Last Updated:
Darshan: ರೇಣುಕಾಸ್ವಾಮಿ ಕೇಸ್ನಲ್ಲಿ ಮಾಫಿ ಸಾಕ್ಷಿ ತಡೆಯೋ ದರ್ಶನ್ ಲಾಯರ್ ಪ್ರಯತ್ನ ವಿಫಲ ಆಗಿದ್ದೇಕೆ? ಹಷ್ಮತ್ ಪಾಷಾ ಮುಂದಿಟ್ಟು ಪಾಯಿಂಟ್ಸ್ ಏನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ನಲ್ಲಿ (Renukaswamy Casr) ಮಾಫಿ ಸಾಕ್ಷಿಯಾಗುತ್ತೇನೆ (Approver) ಎಂದು ಬಂದು ಪ್ರದೋಷ್ ಹೇಳಿಕೆ (Approver Pradosh) ದಾಖಲಿಸಲು ಸೆ.28ಕ್ಕೆ ದಿನಾಂಕ ನಿಗದಿಯಾಗಿದೆ. ಹೀಗಿದ್ದರೂ ದರ್ಶನ್ (Darshan) ಲಾಯರ್ ಸೆ.26ರಂದು ಇದನ್ನು ತಡೆಯೋಕೆ ಅರ್ಜಿ ಸಲ್ಲಿಸಿದ್ದರು. ಮಾಫಿ ಸಾಕ್ಷಿ ಹೇಳಿಕೆ ದಾಖಲಿಸೋ ಕೊನೆ ಕ್ಷಣದ ಪ್ರಯತ್ನ ಇದಾಗಿತ್ತು. ಆದರೆ ಇದು ಕೋರ್ಟ್ (Court)ನಲ್ಲಿ ನಿಲ್ಲಲಿಲ್ಲ. ಈ ಅರ್ಜಿಯನ್ನು ಪ್ರಾಸಿಕ್ಯೂಷನ್ ವಾದ ಖಡಕ್ ಆಗಿ ವಿರೋಧಿಸಿ ಕೋರ್ಟ್ ವಜಾ ಮಾಡಿತು.
ದರ್ಶನ್ ಲಾಯರ್ ವಾದ ಸಾಕಾಗಲಿಲ್ವಾ? ಅಥವಾ ಹೆಚ್ಚಿನ ಪಾಯಿಂಟ್ಸ್ ಇರಲಿಲ್ವಾ? ಪ್ರಾಸಿಕ್ಯೂಷನ್ ವಾದದಲ್ಲೇ ತೂಕ ಇತ್ತಾ? ಕೋರ್ಟ್ ದರ್ಶನ್ ಲಾಯರ್ ಅರ್ಜಿ ವಜಾ ಮಾಡಿದ್ದೇಕೆ? ವಾದ-ಪ್ರತಿವಾದದ ಪ್ರಮುಖ ಅಂಶಗಳೇನು?
ದರ್ಶನ್ ಲಾಯರ್ ಸುಪ್ರೀಂಗೆ ಹೋಗುತ್ತೇವೆ, ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಶ್ನೆ ಮಾಡ್ತೇವೆ, ಒಂದು ವಾರ ಟೈಮ್ ಬೇಕು ಎಂಬ ಅರ್ಜಿ ತುಂಬಾ ಸುಲಭವಾಗಿ ರಿಜೆಕ್ಟ್ ಆಯಿತು. ವಾದ-ಪ್ರತಿವಾದ ಹೀಗಿತ್ತು ನೋಡಿ.
ಹಷ್ಮತ್ ಪಾಷಾ ವಾದ:
- ಹೈಕೋರ್ಟ್ ಆದೇಶದ ಪ್ರತಿ ಇಂದಷ್ಟೇ ಸಿಕ್ಕಿದೆ
- ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ
- ಕೋರ್ಟ್ ಆದೇಶ ದೃಢೀಕೃತ ಪ್ರತಿ ಇನ್ನೂ ಸಿಕ್ಕಿಲ್ಲ
ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಸ್ವಲ್ಪ ಸಮಯ ಬೇಕು
ಪ್ರಾಸಿಕ್ಯೂಷನ್ ವಾದ – ಎಎಸ್ಪಿಪಿ ಸಚಿನ್ ವಾದ
- 24.09 ರಂದು ಪ್ರದೂಷ್ ಗೆ ಸಮನ್ಸ್
- ಹೊಸದಾದ ಯಾವುದೇ ಮಾಹಿತಿ, ಸಂಗತಿಗಳಿಲ್ಲ. ಈ ಅರ್ಜಿ ಪುರಸ್ಕರಿಸಬಾರದು
- ಪ್ರತಿನಿತ್ಯ ಸಂಜೆಯೇ ಆದೇಶ ಪ್ರತಿ ಅಪ್ ಲೋಡ್ ಆಗುತ್ತೆ
- ಆದೇಶ ಪ್ರತಿ ಈಗ ಸಿಕ್ಕಿದೆ ಅಂತಿದ್ದಾರೆ. ಅದು ಹೇಗೆ ನಂಬಲು ಸಾಧ್ಯ?
- ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಜಾ ಆಯ್ತು ಅಂತ ಅಂದ್ರೆ ಮತ್ತೆ ರಿವ್ಯೂ ಪೆಟಿಷನ್ ಹಾಕ್ತಾರೆ.
- ಎರಡು ಅಥವಾ ಆರು ತಿಂಗಳು ಆಗುತ್ತೆ, ಅಲ್ಲಿ ತನಕ ಈ ಕೇಸ್ ಏನ್ ಮಾಡೋದು?
- ಇದಕ್ಕೆ ಯಾವುದೇ ಎಂಡ್ ಇಲ್ವಾ?
ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ 59ನೇ ಸಿಸಿಹೆಚ್ ನ್ಯಾಯಾಲಯ ಇದೀಗ ಅದನ್ನು ವಜಾಗೊಳಿಸಿದೆ. ಹೀಗಾಗಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡುವ ಮನವಿಗೆ ನ್ಯಾಯಾಲಯ ಸಮ್ಮತಿ ನೀಡಿಲ್ಲ.
ನ್ಯಾಯಾಲಯದ ಆದೇಶದಂತೆ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಸೋಮವಾರ ನಡೆಸಲು ನಿಗದಿಯಾಗಿದೆ. ಹೀಗಾಗಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಒಂದು ವಾರದ ಮುಂದೂಡಿಕೆ ಮನವಿ ಇದೀಗ ವಜಾಗೊಂಡಿರುವ ಹಿನ್ನೆಲೆಯಲ್ಲಿ ನಿಗದಿತ ಪ್ರಕ್ರಿಯೆ ಮುಂದುವರಿಯಲಿದೆ.
ಟಾಪ್ ವಿಡಿಯೋಗಳು














