Darshan Case: ಒಬ್ಬಿಬ್ಬರಲ್ಲ, ಬರೋಬ್ಬರಿ 16 ಆರೋಪಿಗಳ ಲಾಯರ್​ಗಳಿಂದ ಪ್ರದೋಷ್ ಕ್ರಾಸ್ ಎಕ್ಸಾಮಿನೇಷನ್! | | ACTPnews

ದರ್ಶನ್ (ಚಿತ್ರ ಕೃಪೆ: ದರ್ಶನ್ ಇನ್​ಸ್ಟಾಗ್ರಾಮ್)


Last Updated:

Darshan Case: ಡಿ ಗ್ಯಾಂಗ್​​​ಗೆ ಢವ ಢವ ಶುರುವಾಗಿದೆ. ಮಾಫಿ ಸಾಕ್ಷಿ ಹೇಳಿಕೆಗೆ ಕೌಂಟ್​ಡೌನ್ ಶುರುವಾಗಿದೆ. ಪ್ರದೋಷ್​​ಗೆ ನಾಳೆ ಕ್ರಾಸ್ ಎಕ್ಸಾಮಿನೇಷನ್​ನಲ್ಲಿ ಆರೋಪಿಗಳ ಲಾಯರ್​​ಗಳ ಪ್ರಶ್ನೆಗಳ ಸುರಿಮಳೆಯಾಗಲಿದೆ.

ದರ್ಶನ್ (ಚಿತ್ರ ಕೃಪೆ: ದರ್ಶನ್ ಇನ್​ಸ್ಟಾಗ್ರಾಮ್)
ದರ್ಶನ್ (ಚಿತ್ರ ಕೃಪೆ: ದರ್ಶನ್ ಇನ್​ಸ್ಟಾಗ್ರಾಮ್)

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ನಾಳೆ ಎಂದರೆ ಸೆಪ್ಟೆಂಬರ್ 28ರಂದು ಪ್ರಾಸಿಕ್ಯೂಷನ್ ವಿಟ್ನೆಸ್ ಪ್ರದೋಷ್  (Pradosh) ವಿಚಾರಣೆ ನಡೆಯಲಿದೆ. ಪ್ರಾಸಿಕ್ಯೂಷನ್ ಪರವಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ (SPP Prasanna Kumar) ಅವರಿಂದ ಚೀಫ್ ಎಕ್ಸಾಮಿನೇಷನ್ ನಡೆಯಲಿದ್ದು, ತಮ್ಮ ಪರವಾಗಿ ಸಾಕ್ಷಿ ನುಡಿಯಲು ಬಂದಿರುವ ಸಾಕ್ಷಿದಾರರನ ವಿಚಾರಣೆ ಮಾಡಲಿದ್ದಾರೆ.

ಜಡ್ಜ್ ಮುಂದೆ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ. ಸಾಕ್ಷಿಯಿಂದ ಘಟನೆ ವಿವರ ಹಾಗೂ ಮಾಹಿತಿ ದಾಖಲು ಪ್ರಕ್ರಿಯೆ ನಡೆಯಲಿದೆ. ನಾಳೆ ಮಾಫಿ ಸಾಕ್ಷಿ ಪ್ರದೋಷ್​​ನ್ನು ಎಸ್ ಪಿಪಿ ಪ್ರಸನ್ನ ಕುಮಾರ್ ಪ್ರಶ್ನೆ ಮಾಡಲಿದ್ದಾರೆ.

ಸತ್ಯಾಸತ್ಯತೆ ಬಿಚ್ಚಿಡಲಿರೋ ಪ್ರದೋಷ್

ಕೊಲೆಗೆ ಸಂಬಂಧಿಸಿದಂತೆ ಪ್ರದೋಷ್ ಬಳಿಯಿರುವ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ಈಗಾಗಲೇ ಪ್ರದೋಷ್ ಲಿಖಿತ ರೂಪದಲ್ಲಿ ಪೂರ್ಣ ಮಾಹಿತಿ ನೀಡಿದ್ದು, ಉಳಿದಂತೆ ಕೋರ್ಟ್ ನಲ್ಲಿ ಘಟನೆಯ ಸತ್ಯಾಸತ್ಯತೆಯನ್ನು ಪ್ರದೋಷ್ ಬಿಚ್ಚಿಡಲಿದ್ದಾನೆ.

16 ಆರೋಪಿಗಳ ವಕೀಲರಿಂದ ವಿಚಾರಣೆ

ಪ್ರಾಸಿಕ್ಯೂಷನ್ ಚೀಫ್ ಆದ ಬಳಿಕ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದ್ದು, ಆರೋಪಿಗಳ ಪರ ವಕೀಲರಿಂದ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ. ಪ್ರದೂಷ್ ಮುಂದೆ ಭಾರಿ ಸವಾಲು ಇದ್ದು, 16 ಆರೋಪಿಗಳ ಪರ ವಕೀಲರು ಸಾಕ್ಷಿ ಪ್ರದೂಷ್ ವಿಚಾರಣೆ ನಡೆಸಲಿದ್ದಾರೆ.

ಎಲ್ಲದಕ್ಕೂ ಉತ್ತರಿಸಬೇಕು

ಕೊಲೆ ಪ್ರಕರಣದಲ್ಲಿ ಪ್ರದೂಷ್ ಈಗ ಪ್ರಮುಖ ಸಾಕ್ಷಿಯಾಗಿದ್ದು ಅದ್ದರಿಂದ ಎಲ್ಲಾ ಆರೋಪಿಗಳ ಪರ ವಕೀಲರಿಂದ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ. ವಕೀಲರ ಎಲ್ಲ ಪ್ರಶ್ನೆಗಳಿಗೆ  ಸಾಕ್ಷಿ ಪ್ರದೂಷ್ ಉತ್ತರಿಸಬೇಕಿದೆ.

ಇಡೀ ಪ್ರಕರಣಕ್ಕೆ ಮಹತ್ವದ ತಿರುವು

ಪ್ರದೂಷ್ ಸಾಕ್ಷಿಯಿಂದ ದರ್ಶನ್, ಪವಿತ್ರಾಗೌಡಗೆ ಆತಂಕ ಶುರುವಾಗಿದೆ. ದರ್ಶನ್, ಪವಿತ್ರಾಗೌಡ ಸೇರಿ ರೇಣುಕಾಸ್ವಾಮಿ ಕೊಲೆಯಲ್ಲಿ ಸೇರಿ 16 ಮಂದಿಯ ರೋಲ್ ಬಿಚ್ಚಿಡಲಿದ್ದಾನೆ ಪ್ರದೋಷ್. ಪ್ರದೂಷ್ ಸಾಕ್ಷಿ ಹೇಳಿಕೆಯಿಂದ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಗಲಿದೆ.

ವರದಿ: ಮುನಿರಾಜು ಕೆ.ಜಿ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed