Adah Sharma: ಮತ್ತೆ ಕನ್ನಡಕ್ಕೆ ‘ಕೇರಳ ಸ್ಟೋರಿ’ ಬೆಡಗಿ ಅದಾ ಶರ್ಮಾ; ಯಾವ ಸಿನಿಮಾದಲ್ಲಿ ಗೊತ್ತಾ? | | ACTPnews

News18


Last Updated:

ದಿ ಕೇರಳ ಸ್ಟೋರಿ ಚಿತ್ರದ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದ ಅದಾ ಶರ್ಮಾ ರಾಮರಸ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

News18
News18

ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ಕಾರ್ತಿಕ್ ಮಹೇಶ್ (Karthik Mahesh) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಾಮರಸ (Ramarasa) ಸಿನಿಮಾ ಈಗಾಗಲೇ ಪೋಸ್ಟರ್ ಹಾಗೂ ಟೀಸರ್ ಮೂಲಕ ಕುತೂಹಲ ಮೂಡಿಸಿದೆ. ಹಲವು ಪ್ರಮುಖ ನಟ-ನಟಿಯರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಬಗ್ಗೆ ಒಂದೊಂದೇ ಹೊಸ ಮಾಹಿತಿ ಹೊರಬರುತ್ತಿದೆ. ಇದೀಗ ಸಿನಿಮಾಗೆ ಮತ್ತೊಬ್ಬ ಜನಪ್ರಿಯ ನಟಿ ಸೇರ್ಪಡೆಯಾಗಿರುವ ಸುದ್ದಿ ಸದ್ದು ಮಾಡುತ್ತಿದೆ. ದಿ ಕೇರಳ ಸ್ಟೋರಿ ಚಿತ್ರದ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದ ಅದಾ ಶರ್ಮಾ (Adah Sharma) ರಾಮರಸ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಹಿಂದಿ ಹಾಗೂ ತೆಲುಗು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಅದಾ ಶರ್ಮಾ ಕನ್ನಡ ಚಿತ್ರರಂಗಕ್ಕೂ ಪರಿಚಿತ ಮುಖ. ಇದೀಗ ರಾಮರಸ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸಿನಿಮಾದ ಕಥೆಯಲ್ಲಿ ಹಲವು ಪಾತ್ರಗಳು ಪ್ರಮುಖವಾಗಿದ್ದು, ಅದಾ ಶರ್ಮಾ ಪಾತ್ರವೂ ಕಥೆಗೆ ಮಹತ್ವದ ತಿರುವು ನೀಡಲಿದೆ ಎನ್ನಲಾಗುತ್ತಿದೆ.

ಅದಾ ಶರ್ಮಾ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ, ತೆಲುಗು ಮತ್ತು ಇತರ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಅವರು ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟ ಸಿನಿಮಾ ದಿ ಕೇರಳ ಸ್ಟೋರಿ.

ಅದಾ ಶರ್ಮಾ ಗೆ ಕನ್ನಡ ಚಿತ್ರರಂಗ ಹೊಸದಲ್ಲ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ರಣ ವಿಕ್ರಮ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 2015ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಅದಾ ಶರ್ಮಾ ನಟಿಸಿದ್ದರು.

ರಣ ವಿಕ್ರಮ ಬಳಿಕ ಅದಾ ಶರ್ಮಾ ಕನ್ನಡದಲ್ಲಿ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಹಲವು ವರ್ಷಗಳ ಬಳಿಕ ಅವರು ರಾಮರಸ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಹೀಗಾಗಿ ಕನ್ನಡ ಪ್ರೇಕ್ಷಕರಿಗೆ ಈ ಕಂಬ್ಯಾಕ್ ವಿಶೇಷವಾಗಲಿದೆ.

ರಾಮರಸ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಕಾರ್ತಿಕ್ ಮಹೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಚಿತ್ರದಲ್ಲಿ ಗುರು ಸಿದ್ದ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಮಹೇಶ್ ಕೂಡ ಸಿನಿಮಾದ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ರಾಮರಸ ಚಿತ್ರವನ್ನು ಬಿಎಂ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ಕಥಾಹಂದರದೊಂದಿಗೆ ಸಿನಿಮಾ ಮೂಡಿಬರುತ್ತಿದ್ದು, ಪೋಸ್ಟರ್ ಮತ್ತು ಟೀಸರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಸಿನಿಮಾದಲ್ಲಿ ಹಲವು ಪ್ರಮುಖ ಪಾತ್ರಗಳಿರುವುದರಿಂದ ಒಂದೊಂದೇ ಪಾತ್ರದ ಪರಿಚಯವನ್ನು ಚಿತ್ರತಂಡ ಮಾಡುತ್ತಿದೆ.

ಚಿತ್ರಕ್ಕೆ ಗುರು ದೇಶಪಾಂಡೆ ಅವರ ಜಿ ಸಿನಿಮಾಸ್ ಬ್ಯಾನರ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ದೊಡ್ಡ ತಾರಾಬಳಗ ಮತ್ತು ವಿಭಿನ್ನ ಪಾತ್ರಗಳ ಕಾರಣದಿಂದ ರಾಮರಸ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed