Last Updated:
ಸಿಟಿ ಲೈಟ್ಸ್ ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಬಂದಿದೆ. ವಿನಯ್ ರಾಜ್‌ಕುಮಾರ್ ಅಭಿನಯ ಕಂಡು ಬಹುತೇಕರು ಆಶ್ವರ್ಯ ಪಟ್ಟಿದ್ದಾರೆ. ಮೊನಿಷಾ ವಿಜಯ್ ಕುಮಾರ್ ಅಭಿನಯಕ್ಕೂ ಒಳ್ಳೆ ಅಭಿಪ್ರಾಯ ಬರ್ತಿದೆ. ಜನರ ಅಭಿಪ್ರಾಯದ ಇನ್ನಷ್ಟು ವಿವರ ಇಲ್ಲಿದೆ ಓದಿ…
ಸಿಟಿ ಲೈಟ್ಸ್ ಚಿತ್ರಕ್ಕೆ (City Lights Movie) ಒಳ್ಳೆ ಅಭಿಪ್ರಾಯ ಬರ್ತಿವೆ. ಮೊದಲ ದಿನ ಚಿತ್ರ ನೋಡಿದವರಿಗೆ ಇದು ಇಷ್ಟ ಆಗಿದೆ. ಸಲಗ, ಭೀಮ ಚಿತ್ರ ನೋಡಿದರೆ ಇದು ದಿ ಬೆಸ್ಟ್ ಅಂದವರೂ ಇದ್ದಾರೆ. ವಿನಯ್ ರಾಜ್‌ಕುಮಾರ್ (Vinay Rajkumar) ಈ ಚಿತ್ರದಲ್ಲಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಮೊನಿಷಾ ವಿಜಯ್ ಕುಮಾರ್ (Monisha Vijaykumar) ಆ್ಯಕ್ಟಿಂಗ್ ಕೂಡ ಮೆಚ್ಚಿಕೊಂಡಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬರುವವರು ಈ ಒಂದು ಚಿತ್ರ ನೋಡಿದರೆ ಬರೋಕೆ ಯೋಚನೆ ಮಾಡ್ತಾರೆ ಅನ್ನುವ ಓಪನಿಯನ್ ಕೂಡ ಬಂದಿದೆ. ಇನ್ನು ಏನೆಲ್ಲ ರೆಸ್ಪಾನ್ಸ್ ಬಂದಿದೆ ಅನ್ನೋದು ಇಲ್ಲಿದೆ ಓದಿ.
ಆಶ್ಚರ್ಯ ಮೂಡಿಸಿದ ವಿನಯ್ ರಾಜ್‌ಕುಮಾರ್
(ಚಿತ್ರ ಕೃಪೆ: ದುನಿಯಾ ವಿಜಯ್ ಇನ್‌ಸ್ಟಾಗ್ರಾಮ್)
ಈ ಚಿತ್ರ ಚೆನ್ನಾಗಿದೆ. ಒಳ್ಳೆ ಸಂದೇಶ ಕೂಡ ಸಿನಿಮಾದಲ್ಲಿದೆ. ಹೆಣ್ಣುಮಕ್ಕಳಿಗೆ ಇದರಲ್ಲಿ ಉತ್ತಮ ಸಂದೇಶವನ್ನ ದುನಿಯಾ ವಿಜಯ್ ಇಟ್ಟಿದ್ದಾರೆ ಅನ್ನುವ ಅಭಿಪ್ರಾಯವು ಬಂದಿವೆ.
ದುನಿಯಾ ವಿಜಯ್ ಅವರು ಹೀಗೆ ಚಿತ್ರ ಮಾಡ್ತಾರೆ ಅಂತ ಗೊತ್ತಾಗಿದೆ. ಸಲಗ ಹಾಗೂ ಭೀಮಾ ಚಿತ್ರದಲ್ಲಿ ಅದನ್ನ ನೋಡಿದ್ದೇವೆ. ಸಿಟಿ ಲೈಟ್ಸ್ ಚಿತ್ರವನ್ನು ನಿರೀಕ್ಷಿಸಿದಂತೆ ಚೆನ್ನಾಗಿ ಮಾಡಿದ್ದಾರೆ. ಈ ಚಿತ್ರದಲ್ಲಿರೋ ಆ್ಯಕ್ಷನ್ ಚೆನ್ನಾಗಿವೆ. ವಿನಯ್ ರಾಜ್‌ಕುಮಾರ್ ಚೆನ್ನಾಗಿ ಮಾಡಿದ್ದಾರೆ. ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ ಅಂತಲೇ ಯುವತಿಯೊಬ್ಬರು ಹೇಳಿದ್ದಾರೆ.
ವಿನಯ್ ರಾಜ್‌ಕುಮಾರ್ ಈ ಹಿಂದಿನ ಚಿತ್ರದಲ್ಲಿ ಬೇರೆ ರೀತಿ ಇದ್ದರು. ಆದರೆ, ಈ ಚಿತ್ರದಲ್ಲಿ ಪಕ್ಕಾ ಪಳಗಿದಂತೆ ಇದೆ. ಸಿನಿಮಾ ನೋಡಿ ಬರುವವರು ಹೇಳುವ ಮಾತು ಒಂದೆ ನೋಡಿ. ಅದು ಮುಂದೆ ಇದೆ ಓದಿ.
ವಿನಯ್ ರಾಜ್‌ಕುಮಾರ್ ಈ ರೀತಿ ಅಭಿನಯಸುತ್ತಾರೆ ಅಂತ ಗೊತ್ತೇ ಇರಲಿಲ್ಲ. ನಿಜಕ್ಕೂ ಇವರು ಆಶ್ಚರ್ಯ ಮೂಡಿಸಿದ್ದಾರೆ. ನಿರೀಕ್ಷೆ ಮಾಡಿರಲಿಲ್ಲ ಅಂತೂ ಅನೇಕರು ಹೇಳಿರೋದು ಇದೆ.
ಸಿಟಿ ಲೈಟ್ಸ್ ಚಿತ್ರದಲ್ಲಿ ಹುಡ್ಗಿಯರಿಗೆ ಸಂದೇಶ
(ಚಿತ್ರ ಕೃಪೆ: ದುನಿಯಾ ವಿಜಯ್ ಇನ್‌ಸ್ಟಾಗ್ರಾಮ್)
ಸಿಟಿ ಲೈಟ್ಸ್ ಸಿನಿಮಾ ಚೆನ್ನಾಗಿದೆ. ಚಿತ್ರದಲ್ಲಿ ಉತ್ತಮ ಸಂದೇಶ ಇದೆ. ಆ್ಯಕ್ಷನ್ ಕೂಡ ಅನೇಕರಿಗೆ ಇಷ್ಟ ಆಗಿದೆ. ಮೊನಿಷಾ ವಿಜಯ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಅವರ ಅಭಿನಯಕ್ಕೂ ಒಳ್ಳೆ ಅಭಿಪ್ರಾಯ ಬಂದಿವೆ.
ಚರಣ್ ರಾಜ್ ಮ್ಯೂಸಿಕ್ ಅನ್ನು ಜನ ಮೆಚ್ಚಿಕೊಂಡಿದ್ದಾರೆ. ಚರಣ್ ರಾಜ್ ನಿಜಕ್ಕೂ ದಿ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. ಈ ಸಿನಿಮಾದಲ್ಲಿ ಉತ್ತಮ ಮ್ಯೂಸಿಕ್ ಮಾಡಿದ್ದಾರೆ ಅಂತ ಹೇಳಿದ್ದಾರೆ.
ಸಿಟಿ ಲೈಟ್ಸ್ ಚಿತ್ರವನ್ನ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಈ ಚಿತ್ರಕ್ಕಿದೆ. ದುನಿಯಾ ವಿಜಯ್ ಹಾಗೂ ವಿಕ್ರಮ್ ಆರ್ಯ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಶಿವಸೇನಾ ಕ್ಯಾಮರಾವರ್ಕ್ ಮಾಡಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ ಡೈಲಾಗ್ ಬರೆದಿದ್ದಾರೆ. ಒಂದು ರೋಲ್ ಕೂಡ ಮಾಡಿದ್ದಾರೆ. ಉಮಾಶ್ರೀ ಅವರು ಒಂದು ಪ್ರಮುಖ ರೋಲ್ ಮಾಡಿದ್ದಾರೆ. ನವ ಕಲಾವಿದರಿಗೂ ಈ ಚಿತ್ರದಲ್ಲಿ ದುನಿಯಾ ವಿಜಯ್ ಅವಕಾಶ ಮಾಡಿಕೊಟ್ಟಿದ್ದಾರೆ ಅಂತ ಹೇಳಬಹುದು.














