Last Updated:
AVBP wins Delhi University: ದೇಶದ ಗಮನ ಸೆಳೆದಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಬಿವಿಪಿ ಅಭ್ಯರ್ಥಿಗಳು ಮೂರರಲ್ಲಿ ಗೆಲುವು ಪಡೆದ್ರೆ, ಓರ್ವ ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಯಿತು.
ದೆಹಲಿ: ದೇಶದ ಗಮನ ಸೆಳೆದಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆ (Delhi University Students’ Union election) ಫಲಿತಾಂಶ ಹೊರಬಿದ್ದಿದೆ. ನಿನ್ನೆ ಎಲೆಕ್ಷನ್ ನಡೆದಿದ್ದು, ಸುಮಾರು 52 ಕೇಂದ್ರಗಳಲ್ಲಿ ಮತದಾನ ನಡೆದಿತ್ತು. 20 ಸುತ್ತುಗಳ ಮತ ಎಣಿಕೆ ಬಳಿಕ ಇದೀಗ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ (BJP) ಬೆಂಬಲಿತ ಎಬಿವಿಬಿ (ABVP) ಭರ್ಜರಿ ಗೆಲುವು ಪಡೆದಿದೆ. ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ (NSUI) ಹೀನಾಯ ಸೋಲು ಕಂಡಿದೆ. 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಬಿವಿಪಿ ಅಭ್ಯರ್ಥಿಗಳು ಮೂರರಲ್ಲಿ ಗೆಲುವು ಪಡೆದ್ರೆ, ಓರ್ವ ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಾಲ್ಕು ಕೇಂದ್ರೀಯ ಸ್ಥಾನಗಳಲ್ಲಿ ಮೂರನ್ನು ಗೆದ್ದಿದೆ. ಇನ್ನೊಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. ಅಧ್ಯಕ್ಷ ಸ್ಥಾನ ಎಬಿವಿಪಿಯ ಯಶ್ ದಬಾಸ್ (Yash Dabas) ಪಾಲಾಗಿದ್ದು, 24,576 ಮತಗಳನ್ನು ಪಡೆದಿದ್ದಾರೆ. NSUIನ ವಿಜಯ್ ಶಂಕರ್ ಮೀನಾ 22,523 ಮತ ಪಡೆದಿದ್ದು, 2,053 ಮತಗಳ ಅಂತರದಿಂದ ಸೋತಿದ್ದಾರೆ.
ಇನ್ನು ಕಾರ್ಯದರ್ಶಿಯಾಗಿ (Secretary) ಎಬಿವಿಪಿಯ ರಿಯಾ ಛಾವ್ಡಿ (Riya Chhawdi) 21,650 ಮತಗಳನ್ನು ಪಡೆದಿದ್ದಾರೆ. ಇವರ ವಿರುದ್ಧ NSUIನ ನಮ್ರತಾ ಚೌಧರಿ 14,869 ಮತ ಪಡೆದು, ಸೋತಿದ್ದಾರೆ. ಜಂಟಿ ಕಾರ್ಯದರ್ಶಿ (Joint Secretary) ಸ್ಥಾನಕ್ಕೆ ಎಬಿವಿಪಿಯ ಲಕ್ಷ್ಯ ರಾಜ್ ಸಿಂಗ್ (Lakshya Raj Singh) ಸುಮಾರು 16,641 ಮತ ಪಡೆದಿದ್ದಾರೆ. ಇನ್ನು ಸ್ವತಂತ್ರ ಅಭ್ಯರ್ಥಿ ವಿಶೇಷ್ ಯಾದವ್ 15,778 ಮತ ಪಡೆದು, NSUIನ ಗೋಪಾಲ್ ಚೌಧರಿಯನ್ನು ಸೋಲಿಸಿದ್ದಾರೆ.
ABVP ಕಳೆದ ವರ್ಷದಂತೆ (2025) ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ. ಹೊಸ ಅಧ್ಯಕ್ಷ ಯಶ್ ದಬಾಸ್ ಇದನ್ನು “ವಿದ್ಯಾರ್ಥಿಗಳು, ಸಾಮರಸ್ಯ, ಸಂಘ ಮತ್ತು ದೇಶಭಕ್ತರ ವಿಜಯ” ಎಂದು ವಿವರಿಸಿದ್ದಾರೆ. ಅವರು PG ಮತ್ತು ಹಾಸ್ಟೆಲ್ಗಳಲ್ಲಿ ಸುರಕ್ಷತಾ ಆಡಿಟ್, ಸತ್ಯ ನಿಕೇತನದಂತಹ ಘಟನೆಗಳನ್ನು ತಡೆಯುವುದನ್ನು ಆದ್ಯತೆಯಾಗಿ ಹೇಳಿದ್ದಾರೆ.
ಕಾಂಗ್ರೆಸ್ ಬೆಂಬಲಿತ NSUI (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ) ಯಾವುದೇ ಕೇಂದ್ರೀಯ ಸ್ಥಾನವನ್ನು ಗೆಲ್ಲಲಿಲ್ಲ. ಎಲ್ಲಾ ನಾಲ್ಕು ಸ್ಥಾನಗಳಲ್ಲೂ ಸೋಲು ಅನುಭವಿಸಿದೆ. ಅಧ್ಯಕ್ಷ ಸ್ಥಾನದಲ್ಲಿ ವಿಜಯ್ ಶಂಕರ್ ಮೀನಾ ಹತ್ತಿರದಿಂದ ಸೋತರು; ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳಲ್ಲೂ ಅವರ ಅಭ್ಯರ್ಥಿಗಳು ಹಿಂದೆ ಬಿದ್ದರು. ಕಳೆದ ವರ್ಷ (2025) NSUI ಉಪಾಧ್ಯಕ್ಷ ಸ್ಥಾನವನ್ನು ಗೆದ್ದಿತ್ತು, ಆದರೆ ಈ ಬಾರಿ ಸಂಪೂರ್ಣವಾಗಿ ಖಾಲಿಯಾಗಿದೆ.
ಎಬಿವಿಪಿ ಗೆಲುವಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. “ಈ ಗೆಲುವು ಮಂಡಳಿಯ “ರಾಷ್ಟ್ರ ಮೊದಲು” ಎಂಬ ಸಿದ್ಧಾಂತದಲ್ಲಿ ಯುವಕರ ಅಚಲ ನಂಬಿಕೆ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಗೆಲುವಿನಿಂದ ಹೊಸ ಶಕ್ತಿಯನ್ನು ಪಡೆದು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅನುಸರಿಸಿ ಮಂಡಳಿಯ ಕಾರ್ಯಕರ್ತರು ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಮುಂದುವರಿಯುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ-ಸಂಚಾಲಕ ಸಿದ್ಧಾರ್ಥ್ ಯಾದವ್ ಕೂಡ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಕಾಂಗ್ರೆಸ್ ಅನ್ನು ಟೀಕಿಸಿದರು. ಅವರು ಡಿಯು ವಿದ್ಯಾರ್ಥಿಗಳು “ರಾಹುಲ್ ಗಾಂಧಿಗೆ ದೊಡ್ಡ ಸೊನ್ನೆಯನ್ನು ನೀಡಿದರು” ಎಂದು ಹೇಳಿದರು. ಫಲಿತಾಂಶಗಳಲ್ಲಿ ಒಂದು ವಿಶೇಷ ಘಟನೆ ನಡೆದಿದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಮತ್ತು ಅವರ ವಿದ್ಯಾರ್ಥಿ ಸಂಘಟನೆಯಾದ NSUI ಗೆ ಒಂದು ದೊಡ್ಡ ಶೂನ್ಯವನ್ನು ನೀಡಿದ್ದಾರೆ” ಎಂದು ಅವರು ಹೇಳಿದ್ದಾರೆ.














