Lucia-2 Movie: ಲೂಸಿಯಾ-2 ಸಿನಿಮಾ ಬರುತ್ತಾ? ಸುಳಿವು ಕೊಟ್ಟ ಡೈರೆಕ್ಟರ್ ಪವನ್ ಕುಮಾರ್! | | ACTPnews

ಲೂಸಿಯಾ 2 ಬರುತ್ತಾ?


Last Updated:

Lucia-2 Movie: ಲೂಸಿಯಾ ಚಿತ್ರದ ಡೈರೆಕ್ಟರ್ ಪವನ್ ಕುಮಾರ್ ಹೊಸ ಸುದ್ದಿ ಕೊಟ್ಟಿದ್ದಾರೆ. ಲೂಸಿಯಾ ಚಿತ್ರ ಬಂದು 13 ವರ್ಷ ಆಗಿದೆ. ಈ ದಿನವೇ ಪವನ್ ಕುಮಾರ್ ಅವರು ಲೂಸಿಯಾ-2 ಬಗ್ಗೆ ಮಾತನಾಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ…

ಲೂಸಿಯಾ 2 ಬರುತ್ತಾ?
ಲೂಸಿಯಾ 2 ಬರುತ್ತಾ?

ಲೂಸಿಯಾ ಚಿತ್ರ (Lucia-2 Movie) ಸಹಕಾರಿ ಚಿತ್ರವೇ ಆಗಿತ್ತು. ಈ ಪ್ರಯೋಗವನ್ನ ಡೈರೆಕ್ಟರ್ ಪವನ್ ಕುಮಾರ್ (Pawan Kumar) ಮಾಡಿದ್ದರು. ಲೂಸಿಯಾ (Lucia) ಅನ್ನುವ ಒಂದು ಮಾತ್ರ ಇಲ್ಲಿ ಕಮಾಲ್ ಮಾಡಿತ್ತು. ಸತೀಶ್ ನೀನಾಸಂ ಈ ಚಿತ್ರದ ಮೂಲಕ ಟಾಪ್ ಸ್ಟಾರ್ ಆದರು. ಒಳ್ಳೆ ಕತೆ, ಒಳ್ಳೆ ಹಾಡು ಹೀಗೆ ಸುಮಾರು ವಿಚಾರ ಈ ಚಿತ್ರದಲ್ಲಿದ್ದವು. ಕನ್ನಡಕ್ಕೆ ಇದು ಒಂದು ರೀತಿ ಹೊಸ ಮ್ಯಾಜಿಕಲ್ ಅನುಭವ ಕೊಟ್ಟಿತ್ತು. ಆದರೆ, ಇದರ ಪಾರ್ಟ್-2 ಬಗ್ಗೆ ಸ್ವತಃ ಪವನ್ ಕುಮಾರ್ (Pawan Kumar) ಯೋಚನೆ ಮಾಡಿರಲಿಲ್ಲ. ಇದೀಗ ಇದೇ ಪವನ್ ಮನಸ್ಸು ಮಾಡಿದ್ದಾರೆ. ಮನಸ್ಸಿನ ಆ ಮಾತುಗಳನ್ನ ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಅಲ್ಲಿಗೆ ಕತೆ ಮುಗಿತು..

ಈ ರೀತಿನೇ ಪವನ್ ಕುಮಾರ್ ಅಂದುಕೊಂಡಿದ್ದರು. ಲೂಸಿಯಾ ಚಿತ್ರದ ಕತೆ ಪೂರ್ಣ ಆಗಿದೆ. ಅಲ್ಲಿ ಹೇಳುವುದು ಏನೂ ಇಲ್ಲ. ಪಾರ್ಟ್-2 ಅನ್ನುವುದು ಏನೂ ಇಲ್ಲ ಅನ್ನುವ ಯೋಚನೆಯಲ್ಲಿಯೇ ಇದ್ದರು. ಆದರೆ, ಚಿತ್ರ ಬಂದು 2026 ಕ್ಕೆ 13 ವರ್ಷ ಆಗುತ್ತದೆ. ಹಾಗಾಗಿಯೇ ಸ್ನೇಹಿತರು ಈ ವಿಚಾರವನ್ನ ಪವನ್ ಕುಮಾರ್ ಅವರಿಗೂ ಹೇಳಿದ್ದಾರೆ. ಮೆಸೇಜ್ ಕೂಡ ಮಾಡಿದ್ದಾರೆ.
ಗಟ್‌ ಫೀಲಿಂಗ್…

