Job Alert: 81 ಸಾವಿರ ವೇತನ ಶ್ರೇಣಿಯ ಕೇಂದ್ರ ಸರ್ಕಾರಿ ಉದ್ಯೋಗ ಖಾಲಿ, ಕೇವಲ SSLC ಕಲಿತಿದ್ರೆ ಸಾಕು! | | ACTPnews

ಕೆಲಸ


Last Updated:

ಭಾರತೀಯ ಕೋಸ್ಟ್ ಗಾರ್ಡ್‌ನಲ್ಲಿ Store Keeper, Engine Driver, Lascar, Motor Transport Driver ಸೇರಿದಂತೆ ಒಟ್ಟು 6 Group C ಹುದ್ದೆಗಳಿಗೆ ನೇಮಕಾತಿ. ಅರ್ಜಿ ಸಲ್ಲಿಕೆಗೆ 03 ನವೆಂಬರ್ 2026 ಕೊನೆಯ ದಿನ.

ಕೆಲಸ
ಕೆಲಸ

ಉದ್ಯೋಗದ (Job) ನಿರೀಕ್ಷೆಯಲ್ಲಿರುವ 10ನೇ ಹಾಗೂ 12ನೇ ತರಗತಿ ಪಾಸ್‌ ಅಭ್ಯರ್ಥಿಗಳಿಗೆ ಭಾರತೀಯ ಕೋಸ್ಟ್ ಗಾರ್ಡ್‌ನಿಂದ ಉದ್ಯೋಗಾವಕಾಶವೊಂದು ಬಂದಿದೆ. ಕೋಸ್ಟ್ ಗಾರ್ಡ್‌ನಲ್ಲಿ ವಿವಿಧ Group ‘C’ ಸಿವಿಲಿಯನ್ ಹುದ್ದೆಗಳಿಗೆ ಒಟ್ಟು 6 ಹುದ್ದೆಗಳ ನೇಮಕಾತಿ (Recruitement) ನಡೆಯುತ್ತಿದೆ. Store Keeper Grade-II, Engine Driver, Lascar, Civilian Motor Transport Driver, MTS (Peon) ಹಾಗೂ MTS (Chowkidar) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ನೇಮಕಾತಿಯ ವಿವರ ಹೀಗಿದೆ

ಈ ನೇಮಕಾತಿಯಲ್ಲಿ Store Keeper Grade-II ಹುದ್ದೆಗೆ 12ನೇ ತರಗತಿ ಪಾಸ್‌ ಜೊತೆಗೆ ಒಂದು ವರ್ಷದ ಸಂಬಂಧಿತ ಅನುಭವ ಅಗತ್ಯವಿದೆ. Engine Driver ಹುದ್ದೆಗೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಅರ್ಹತೆ ಮತ್ತು ಅನುಭವದ ಷರತ್ತುಗಳು ಅನ್ವಯಿಸುತ್ತವೆ. Lascar ಹುದ್ದೆಗೆ 10ನೇ ತರಗತಿ ಪಾಸ್‌ ಹಾಗೂ ಬೋಟ್‌ನಲ್ಲಿ ಮೂರು ವರ್ಷ ಸೇವಾ ಅನುಭವ ಕೇಳಲಾಗಿದೆ.

ಯಾವೆಲ್ಲಾ ಉದ್ಯೋಗವಿದೆ ಗೊತ್ತಾ?

ಇನ್ನು Civilian Motor Transport Driver ಹುದ್ದೆಗೆ 10ನೇ ತರಗತಿ ಪಾಸ್‌ ಜೊತೆಗೆ ಕನಿಷ್ಠ ಎರಡು ವರ್ಷ ವಾಹನ ಚಾಲನಾ ಅನುಭವ ಇರಬೇಕು. MTS (Peon) ಹುದ್ದೆಗೆ 10ನೇ ಪಾಸ್‌ ಹಾಗೂ ಎರಡು ವರ್ಷ ಆಫೀಸ್ ಅಟೆಂಡೆಂಟ್ ಅನುಭವ, MTS (Chowkidar) ಹುದ್ದೆಗೆ 10ನೇ ಪಾಸ್‌ ಹಾಗೂ ಮಾನ್ಯತೆ ಪಡೆದ ಸಂಸ್ಥೆ ಅಥವಾ ಸಂಘಟನೆಯಲ್ಲಿ ಎರಡು ವರ್ಷ ಚೌಕಿದಾರ್ ಅನುಭವ ಅಗತ್ಯ ಎಂದು ಅಧಿಸೂಚನೆಯಲ್ಲಿ ನೀಡಲಾಗಿದೆ.

ವೇತನ ಎಷ್ಟು?

ವೇತನದ ವಿಚಾರದಲ್ಲೂ ಅಭ್ಯರ್ಥಿಗಳಿಗೆ ಅನುಕೂಲಕರ ಅವಕಾಶವಿದೆ. Store Keeper Grade-II ಮತ್ತು Civilian Motor Transport Driver ಹುದ್ದೆಗಳಿಗೆ ₹19,900ರಿಂದ ₹63,200, Engine Driver ಹುದ್ದೆಗೆ ₹25,500ರಿಂದ ₹81,100, ಹಾಗೂ Lascar ಮತ್ತು MTS ಹುದ್ದೆಗಳಿಗೆ ₹18,000ರಿಂದ ₹56,900 ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ವಯೋಮಿತಿಯೂ ಹುದ್ದೆಗೆ ಅನುಗುಣವಾಗಿ ಬದಲಾಗುತ್ತದೆ. Store Keeper Grade-IIಗೆ 18ರಿಂದ 25 ವರ್ಷ, Engine Driver ಹಾಗೂ Lascar ಹುದ್ದೆಗಳಿಗೆ 18ರಿಂದ 30 ವರ್ಷ, Civilian Motor Transport Driver ಮತ್ತು MTS ಹುದ್ದೆಗಳಿಗೆ 18ರಿಂದ 27 ವರ್ಷ ವಯೋಮಿತಿ ನಿಗದಿಯಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅರ್ಹ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ನೇಮಕಾತಿಗೆ ಆನ್‌ಲೈನ್‌ ಅರ್ಜಿ ಬೇಡ

ಈ ನೇಮಕಾತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಕಳುಹಿಸಬೇಕು. ಅರ್ಜಿಯನ್ನು Headquarters, Coast Guard Region (West), Alexander Graham Bell Road, PO Malabar Hill, Mumbai – 400006 ವಿಳಾಸಕ್ಕೆ ಕಳುಹಿಸಬೇಕಾಗಿದೆ. ಅರ್ಜಿಯೊಂದಿಗೆ ಅಭ್ಯರ್ಥಿಗಳು ಮಾನ್ಯ Photo ID Proof, ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಅಗತ್ಯವಿದ್ದಲ್ಲಿ ವರ್ಗ ಪ್ರಮಾಣಪತ್ರ, Experience Certificate, ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ NOC ಹಾಗೂ ಎರಡು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಫೋಟೋಗಳನ್ನು ಸಲ್ಲಿಸಬೇಕು. ಅರ್ಜಿಯೊಂದಿಗೆ ₹50 ಪೋಸ್ಟಲ್ ಸ್ಟಾಂಪ್ ಅಂಟಿಸಿದ ಪ್ರತ್ಯೇಕ ಖಾಲಿ ಲಕೋಟೆಯನ್ನೂ ಕಳುಹಿಸಬೇಕಾಗಿದೆ.

ಪರೀಕ್ಷೆಯ ವಿವರ ಹೀಗಿದೆ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಅರ್ಜಿಗಳ ಪರಿಶೀಲನೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ Document Verification ಮತ್ತು Written Examinationಗೆ ಕರೆಯಲಾಗುತ್ತದೆ. ಬಯೋಮೆಟ್ರಿಕ್ ಪರಿಶೀಲನೆಯೂ ನಡೆಯಲಿದೆ. ಲಿಖಿತ ಪರೀಕ್ಷೆಯು ಒಂದು ಗಂಟೆಯ ಅವಧಿಯದ್ದಾಗಿದ್ದು, ಒಟ್ಟು 80 ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳು ಇರಲಿವೆ. ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕ ನೀಡಲಾಗುತ್ತದೆ ಮತ್ತು ಪರೀಕ್ಷೆಯಲ್ಲಿ Negative Marking ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಲಿಖಿತ ಪರೀಕ್ಷೆಯಲ್ಲಿ General Knowledge, Mathematics, General English ಹಾಗೂ ಸಂಬಂಧಿತ Tradeಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಹೀಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಮಾತ್ರವಲ್ಲದೆ ಪರೀಕ್ಷೆಯ ಪಠ್ಯಕ್ರಮಕ್ಕೂ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.

ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ

ಇದನ್ನೂ ಓದಿ: Karnataka Dams: ಕೆಆರ್‌ಎಸ್ ಹಾಗೂ ಹೇಮಾವತಿ ಡ್ಯಾಮ್‍ಗಳಲ್ಲಿ ನೀರಿನ ಮಟ್ಟ ಇಳಿಕೆ? ಕಾವೇರಿ ಕಣಿವೆಯ ಜನರೇ ಎಚ್ಚರ!

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ವಿಶೇಷ ಎಚ್ಚರಿಕೆ ವಹಿಸಬೇಕು. ಅಪೂರ್ಣ ಅರ್ಜಿ, ಕೊನೆಯ ದಿನಾಂಕದ ನಂತರ ತಲುಪುವ ಅರ್ಜಿ, ತಪ್ಪಾದ ಮಾಹಿತಿ, ಫೋಟೋ ಲಗತ್ತಿಸದಿರುವುದು ಅಥವಾ ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಲ್ಲಿಸದಿರುವುದು ಸೇರಿದಂತೆ ಹಲವು ಕಾರಣಗಳಿಂದ ಅರ್ಜಿ ತಿರಸ್ಕೃತವಾಗಬಹುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ನವೆಂಬರ್ 2026 ಎಂದು ಅಧಿಸೂಚನೆಯಲ್ಲಿ ನೀಡಲಾಗಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಿಗದಿತ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು ಅಗತ್ಯ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports