Job Recruitment: SSLC ಕಲಿತವರಿಗೆ ಬಿಗ್‌ ಚಾನ್ಸ್‌! 576 ಹುದ್ದೆ ಖಾಲಿ; ಕಾರಾಗೃಹ ಇಲಾಖೆಯಿಂದ ಪ್ರಕಟಣೆ; ಕನ್ನಡಿಗರಿಗೆ ಆದ್ಯತೆ! | | ACTPnews

Job Recruitment: SSLC ಕಲಿತವರಿಗೆ ಬಿಗ್‌ ಚಾನ್ಸ್‌! 576 ಹುದ್ದೆ ಖಾಲಿ; ಕಾರಾಗೃಹ ಇಲಾಖೆಯಿಂದ ಪ್ರಕಟಣೆ; ಕನ್ನಡಿಗರಿಗೆ ಆದ್ಯತೆ! |


ನೇಮಕಾತಿಯ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು KEA ನಡೆಸಲಿದೆ. ನಂತರದ ದೈಹಿಕ ಮಾನದಂಡ ಪರೀಕ್ಷೆ, ಸಹನಶಕ್ತಿ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಅಂತಿಮ ನೇಮಕಾತಿ ಪ್ರಕ್ರಿಯೆಯನ್ನು ಕಾರಾಗೃಹ ಇಲಾಖೆ ನಡೆಸಲಿದೆ.

576 ಹುದ್ದೆಗಳಲ್ಲಿ ಯಾರಿಗೆ ಎಷ್ಟು ಅವಕಾಶ?

ವಾಡರ್ (ವೀಕ್ಷಕರು) – 560 ಹುದ್ದೆಗಳು

ದ್ವಿತೀಯ ದರ್ಜೆ ಬೋಧಕರು – 16 ಹುದ್ದೆಗಳು

ಎರಡೂ ಹುದ್ದೆಗಳ ವೇತನ ಶ್ರೇಣಿ ₹37,500ರಿಂದ ₹76,100. ಅಧಿಸೂಚನೆಯಲ್ಲಿ ವೇತನದ ವಿವರವಾದ ಹಂತಗಳನ್ನು ₹37,500–900–39,300–1,000–43,300–1,125–47,800–1,250–52,800–1,375–58,300–1,500–64,300–1,650–74,200–1,900–₹76,100 ಎಂದು ನೀಡಲಾಗಿದೆ.

ನೇಮಕಗೊಂಡವರಿಗೆ ನಿರ್ದೇಶಕ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ನಿಗದಿಪಡಿಸುವ ಸಂಸ್ಥೆಗಳಲ್ಲಿ 9 ತಿಂಗಳ ಮೂಲಭೂತ ತರಬೇತಿ ನೀಡಲಾಗುತ್ತದೆ. ತರಬೇತಿ ಪರೀಕ್ಷೆಗಳನ್ನು ಪಾಸಾಗುವುದು ಕಡ್ಡಾಯ. ನಂತರ 2 ವರ್ಷಗಳ ಪ್ರೊಬೇಷನ್ ಅವಧಿ ಇರುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅನ್ವಯಿಸುತ್ತದೆ.

ವಾಡರ್ ಹುದ್ದೆಗೆ SSLC ಸಾಕು

ವಾಡರ್ ಹುದ್ದೆಗೆ SSLC ಅಥವಾ ಸರ್ಕಾರ ಮಾನ್ಯಗೊಳಿಸಿರುವ ಸಮಾನ ಅರ್ಹತೆ ಹೊಂದಿರಬೇಕು.

ಅಧಿಸೂಚನೆಯ ಪ್ರಮುಖ ಷರತ್ತು ಎಂದರೆ, ಕೇವಲ ಅರ್ಜಿಯ ಕೊನೆಯ ದಿನಾಂಕದೊಳಗೆ ಫಲಿತಾಂಶ ಬಂದಿರಬೇಕು ಎಂಬುದಲ್ಲ; ಅಭ್ಯರ್ಥಿ SSLC/10ನೇ ತರಗತಿಯ ಅಂಕಪಟ್ಟಿಯನ್ನು ಕೊನೆಯ ದಿನಾಂಕದೊಳಗೆ ಹೊಂದಿರಬೇಕು. ಅರ್ಹತಾ ಪರೀಕ್ಷೆ ಬರೆದಿದ್ದು, ಫಲಿತಾಂಶ ಕೊನೆಯ ದಿನಾಂಕದೊಳಗೆ ಪ್ರಕಟವಾಗದಿದ್ದರೆ ಅಂತಹ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ.

ಇನ್ನೂ ಒಂದು ಮಹತ್ವದ ಅಂಶವೆಂದರೆ ಹೆಚ್ಚಿನ ವಿದ್ಯಾರ್ಹತೆ ಇದ್ದರೂ SSLCಗೆ ಪರ್ಯಾಯವಾಗುವುದಿಲ್ಲ. ಅಧಿಸೂಚನೆಯಲ್ಲಿ ನಿಗದಿಪಡಿಸಿದ SSLC ಅಥವಾ ಸಮಾನ ಅರ್ಹತೆಯನ್ನು ಹೊಂದಿರಲೇಬೇಕು.

Instructor Grade-IIಗೆ ಹೆಚ್ಚುವರಿ ಅರ್ಹತೆ

ದ್ವಿತೀಯ ದರ್ಜೆ ಬೋಧಕ ಹುದ್ದೆಗೆ ಕೂಡ SSLC ಅಥವಾ ಸಮಾನ ಅರ್ಹತೆ ಕಡ್ಡಾಯ.

ಇದರ ಜೊತೆಗೆ ಸರ್ಕಾರ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಾರ್ಪೆಂಟ್ರಿ, ಟೈಲರಿಂಗ್, ಟೆಕ್ಸ್ಟೈಲ್, ವೀವಿಂಗ್, ಕಾರ್ಪೆಟ್ ಮೇಕಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು.

ಕನ್ನಡ ಗೊತ್ತಿರಬೇಕು

ಅಭ್ಯರ್ಥಿಗಳು SSLC ಅಥವಾ ಅದಕ್ಕಿಂತ ಮೇಲಿನ ಹಂತದಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿದ್ದರೆ ಪ್ರತ್ಯೇಕ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇದೆ.

ಅಂತಹ ದಾಖಲೆ ಇಲ್ಲದವರು ಕೆಎಇಎ ಅಥವಾ ಅಧಿಕೃತ ಸಂಸ್ಥೆ ನಡೆಸುವ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ 150ಕ್ಕೆ ಕನಿಷ್ಠ 50 ಅಂಕ ಗಳಿಸಬೇಕು. ಪರೀಕ್ಷೆಯ ವಿವರವಾದ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.

ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಇರಬೇಕು.

2026ರ ಜನವರಿ 29ರ ಸರ್ಕಾರದ ಆದೇಶದ ಆಧಾರದ ಮೇಲೆ ಒಂದು ಬಾರಿಯ 5 ವರ್ಷದ ಸಡಿಲಿಕೆ ಸೇರಿಸಿ ಗರಿಷ್ಠ ವಯೋಮಿತಿ ಹೀಗಿದೆ:

ಸಾಮಾನ್ಯ ಅರ್ಹತೆ – 31 ವರ್ಷ

SC/ST, Cat-1, 2A, 2B, 3A ಮತ್ತು 3B – 33 ವರ್ಷ

ಮಾಜಿ ಸೈನಿಕರಿಗೆ ನಿಯಮಾನುಸಾರ ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಸೆ.19ರಿಂದ ಅರ್ಜಿ ಆರಂಭ

ಅರ್ಜಿ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

ಅರ್ಜಿ ಆರಂಭ: ಸೆಪ್ಟೆಂಬರ್ 19, 2026

ಅರ್ಜಿ ಸಲ್ಲಿಕೆ ಕೊನೆ: ಅಕ್ಟೋಬರ್ 15, 2026

ಶುಲ್ಕ ಪಾವತಿ ಕೊನೆ: ಅಕ್ಟೋಬರ್ 16, 2026

ಅಧಿಕೃತ KEA ವೆಬ್‌ಸೈಟ್ cetonline.karnataka.gov.in/kea/ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿಯನ್ನು ಒಮ್ಮೆ ಅಂತಿಮವಾಗಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ ಅಥವಾ ಮಾರ್ಪಾಡಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಸಲ್ಲಿಸುವ ಮುನ್ನ ಹೆಸರು, ಅರ್ಹತೆ, ಮೀಸಲಾತಿ, ವೈಯಕ್ತಿಕ ವಿವರಗಳು ಹಾಗೂ ಇತರ ಮಾಹಿತಿಯನ್ನು ಚೆಕ್ ಮಾಡಬೇಕು.

ಅರ್ಜಿ ಶುಲ್ಕ ಎಷ್ಟು?

GM, 2A, 2B, 3A ಮತ್ತು 3B – ₹750

SC, ST, Category-1, Ex-Servicemen ಮತ್ತು Transgender – ₹500

ಅರ್ಜಿಯಲ್ಲಿ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಹಾಗೂ ಸಹಿಯನ್ನು ನಿಗದಿತ JPEG ಗಾತ್ರದಲ್ಲಿ ಅಪ್‌ಲೋಡ್ ಮಾಡಬೇಕು. ಫೋಟೋ 50–200 KB, ಸಹಿ 50–70 KB ಇರಬೇಕು.

ನವೆಂಬರ್ 21ಕ್ಕೆ ಲಿಖಿತ ಪರೀಕ್ಷೆ

ನೇಮಕಾತಿಯ ಮೊದಲ ಹಂತವಾಗಿ ಆಫ್‌ಲೈನ್ OMR ಮಾದರಿಯ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ದಿನಾಂಕ: 21 ನವೆಂಬರ್ 2026

ಸಮಯ: ಮಧ್ಯಾಹ್ನ 3ರಿಂದ 4.30ರವರೆಗೆ

ಅವಧಿ: 90 ನಿಮಿಷ

ಒಟ್ಟು ಪ್ರಶ್ನೆಗಳು: 100

ಒಟ್ಟು ಅಂಕಗಳು: 100

ಪ್ರಶ್ನೆ ಪತ್ರಿಕೆ SSLC ಮಟ್ಟದ ಆಗಿರುತ್ತದೆ. ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತೀಯ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ, ಪ್ರಚಲಿತ ವಿದ್ಯಮಾನಗಳು ಹಾಗೂ ಮಾನವೀಯ ಮೌಲ್ಯಗಳು/ನೈತಿಕತೆ ಸೇರಿದಂತೆ ವಿವಿಧ ವಿಷಯಗಳಿಂದ ಪ್ರಶ್ನೆಗಳು ಬರುತ್ತವೆ.

ತಪ್ಪು ಉತ್ತರಕ್ಕೂ ಅಂಕ ಕಡಿತ

ಲಿಖಿತ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ಮಾಡಲಾಗುತ್ತದೆ.

ಅದರಲ್ಲೂ ಉತ್ತರವನ್ನು ಖಾಲಿ ಬಿಡುವುದು ಅಥವಾ ಒಂದಕ್ಕಿಂತ ಹೆಚ್ಚು ಆಯ್ಕೆ ಗುರುತಿಸುವುದಕ್ಕೂ ನಿಗದಿತ OMR ವಿಧಾನದಲ್ಲಿ 0.25 ಅಂಕಗಳ ಕಡಿತ ಅನ್ವಯಿಸುತ್ತದೆ ಎಂದು ಅಧಿಸೂಚನೆ ತಿಳಿಸಿದೆ. ಐದನೇ ಆಯ್ಕೆಯನ್ನು ಗುರುತಿಸಲು ಹೆಚ್ಚುವರಿ 5 ನಿಮಿಷಗಳ ವ್ಯವಸ್ಥೆಯೂ ಇದೆ.

ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಅಂಕ ಗಳಿಸುವ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಪರಿಗಣಿಸಲಾಗುವುದಿಲ್ಲ.

ನಂತರ PST ಮತ್ತು Endurance Test

ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿಂದ 1:5 ಅನುಪಾತದಲ್ಲಿ ಮುಂದಿನ ಹಂತಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಇಲ್ಲಿ ಲಿಖಿತ ಪರೀಕ್ಷೆಯ ಅಂಕಗಳ ಜೊತೆಗೆ ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ, ವರ್ಗವಾರು ಮೆರಿಟ್‌ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ Physical Standard Test (PST) ಮತ್ತು Endurance Test (ET) ನಡೆಯಲಿದೆ.

ಪುರುಷ ಅಭ್ಯರ್ಥಿಗಳಿಗೆ

ಎತ್ತರ – 168 ಸೆಂ.ಮೀ.

ಎದೆ – 86 ಸೆಂ.ಮೀ.

ಎದೆ ವಿಸ್ತರಣೆ – ಕನಿಷ್ಠ 5 ಸೆಂ.ಮೀ.

ಮಹಿಳೆಯರು ಮತ್ತು Transgender ಅಭ್ಯರ್ಥಿಗಳಿಗೆ

ಎತ್ತರ – 157 ಸೆಂ.ಮೀ.

ತೂಕ – 46 ಕೆ.ಜಿ.

ಮಾಜಿ ಸೈನಿಕರಿಗೆ ಅಧಿಸೂಚನೆಯಲ್ಲಿ ಪ್ರತ್ಯೇಕ ಅನ್ವಯಿಸುವ ಮಾನದಂಡಗಳಿವೆ.

Endurance Testನಲ್ಲಿ ಯಾವೆಲ್ಲಾ ಸ್ಪರ್ಧೆ?

