ಮ್ಯಾಂಗೋ ಪಚ್ಚ ಚಿತ್ರ ಕಳೆದ ಎರಡ್ಮೂರು ತಿಂಗಳ ಹಿಂದೆ ರಿಲೀಸ್ ಆಗಿತ್ತು. ಆದರೆ, ಈ ಚಿತ್ರ ಒಟಿಟಿಗೆ ಈಗ ಬಂದಿದೆ. ಸಂಚಿತ್ ಸಂಜೀವ್ ಚಿತ್ರ ಜೀವನದ ಮೊದಲ ಚಿತ್ರ ಇದಾಗಿದೆ.
ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಹೊಸ ಮ್ಯಾಟರ್
(ಚಿತ್ರ ಕೃಪೆ: ಮ್ಯಾಂಗೋ ಪಚ್ಚ ಸಿನಿಮಾ ಟೀಮ್)
ವಿವೇಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರಿಗೂ ಇದು ಮೊದಲ ನಿರ್ದೇಶನದ ಚಿತ್ರವಾಗಿದೆ. ಇದರಲ್ಲಿ ಕಾಜಲ್ ಕುಂದರ್ ಇದ್ದಾರೆ. ಪಚ್ಚ ಪಾತ್ರದಲ್ಲಿ ಸಂಚಿತ್ ಸಂಜೀವ್ ಅಭಿನಯಿಸಿದ್ದಾರೆ.
ಈ ಚಿತ್ರ 2001-2010 ಸಮಯದ ಕತೆ ಹೊಂದಿದೆ. ಈ ಕಾಲಘಟ್ಟದಲ್ಲಿ ನಡೆದ ಘಟನೆಗಳನ್ನೆ ಇದು ಆಧರಿಸಿದೆ. ಮಧ್ಯಮ ವರ್ಗದ ಪ್ರಶಾಂತ್ ಹೇಗೆ ಪಚ್ಚ ಆಗುತ್ತಾನೆ.
ಮ್ಯಾಂಗೊ ಪಚ್ಚ ಚಿತ್ರ ಜೂನ್-5 ರಂದು ರಿಲೀಸ್ ಆಗಿತ್ತು. ರಾಜ್ಯದೆಲ್ಲೆಡೆ ಇದು ತೆರೆ ಕಂಡಿತ್ತು. ಸುದೀಪ್ ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದರು.
ಒಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಶುರು
(ಚಿತ್ರ ಕೃಪೆ: ಮ್ಯಾಂಗೋ ಪಚ್ಚ ಸಿನಿಮಾ ಟೀಮ್)
ಚಿತ್ರದ ಪ್ರಚಾರ ಸಂದರ್ಶನದಲ್ಲೂ ಭಾಗಿ ಆಗಿದ್ದರು. ಪತ್ನಿ ಪ್ರಿಯಾ ಸುದೀಪ್ ಈ ಚಿತ್ರವನ್ನ ತಮ್ಮ ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು.
ಮೊದಲ ಚಿತ್ರ ಅನ್ನುವ ಹಾಗೇನೆ ಇಲ್ಲ. ಆ ರೀತಿನೇ ಸಂಚಿತ್ ಸಂಜೀವ್ ಅಭಿನಯಿಸಿದ್ದಾರೆ. ವಿಮರ್ಶಕರು ಈ ಚಿತ್ರದಲ್ಲಿ ಸಂಚಿತ್ ಸಂಜೀವ್ ಅಭಿನಯವನ್ನ ಮೆಚ್ಚಿಕೊಂಡಿದ್ದರು.
ಈ ಚಿತ್ರದಲ್ಲಿ ಒಳ್ಳೆ ಆ್ಯಕ್ಷನ್ ಇವೆ. ಪ್ರೇಕ್ಷಕರನ್ನ ಸೆಳೆಯುವ ಕೆಲವನ್ನು ಮಾಡಿವೆ. ಹಿನ್ನೆಲೆ ಸಂಗೀತವು ಮೆಚ್ಚುಗೆ ಪಡೆದುಕೊಂಡಿದೆ. ಮಾಸ್ ಸೀನ್‌ಗೆ ಕೊಟ್ಟ ಮ್ಯೂಸಿಕ್ ಮೆಚ್ಚುಗೆ ಪಡೆದುಕೊಂಡಿದೆ.
ಚಿತ್ರದಲ್ಲಿ ಹಲವು ಕಲಾವಿದರು ಅಭಿನಯಿಸಿದ್ದಾರೆ. ಮಯೂರ್ ಪಟೇಲ್, ಹಂಸಾ, ಉಗ್ರಂ ಮಂಜು, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇವರೆಲ್ಲರ ಪಾತ್ರಗಳೂ ಗಮನ ಸೆಳೆದಿವೆ.
ಮ್ಯಾಂಗೋ ಪಚ್ಚ ಸಿನಿಮಾ ಒಟಿಟಿಗೆ ಬಂದಾಗಿದೆ. ಸೆಪ್ಟೆಂಬರ್-25 ರಿಂದ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರ ಮೂರು ತಿಂಗಳ ಹಿಂದೆ ತೆರೆ ಕಂಡಿತ್ತು. ಆದರೆ, ಅಲ್ಲಿ ಮಿಸ್ ಮಾಡಿಕೊಂಡವರು ಇನ್ಮುಂದೆ ಈ ಚಿತ್ರವನ್ನ ಜಿಯೋ ಹಾಟ್‌ಸ್ಟಾರ್ ಅಲ್ಲಿ ನೋಡಬಹುದಾಗಿದೆ.













