Last Updated:
ಲವ್ ಆ್ಯಂಡ್ ವಾರ್ ಚಿತ್ರದ ಆಲಿಯಾ ಭಟ್ ಲುಕ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಕ್ಯಾಬರೇ ಡ್ಯಾನ್ಸರ್ ಅನಿಸುತ್ತಿದ್ದಾರೆ. ಈ ಪಾತ್ರದ ಎರಡು ಪೋಸ್ಟರ್ ಹೊರ ಬಂದಿವೆ. ಇವುಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಬಾಲಿವುಡ್‌ನಲ್ಲಿ ಲವ್ ಆ್ಯಂಡ್ ವಾರ್ ಚಿತ್ರ (Love and War Movie) ರೆಡಿ ಆಗುತ್ತಿದೆ. ಚಿತ್ರದಲ್ಲಿ ನಿಜವಾದ ಸತಿ ಮತ್ತು ಪತಿ ನಟಿಸಿದ್ದಾರೆ, ಅದ್ಯಾರು ಅನ್ನೋದು ಗೊತ್ತೇ ಇದೆ. ಆಲಿಯಾ ಭಟ್ (Aliya Bhat) ಹಾಗೂ ರಣಬೀರ್ ಕಪೂರ್ (Ranbir Kapoor) ಈ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕತೆ ಇದೆ. ವಿಕ್ಕಿ ಕೌಶಿಕ್ ಈ ಸಿನಿಮಾದ ಮತ್ತೊಬ್ಬ ನಾಯಕರಾಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ (First Look) ವಿಚಾರದಲ್ಲಿ ಮೊದಲು ನಾಯಕ ನಟ ರಣಬೀರ್ ಕಪೂರ್ ಇಂಟ್ರಸ್ಟಿಂಗ್ ಫಸ್ಟ್ ಲುಕ್ ಹೊರ ಬಂದಿದೆ. ಮರು ದಿನವೇ ನಟಿ ಆಲಿಯಾ ಭಟ್ ಲುಕ್ ಹೊರ ಬಂದಿದೆ. ಈ ಲುಕ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.
‘ಲವ್ ಆ್ಯಂಡ್ ವಾರ್’ ಮಸ್ತ್ ಫಸ್ಟ್ ಲುಕ್
(ಚಿತ್ರ ಕೃಪೆ: ಆಲಿಯಾ ಭಟ್ ಇನ್ಸ್ಟಾಗ್ರಾಮ್)
ಈ ಒಂದು ಪಾತ್ರದ ಫಸ್ಟ್ ಲುಕ್ ಸೆಪ್ಟೆಂಬರ್-25 ರಂದು ರಿಲೀಸ್ ಆಗಿದೆ. ಈ ಪೋಸ್ಟರ್ ರಿಲೀಸ್ ಅದ್ಧೂರಿಯಾಗಿಯೇ ನಡೆದಿದೆ. ಆಲಿಯಾ ಭಟ್, ಆಲಿಯಾ ಭಟ್ ಪೋಷಕರು, ರಣಬೀರ್ ಕಪೂರ್ ತಾಯಿ ನೀತು ಸಿಂಗ್, ರಣಬೀರ್ ಕಪೂರ್ ಸೇರಿದಂತೆ ಇನ್ನು ಅನೇಕರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು.
ಆಲಿಯಾ ಭಟ್ ಈ ಚಿತ್ರದಲ್ಲಿ ಕಲರ್‌ಫುಲ್ ರೋಲ್ ಮಾಡಿದ್ದಾರೆ. ಈ ರೋಲ್‌ಗೆ ತಕ್ಕನಾದ ಕಾಸ್ಟೂಮ್, ಕಾಸ್ಟೂಮ್‌ಗೆ ತಕ್ಕನಾದ ಹೇರ್ ಸ್ಟೈಲ್ ಇದೆ.
ರಣಬೀರ್ ಕಪೂರ್ ಪಾತ್ರದ ಲುಕ್ ರಿಲೀಸ್ ಆಗಿದೆ. ನೀಲಿ ಕಾರ್ ಅಲ್ಲಿ ಸಾಗುವ ಪೋಸ್ಟರ್ ಇದಾಗಿದೆ. ಆದರೆ, ಕೈಗೆ ರಕ್ತ ಮೆತ್ತಿಕೊಂಡಿದೆ.
ಆಲಿಯಾ ಭಟ್ ಮಸ್ತ್ ಲುಕ್
(ಚಿತ್ರ ಕೃಪೆ: ಆಲಿಯಾ ಭಟ್ ಇನ್ಸ್ಟಾಗ್ರಾಮ್)
ಈ ಒಂದು ಲುಕ್‌ನ ಎರಡು ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ಜೊತೆಗೆ ಜನವರಿ-21,2027 ರಂದು ಈ ಚಿತ್ರ ರಿಲೀಸ್ ಅನ್ನುವ ಮಾಹಿತಿನೂ ಹೊರ ಬಂತು. ಆಲಿಯಾ ಭಟ್ ಪಾತ್ರದ ಪೋಸ್ಟರ್ ಕೂಡ ಎರಡಿವೆ. ಇದರಲ್ಲೂ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಸಂಜಯ್ ಲೀನಾ ಬನ್ಸಾಲಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ದೊಡ್ಡ ಬಜೆಟ್‌ನ ಚಿತ್ರ ಇದಾಗಿದೆ. ರೆಟ್ರೋ ಕಾಲದ ಈ ಚಿತ್ರದಲ್ಲಿ ಯುದ್ಧ ಕೂಡ ಇದೆ.
ಈ ಯುದ್ಧದ ಸನ್ನಿವೇಶದ ಚಿತ್ರೀಕರಣದ ಪ್ಲಾನ್ ಆಗಿದೆ. ಇನ್ನಷ್ಟೆ ಈ ಸೀನ್‌ಗಳ ಚಿತ್ರೀಕರಣ ನಡೆಬೇಕಿದೆ. ಆದರೆ, ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಆಗಿದೆ ಅನ್ನುವ ಮಾಹಿತಿ ಸಿಗುತ್ತದೆ.