ಪುರುಷ ಅಭ್ಯರ್ಥಿಗಳಿಗೆ 100 ಮೀಟರ್ ಓಟ 15 ಸೆಕೆಂಡ್, ಹೈಜಂಪ್ 1.20 ಮೀಟರ್, ಲಾಂಗ್‌ಜಂಪ್ 3.80 ಮೀಟರ್, 5.60 ಮೀಟರ್ ಶಾಟ್‌ಪುಟ್ (7.26 ಕೆಜಿ) ಹಾಗೂ 800 ಮೀಟರ್ ಓಟ 2 ನಿಮಿಷ 50 ಸೆಕೆಂಡ್ ಒಳಗೆ ಪೂರ್ಣಗೊಳಿಸಬೇಕು.

ಮಹಿಳೆ/Transgender/Ex-servicemen ಅಭ್ಯರ್ಥಿಗಳಿಗೆ 100 ಮೀಟರ್ ಓಟ 18.5 ಸೆಕೆಂಡ್, ಹೈಜಂಪ್ 0.90 ಮೀಟರ್, ಲಾಂಗ್‌ಜಂಪ್ 2.50 ಮೀಟರ್, 3.75 ಮೀಟರ್ ಶಾಟ್‌ಪುಟ್ (3.63 ಕೆಜಿ) ಹಾಗೂ 200 ಮೀಟರ್ ಓಟ 40 ಸೆಕೆಂಡ್ ಎಂಬ ಮಾನದಂಡಗಳಿವೆ.

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ನಿಗದಿಪಡಿಸಿರುವ 5 ಪರೀಕ್ಷೆಗಳ ಪೈಕಿ ಕನಿಷ್ಠ 3ರಲ್ಲಿ ಅರ್ಹತೆ ಪಡೆಯಬೇಕು. ಈ ಹಂತಕ್ಕೆ ಪ್ರತ್ಯೇಕ ಅಂಕ ನೀಡಲಾಗುವುದಿಲ್ಲ; ಇದು ಅರ್ಹತಾ ಪರೀಕ್ಷೆಯಾಗಿದೆ.

ವೈದ್ಯಕೀಯ ಪರೀಕ್ಷೆಯೂ ಕಠಿಣ

PST ಮತ್ತು Endurance Testನಲ್ಲಿ ಅರ್ಹರಾದವರಲ್ಲಿಂದ ಖಾಲಿ ಹುದ್ದೆಗಳ 1:2 ಅನುಪಾತದಲ್ಲಿ ವರ್ಗವಾರು ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

Medical Board ಮೂಲಕ ಪರೀಕ್ಷೆ ನಡೆಯಲಿದೆ. ಕಣ್ಣಿನ ದೃಷ್ಟಿ, ಬಣ್ಣ ಗುರುತಿಸುವಿಕೆ, ರಾತ್ರಿ ದೃಷ್ಟಿ, ಕಿವಿ ಹಾಗೂ ಸಮತೋಲನ ಪರೀಕ್ಷೆಗಳು ಸೇರಿದಂತೆ ಹಲವು ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.

Colour blindness, night blindness, varicose veins, speech impediment, knock knees, flat foot, cubitus valgus/varus ಮತ್ತು ವಿವಿಧ musculoskeletal deformities ಇದ್ದರೆ ಅನರ್ಹತೆ ಉಂಟಾಗಬಹುದು. ಅಗತ್ಯವಿದ್ದರೆ Chest X-ray ಹಾಗೂ ಇತರ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಬಹುದು.

ದಾಖಲೆ ಪರಿಶೀಲನೆ ಬಳಿಕ ಅಂತಿಮ ನೇಮಕ

ತಪ್ಪಾದ ಅಥವಾ ನಿಗದಿತ ನಮೂನೆಯಲ್ಲಿ ಇಲ್ಲದ ಪ್ರಮಾಣಪತ್ರ ಸಲ್ಲಿಸಿದರೆ ಮೀಸಲಾತಿ ಹಕ್ಕನ್ನು ತಿರಸ್ಕರಿಸಿ, ಅರ್ಹತೆ ಇದ್ದಲ್ಲಿ ಸಾಮಾನ್ಯ ಮೆರಿಟ್‌ಗೆ ಮಾತ್ರ ಪರಿಗಣಿಸುವ ಸಾಧ್ಯತೆ ಇದೆ.

ಅಂತಿಮ ಮೆರಿಟ್ ಪಟ್ಟಿಯನ್ನು ನೇಮಕಾತಿ ಪ್ರಾಧಿಕಾರ ನಿಯಮಾನುಸಾರ ಸಿದ್ಧಪಡಿಸುತ್ತದೆ. ನೇಮಕಾತಿಗೆ ಮೊದಲು ಚರಿತ್ರೆ ಪರಿಶೀಲನೆ ಹಾಗೂ ಇತರ ಅರ್ಹತಾ ಷರತ್ತುಗಳನ್ನೂ ಪೂರೈಸಬೇಕು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed