Last Updated:
Renukaswamy case: ಮಾಫಿ ಸಾಕ್ಷಿಯನ್ನು ತಡೆಯೋ ಕೊನೆಯ ಪ್ರಯತ್ನ ಕೈಕೊಟ್ಟಿದೆ. ದರ್ಶನ್ ಮುಂದಿರುವ ದಾರಿಗಳು ಕ್ಲೋಸ್ ಆದವಾ? ಮುಂದೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪದಲ್ಲಿ ಜೈಲು ಸೇರಿರುವ ದರ್ಶನ್ (Darshan) ಹಾಗೂ ಪವಿತ್ರಾ ಗೌಡ (Pavithra Gowda) ಮತ್ತು ಗ್ಯಾಂಗ್ಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಪವಿತ್ರಾ ಗೌಡ ಹಲವಾರು ಬಾರಿ ಜಾಮೀನಿಗೆ (Bail) ಅರ್ಜಿ ಸಲ್ಲಿಸಿದರೂ ಕೂಡಾ ಅವರ ಬೇಲ್ ಅಪ್ಲಿಕೇಷನ್ ರಿಜೆಕ್ಟ್ ಆಗುತ್ತಲೇ ಇದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರದೋಷ್ (Pradosh) ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದಕ್ಕೂ ದಿನಾಂಕ ನಿಗದಿಯಾಗಿದೆ.
ಹೇಗಾದರೂ ಸರಿ ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸೋದನ್ನು ತಡೆಯಲೇಬೇಕು ಎಂದು ಪಣತೊಟ್ಟ ದರ್ಶನ್ ಲಾಯರ್ ಸೆ.26ರಂದು ಕೋರ್ಟ್ಗೆ ಅರ್ಜಿ ಸಲ್ಲಿಸಿ, ನಮಗೆ ಆದೇಶ ಪ್ರತಿ ಸಿಕ್ಕಿದ್ದು ತಡವಾಗಿ, ನಾವು ಸುಪ್ರೀಂಗೆ ಹೋಗಬೇಕು, ಹಾಗಾಗಿ ಸೋಮವಾರದ ಮಾಫಿ ಸಾಕ್ಷಿ ಹೇಳಿಕೆ 1 ವಾರ ಮುಂದೂಡಬೇಕು ಎಂದು ವಾದ ಮಾಡಿದ್ದರು.
ಆದರೆ ದರ್ಶನ್ ಲಾಯರ್ ವಾದ ಈ ಬಾರಿ ಕೋರ್ಟ್ ಮುಂದೆ ಸಾಕಾಗಿಲ್ಲ. ಪ್ರಾಸಿಕ್ಯೂಷನ್ ಕಡೆಯಿಂದ ಖಡಕ್ ಪ್ರತಿವಾದ ಬಂದಿದ್ದು, ದರ್ಶನ್ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ತಡೆಯೋ ಕೊನೆಯ ಪ್ರಯತ್ನವೂ ಕೈಕೊಟ್ಟಿದೆ.
ಎಎಸ್ಪಿಪಿ ಸಚಿನ್ ವಾದ ಮಾಡಿದ್ದು ಈಗಾಗಲೇ 24.09 ರಂದು ಪ್ರದೂಷ್ ಗೆ ಸಮನ್ಸ್ ನೀಡಲಾಗಿದೆ. ಹೈಕೋರ್ಟ್ ನಲ್ಲಿ ಅರ್ಜಿ ವಾದ ಬಳಿಕವೇ ಸಮನ್ಸ್ ಜಾರಿ ಮಾಡಲಾಗಿದೆ. ಇಲ್ಲಿ ಹೊಸದಾದ ಯಾವುದೇ ಮಾಹಿತಿ, ಸಂಗತಿಗಳಿಲ್ಲ. ಈ ಅರ್ಜಿಯನ್ನು ಪುರಸ್ಕರಿಸಬಾರದು ಎಂದಿದ್ದಾರೆ.
ನ್ಯಾಯಾಲಯದ ಆದೇಶದಂತೆ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಸೋಮವಾರ ನಡೆಸಲು ನಿಗದಿಯಾಗಿದೆ. ಹೀಗಾಗಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಒಂದು ವಾರದ ಮುಂದೂಡಿಕೆ ಮನವಿ ಇದೀಗ ವಜಾಗೊಂಡಿರುವ ಹಿನ್ನೆಲೆಯಲ್ಲಿ ನಿಗದಿತ ಪ್ರಕ್ರಿಯೆ ಮುಂದುವರಿಯಲಿದೆ.
ನಿಮಗೆ ಮಾಫಿ ಸಾಕ್ಷಿಯನ್ನು ಪಾಟೀಸವಾಲಿಗೊಳಪಡಿಸುವ ಪೂರ್ಣ ಹಕ್ಕಿದೆ. ಯಾವ ಪ್ರಶ್ನೆ ಕೇಳಿ ಅವನ ಸ್ಥಿತಿ ತೋರಿಸಬೇಕೆಂಬುದು ನಿಮಗೆ ಗೊತ್ತಿದೆ. ಇಲ್ಲಿವರೆಗೂ ಏನು ಮಾಡುತ್ತಿದ್ದ ಎಂಬುದನ್ನು ಪ್ರಶ್ನಿಸಬಹುದು. ಆತ ಕಿವಿ ಮೇಲೆ ಹೂ ಮುಡಿಸುತ್ತಿದ್ದಾನಾ ಎಂಬುದನ್ನೆಲ್ಲಾ ನೋಡಬೇಕು ಎಂದು ಜಡ್ಜ್ ಹೇಳಿದ್ದರು.
ನಿಮ್ಮ ಕಕ್ಷಿದಾರರು ನಿಮ್ಮ ಸುರಕ್ಷಿತ ಕೈಗಳಲ್ಲಿದ್ದಾರೆ. ನೀವು ಕ್ರಾಸ್ ಎಗ್ಸಾಮಿನೇಷನ್ ವೇಳೆ ಎಲ್ಲವನ್ನೂ ಪ್ರಶ್ನಿಸಬಹುದು. ಪ್ರದೂಷ್ ಹೇಳಿಕೆಯ ಪ್ರತಿಯೊಂದು ಅಂಶವನ್ನು ಪ್ರಶ್ನಿಸಬಹುದು. ಮಾಫಿ ಸಾಕ್ಷಿಯನ್ನು ವಿಶ್ವಾಸಾರ್ಹವಲ್ಲವೆಂಬುದನ್ನು ನೀವು ವಾದಿಸಬಹುದು ಎಂದು ನ್ಯಾ.ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತ್ತು.














