Golden Star Ganesh: ಬೆಳ್ಳಿ ತೆರೆ ಮೇಲೆ ಅಷ್ಟು ಚೆನ್ನಾಗಿ ಕಾಣಲು ಏನು ಕಾರಣ? ಗಣೇಶ್ ಹೇಳಿಯೇ ಬಿಟ್ಟರು ಆ ಸೀಕ್ರೆಟ್ | | ACTPnews

Golden Star Ganesh Brunda Vihari Movie Ondhe Ondu Video Song Release


ನಾನು ಏನೂ ಅಲ್ಲ….

ಈ ಚಿತ್ರದಲ್ಲಿ ನಾನು ಚೆನ್ನಾಗಿ ಕಾಣಲು ಕಾರಣ ಇದೆ. ಅದು ಜನರು ತೋರಿಸಿರೋ ಪ್ರೀತಿನೇ ಆಗಿದೆ. ಜನರು ನನ್ನ ಮೇಲೆ ತೋರಿಸ್ತಿರೋ ಪ್ರೀತಿಯಿಂದಲೇ ಇಷ್ಟು ಚೆನ್ನಾಗಿ ಕಾಣಸುತ್ತಿದ್ದೇನೆ.

ಬೆಳ್ಳಿ ತೆರೆ ಮೇಲೆ ಗಣಿ ಇಷ್ಟು ಚೆನ್ನಾಗಿ ಕಾಣಲು ಏನು ಕಾರಣ?

(ಚಿತ್ರ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಇನ್​ಸ್ಟಾಗ್ರಾಮ್)

ಆದರೆ, ಈ ಚಿತ್ರದಲ್ಲಿ ವಿ.ನಾಗೇಂದ್ರ ಪ್ರಸಾದ್ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ. ಉತ್ತಮ ಸಾಹಿತ್ಯ ಇದ್ದಾಗ ಖುಷಿ ಆಗುತ್ತದೆ. ಒಳ್ಳೆ ಕೆಲಸವು ಆಗುತ್ತದೆ. ಹೆಶಾಮ್ ಅಬ್ದುಲ್ ವಹಾಬ್ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ.

ಡೈರೆಕ್ಟರ್ ಶ್ರೀನಿವಾಸ್ ರಾಜು ಅವರ ಕಲ್ಪನೆ, ಸುಂದರವಾದ ನಾಯಕ ನಟಿ, ಸಮೃದ್ಧವಾದ ನಿರ್ಮಾಣ ಸಂಸ್ಥೆ ಇದೆ. ಇಷ್ಟೆಲ್ಲ ಇದ್ಮೇಲೆ ಇನ್ನೇನು…? ಹಾಡ್ತಾ…ಡ್ಯಾನ್ಸ್ ಮಾಡ್ತಾ ಹೋಗ್ತಾ ಇರೋದೇ ಅಂತಲೆ ಗಣೇಶ್ ಹೇಳಿಕೊಂಡಿದ್ದಾರೆ.

ಒಂದೇ ಒಂದು ಸಾಲಲ್ಲ

ಈ ಚಿತ್ರದ ಈ ಹಾಡಿಗೆ ಗಣೇಶ್ ಮತ್ತು ದೇವಿಕಾ ಭಟ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಈ ಒಂದು ಹಾಡಿನ ರಿಲೀಸ್ ಕಾರ್ಯಕ್ರಮ ಇತ್ತು.
ಸಾಹಿತ್ಯ ಹೇಗಿದೆ ಗೊತ್ತಾ?

ಈ ಒಂದು ಹಾಡಿನಲ್ಲಿ ‘ಅರ್ಧ ನಾನು ಅರ್ಧ ನೀನು ಸೇರಿ ಸಂಪೂರ್ಣ’ ಅನ್ನುವ ಸಾಲಿದೆ. ಇದು ಅಷ್ಟೆ ಗಮನ ಸೆಳೆಯುತ್ತದೆ. ಆದರೆ, ಇದರಲ್ಲಿ ಇನ್ನು ಹಲವು ಚೆಂದದ ಸಾಲುಗಳಿವೆ. ವಿ.ನಾಗೇಂದ್ರ ಪ್ರಸಾದ್ ಅಷ್ಟೆ ಸುಲಭವಾಗಿ ಮನಸ್ಸಿಗೆ ಇಳಿಯುವಂತೆ ಇವುಗಳನ್ನ ಬರೆದಿದ್ದಾರೆ. ಈ ಹಾಡಿನ ಪಲ್ಲವಿ ಈ ರೀತಿ ಇದೆ ಓದಿ.

Golden Star Ganesh Brunda Vihari Movie Ondhe Ondu Video Song Release

ಗಣೇಶ್ ಹೇಳಿಯೇ ಬಿಟ್ಟರು ಆ ಸೀಕ್ರೆಟ್

(ಚಿತ್ರ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಇನ್​ಸ್ಟಾಗ್ರಾಮ್)

ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ

ಕೋಟಿ ಭಾಷೆ ಸಾಲೋದಿಲ್ಲ

ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ

ರಾಗ ತಾಳ ಸಾಲೋದಿಲ್ಲ

ಆ ಕಾಳಿದಾಸನು ಆದಿಕವಿ ಪಂಪಾನು

ಕುಮಾರವ್ಯಾಸನು ಕವಿರನ್ನನು

ಹೇಳದಾ ಬರೆಯದಾ

ಭಾವದಾ ಗ್ರಂಥಲೋಕವೇ

ನನ್ನ ಎದೆಯ ಪ್ರೇಮಪದ

ಆದರೆ, ಈ ಒಂದು ಹಾಡಿನಲ್ಲಿ ಎರಡು ಚರಣ ಇವೆ. ಮೇಲ್ ಮತ್ತು ಫೀಲ್ ಅಂತ ಬೇರೆ ಬೇರೆ ಸಾಲುಗಳೂ ಇವೆ. ಈ ಹಾಡನ್ನ ಕೇಳ್ತಾ ಹೋದ್ರೆ ನಿಧಾನಕ್ಕೆ ಮನಸ್ಸಿಗೆ ಇಳಿದು ಬಿಡುತ್ತದೆ.

ಒಳ್ಳೆ ಸಾಹಿತ್ಯ ಮತ್ತು ಒಳ್ಳೆ ಸಂಗೀತವೂ ಇದೆ. ಕಲಾವಿದರಾದ ಗಣೇಶ್ ಹಾಗೂ ದೇವಿಕಾ ಭಟ್ ಅವರ ನೃತ್ಯವು ಖುಷಿಕೊಡುತ್ತದೆ. ಈ ಒಂದೇ ಒಂದು ಹಾಡನ್ನ ಜಸ್ಕರನ್ ಸಿಂಗ್ ಹಾಗೂ ಕೆ. ಎಸ್. ಚಿತ್ರಾ ಹಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed