಲಿಂದಲೇ ಈ ಚಪ್ಪಾಳೆ ಪಡೆಯಬೇಕು ಅಂತಲೇ ಸ್ಪರ್ಧಿಗಳು ಆಸೆ ಪಡ್ತಾ ಇದ್ದರು.
ಕಪ್ ಗೆಲ್ತೆವೋ ಇಲ್ವೋ ಅದು ನಂತರದ ಮಾತಾಗುತ್ತದೆ. ಇಲ್ಲಿಂದ ಹೋಗುವ ಮೊದಲು ಕಿಚ್ಚನ ಚಪ್ಪಾಳೆ ಪಡೆಯಬೇಕು ಅನ್ನುವ ಮಟ್ಟಿಗೆ ಈ ಚಪ್ಪಾಳೆಗೆ ಬೆಲೆ ಬಂತು.
ಆಸಿಯಾಗೆ ಕಿಚ್ಚನ 1 ಲಕ್ಷದ ಚಪ್ಪಾಳೆ
(ಚಿತ್ರ ಕೃಪೆ: ಆಸಿಯಾ ಫಿರ್ದೋಸ್ ಇನ್ಸ್ಟಾಗ್ರಾಮ್)
ಚಪ್ಪಾಳೆಯ ಮಹತ್ವ ಹೋಗ್ತಾ ಹೋಗ್ತಾ ಜಾಸ್ತಿನೇ ಆಯಿತು. ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಹೋಗುತ್ತದೆ. ಕ್ಲಾಸ್ ಇನ್ಯಾರಿಗೆ ಅನ್ನುವ ಮಟ್ಟಿಗೆ ಹೋಯಿತು.
ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿಗಳಿಗೆ ಒಂದು ಲಕ್ಷ ರೂಪಾಯಿ ಕೊಡ್ತಾ ಇದ್ದಾರೆ. ಆಸಿಯಾ ಫಿರ್ದೋಸ್ ಈ ಒಂದು ಬಹುಮಾನ ಪಡೆದಿದ್ದಾರೆ. ಈ ಸೀಸನ್ನ ಮೊದಲ ಕಿಚ್ಚನ ಚಪ್ಪಾಳೆಯನ್ನು ಇವರೇ ಪಡೆದಿದ್ದಾರೆ ಅಂತ ಹೇಳಬಹುದು.