ಪವನ್ ಕುಮಾರ್ ಅವರಿಗೆ ಅನಿಸಿದೆ. ಯಾಕೆ ಆ ಮಾತ್ರೆಗಳಿಗೆ ಒಂದು ಕತೆ ಕೊಡ್ಬಾರ್ದು ಅನಿಸಿದೆ. ಆ ಅನಿಸಿಕೆಯನ್ನ ಈಗ ವಿಡಿಯೊ ಮೂಲಕ ಹೇಳಿದ್ದಾರೆ. ಈ ಚಿತ್ರವನ್ನ ಮತ್ತೆ ಮಾಡ್ಬೇಕು ಅಂತ ಅನಿಸಿದೆ. ಅದಕ್ಕೇನೆ ಈ ವಿಡಿಯೋ ಮಾಡಿದ್ದಾರೆ. ಮತ್ತೊಮ್ಮೆ ಎಲ್ಲರ ಜೊತೆಗೂಡಿಯೇ ಈ ಚಿತ್ರ ಮಾಡುವ ಯೋಚನೆ ಮಾಡ್ತಿದ್ದಾರೆ. ಹಾಗಾಗಿಯೇ ಈ ವಿಡಿಯೋ ಮಾಡಿದ್ದಾರೆ.

ಆಗ 28 ವರ್ಷ

ಲೂಸಿಯಾ ಚಿತ್ರ ಮಾಡಿದಾಗ ಪವನ್‌ ಅವರಿಗೆ 28 ವರ್ಷ ಆಗಿತ್ತು. ಆದರೆ, ಇದೀಗ 44 ವರ್ಷ ಆಗಿದೆ. ಈ 13 ವರ್ಷದಲ್ಲಿ ಪವನ್ ಕುಮಾರ್ ಬೇರೆ ಬೇರೆ ಸಿನಿಮಾ ಮಾಡಿದ್ದಾರೆ.

ನಮ್ಮ ಈ ಸಂಬಂಧಿ ನಿಮ್ಮ ಚಿತ್ರಕ್ಕೆ ದುಡ್ಡುಹಾಕಿದ್ದರು ಅನ್ನೋದನ್ನು ನೆನಪಿಸಿಕೊಂಡು ಹೆಮ್ಮೆ ಪಟ್ಟಿದ್ದಾರೆ. ಹೀಗೆ ಎಲ್ಲರೂ ಲೂಸಿಯಾ ಚಿತ್ರವನ್ನ ಸಂಭ್ರಮಿಸಿದ್ದಾರೆ.

ಈಗ ಹೇಗೆ ಆಗ್ತದೋ

ಲೂಸಿಯಾ-2 ಮಾಡುವ ಮನಸ್ಸು ಮಾಡಿದ್ದಾರೆ. ಪವನ್ ಕುಮಾರ್ ಒಬ್ಬರೆ ಸದ್ಯ ಮುಂದೆ ಬಂದಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲೂ ವಿಡಿಯೋ ಮೂಲಕ ಇದನ್ನ ಹೇಳಿಕೊಂಡಿದ್ದಾರೆ. ಲೂಸಿಯಾ-2 ಚಿತ್ರ ಮಾಡಲು ಅದೆಷ್ಟು ಜನ ಈಗ ಆಸಕ್ತಿ ತೋರಿಸ್ತಾರೋ ಅನ್ನುವ ಕುತೂಹಲವು ಇದೆ. ಲೂಸಿಯಾ-2 ಚಿತ್ರವನ್ನ ಮಾಡಬಹುದು ಅಂತಲೂ ಪವನ್‌ಗೆ ಅನಿಸಿದೆ. ಇಷ್ಟು ದಿನ ಸೋಲುವ ಭಯ ಇತ್ತು. ಆದರೆ, ಈಗ ಲೂಸಿಯಾ-2 ಚಿತ್ರ ಮಾಡಬಹುದು ಅನ್ನುವ ಭಾವನೆ ಇವರಲ್ಲಿ ಗಟ್ಟಿಯಾಗಿಯೇ ಮೂಡಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed