Last Updated:
ಬಿಗ್ ಬಾಸ್ ಮನೆಗೆ ಗಾನವಿ ಗೌಡ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಆಗಿದ್ದಾರೆ. ಹಳ್ಳಿ ಪವರ್ ಶೋದಲ್ಲೂ ಗಾನವಿ ಗೌಡ ಸಖತ್ ಆಗಿಯೇ ಆಡಿದ್ದರು. ಫಸ್ಟ್ ರನ್ನರಪ್ ಆಗಿಯೇ ಇದ್ದರು. ಇಲ್ಲೂ ಕಮಾಲ್ ಮಾಡುವಂತೆ ಕಾಣುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss-13) ರಲ್ಲಿ ಮೂವರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಇದರಲ್ಲಿ ಹಳ್ಳಿ ಪವರ್ ರನ್ನರ್ ಅಪ್ ಕೂಡ ಇದ್ದಾರೆ. ಅದು ಗಾನವಿ ಗೌಡನೇ ಆಗಿದ್ದಾರೆ. ಗಾನವಿ ಗೌಡ (Ganavi Gowda) ಸ್ಟ್ರಾಂಗ್ ಸ್ಪರ್ಧಿನೆ ಆಗಿದ್ದಾರೆ. ಫಿಜಿಕಲ್ ಟಾಸ್ಕ್ ಅಲ್ಲೂ ಜೋರಾಗಿದ್ದಾರೆ. ಮಾತಿನಲ್ಲೂ ಅಷ್ಟೆ ಜೋರು ಬಿಡಿ. ಜೀ ಕನ್ನಡದ ಹಳ್ಳಿ ಪವರ್ ಅಲ್ಲಿ ಗಾನವಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದರು. ಕಲರ್ಸ್ ಕನ್ನಡದ ಬಿಗ್ ಬಾಸ್ (Bigg Boss) ಅಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ (Wild Card Entry) ಆಗಿದ್ದಾರೆ. ಇನ್ನು ಹಲವು ವಿಶೇಷ ಇದೆ. ಅದು ಇಲ್ಲಿದೆ.
ಗಾನವಿ ಗೌಡ ಸ್ಟ್ರಾಂಗ್ ಆಗಿದ್ದಾರೆ. ಮಾತುಗಳು ಜೋರಾಗಿಯೇ ಇವೆ. ಇವರ ಆಟದಲ್ಲಿ ಜೋಶ್ ಪಕ್ಕಾ ಇರುತ್ತದೆ. ಹಳ್ಳಿ ಪವರ್ ಶೋದಲ್ಲಿ ಗಾನವಿ ವೈಲ್ಡ್ ಕಾರ್ಡ್ ಮೂಲಕವೇ ಎಂಟ್ರಿ ಆಗಿದ್ದರು.
ಘಾಟಿ ಗಾನವಿ
(ಚಿತ್ರ ಕೃಪೆ: ಗಾನವಿ ಗೌಡ ಇನ್ಸ್ಟಾಗ್ರಾಮ್)
ವಿಶೇಷ ಅಂದ್ರೆ ಇಲ್ಲಿ ಗಾನವಿ ಗೌಡ ಕೊನೆವರೆಗೂ ಇದ್ದರು. ಚೆನ್ನಾಗಿಯೇ ಆಟವಾಡಿದ್ದರು. ಗಾನವಿ ಗೌಡ ಹಳ್ಳಿ ಪವರ್ ಫಸ್ಟ್ ರನ್ನರ್ ಅಪ್ ಆಗಿದ್ದರು.
ಗಾನವಿ ಗೌಡ ಈ ಒಂದು ಹಳ್ಳಿ ಪವರ್ ಅಲ್ಲಿ ಚೆನ್ನಾಗಿಯೇ ಆಡಿದ್ದರು. ಹೋಸ್ಟ್ ಅಕುಲ್ ಬಾಲಾಜಿ ಇವರನ್ನ ಘಾಟಿ ಗಾನವಿ ಅಂತಲೇ ಕರೆದಿದ್ದರು.
ಘಾಟಿ ಗಾನವಿ ಜೊತೆಗೆ ಇನ್ನೂ ಇಬ್ಬರು ಹೋಗಿದ್ದಾರೆ. ಶತಾಯ ಗತಾಯ ಸಿನಿಮಾ ನಟಿ ಸೋನಿಕಾ ಗೌಡ ಸಹ ದೊಡ್ಮನೆಗೆ ಹೋಗಿದ್ದಾರೆ.
ಗಾನವಿ ಗೌಡ….
(ಚಿತ್ರ ಕೃಪೆ: ಗಾನವಿ ಗೌಡ ಇನ್ಸ್ಟಾಗ್ರಾಮ್)
ಈ ಒಂದು ವೈಲ್ಡ್ ಕಾರ್ಡ್ ಅಲ್ಲಿ ಕಿಶನ್ ಬಿಳಿಗಲಿ ಹೆಸರು ಕೂಡ ಇದೆ. ಇನ್ನುಳಿದಂತೆ ದೊಡ್ಮನೆಯಿಂದ ಈ ವಾರ ಇಬ್ಬರು ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಇಬ್ಬರು ಮನೆಗೆ ಹೋಗಿದ್ದಾರೆ. ವೈಷ್ಣವಿ ವಿ.ಕೌಂಡಿನ್ಯ ಹಾಗೂ ಅವಿನಾಶ್ ಅವರು ಮನೆಗೆ ಹೋಗಿದ್ದಾರೆ. ಕಲರ್ಸ್ ಕನ್ನಡ ಇದನ್ನ ಅಧಿಕೃತವಾಗಿಯ ಹೇಳಿದೆ.
ಕಿಚ್ಚನ ಚಪ್ಪಾಳೆಗೆ ಭಾರೀ ಬೆಲೆ ಬಂದಿದೆ. ಈ ಮೊದಲು ಕಿಚ್ಚ ಸುದೀಪ್ ಚಪ್ಪಾಳೆ ಕೊಡ್ತಾ ಇದ್ದರು. ತಮ್ಮದೇ ಒಂದು ಗಿಫ್ಟ್ ಕೂಡ ಕೊಡ್ತಾ ಇದ್ದರು. ಆದರೆ, ಈ ಬಿಗ್ ಬಾಸ್ ಸೀಸನ್-13 ರಿಂದ ಕಿಚ್ಚನ ಚಪ್ಪಾಳೆ ಪಡೆಯೋರಿಗೆ ಒಂದು ಲಕ್ಷ ರೂಪಾಯಿ ಕೂಡ ಕೊಡಲಾಗುತ್ತಿದೆ. ಹಾಗೆ ಈ ಬಹುಮಾನವನ್ನ ಆಸಿಯಾ ಫಿರ್ದೋಸ್ ಮೊದಲು ಪಡೆದಿದ್ದಾರೆ ಅಂತ ಹೇಳಬಹುದು.














