ದೆಹಲಿಯಿಂದ ಕೋಲ್ಕತ್ತಾ ತನಕ, ಮುಂಬೈನಿಂದ ಬೆಂಗಳೂರುವರೆಗೆ ದೇಶಾದ್ಯಂತ ನಗರಗಳಲ್ಲಿ ಆಪಲ್ ಸ್ಟೋರ್ಗಳ ಹೊರಗೆ ನೂರಾರು ಜನರು ತಮ್ಮ ಸರದಿಗಾಗಿ ಕ್ಯೂನಲ್ಲಿ ನಿಂತು ಕಾತರದಿಂದ ಕಾಯುತ್ತಿದ್ದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೆಹಲಿ , ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ನಂತಹ ನಗರಗಳಲ್ಲಿ ಆಪಲ್ ಸ್ಟೋರ್ಗಳ ಹೊರಗೆ ನೂರಾರು ಜನರು ಮೊಬೈಲ್ ಖರೀದಿಗೆ ಲೈನ್ನಲ್ಲಿ ನಿಂತಿರುವುದು ಕಂಡುಬಂದಿದೆ. ಹೊಸ ಐಫೋನ್ 18 ಪ್ರೊಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಐಫೋನ್ ಪ್ರಿಯರು ಹೇಳಿದ್ದಾರೆ.
ಅನೇಕ ಜನರು ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್ ಅನ್ನು ಮೊದಲೇ ಬುಕ್ ಮಾಡಿದ್ದಾರೆ, ಮತ್ತು ಕಂಪನಿಯು ಅವರಿಗೆ ಟೈಮ್ ಸ್ಲಾಟ್ ಅನ್ನು ಸಹ ನೀಡಿದೆ. ಈತನ್ಮಧ್ಯೆ, ಅನೇಕ ಜನರು ಬುಕಿಂಗ್ ಇಲ್ಲದೆ ಆಗಮಿಸಿ ಸ್ಥಳದಲ್ಲೇ ಹೊಸ ಐಫೋನ್ 18 ಪ್ರೊ ಅನ್ನು ಖರೀದಿಸಲು ಮುಂದಾಗಿದ್ದಾರೆ.
ನೋಯ್ಡಾದ ಆಪಲ್ ಸ್ಟೋರ್ನಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ನ ಮೊದಲ ಮಾರಾಟ ಪ್ರಾರಂಭವಾಗಿದೆ. ಹೊಸ ಸಾಧನಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯ ಜನರು ಡಿಎಲ್ಎಫ್ ಮಾಲ್ನಲ್ಲಿರುವ ಆಪಲ್ ಸ್ಟೋರ್ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಅನೇಕ ಆಪಲ್ ಸ್ಟೋರ್ಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಐಫೋನ್ ಖರೀದಿಗೆ ಆಸಕ್ತಿ ತೋರಿಸಿದ್ದಾರೆ.
ದೆಹಲಿಯ ಸಾಕೇತ್ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್ನಲ್ಲಿ ಆಪಲ್ ಸ್ಟೋರ್ ಇದೆ. ಇಲ್ಲಿ ರಾತ್ರಿಯಿಡೀ ಅನೇಕ ಜನರು ಶಾಪ್ ಹೊರಗೆ ನಿಂತಿರುವುದು ಕಂಡುಬಂತು ಮತ್ತು ಬೆಳಿಗ್ಗೆ ಬರುತ್ತಿದ್ದಂತೆ ಈ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಯಿತು.
ಇದೇ ಸಾಲಿನಲ್ಲಿ ನಿಂತಿದ್ದ ಅಜಯ್, ಐಫೋನ್ 18 ಪ್ರೊ ಮ್ಯಾಕ್ಸ್ 1 ಟಿಬಿ ಖರೀದಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ಅವರು ಈಗಾಗಲೇ ಮೊದಲೇ ಬುಕ್ ಮಾಡಿದ್ದು, ಈಗ ಐಫೋನ್ ಖರೀದಿಸುವ ಮೊದಲ ಗ್ರಾಹಕ ತಾನಾಗಬೇಕು ಎಂಬ ಉತ್ಸುಕತೆಯಲ್ಲಿದ್ದರು. ಅಂಗಡಿಯ ಹೊರಗೆ ದೊಡ್ಡ ಜನಸಂದಣಿ ಇತ್ತು, ಪ್ರಸ್ತುತ ಅವರು ಐಫೋನ್ 17 ಪ್ರೊ ಅನ್ನು ಬಳಸುತ್ತಿದ್ದಾರೆ ಮತ್ತು ಹೊಸ ಐಫೋನ್ 18 ಪ್ರೊ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಐಫೋನ್ 18 ಪ್ರೊ ನ ಒರಿಜಿನಲ್ ವರ್ಶನ್ ಬೆಲೆ 1,64,999 ರೂ. ಮತ್ತು ಇದು 256GB ಸ್ಟೋರೇಜ್ ಅನ್ನು ಒಳಗೊಂಡಿದೆ.
512GB ವರ್ಶನ್ ಬೆಲೆ ₹1,89,900 ಮತ್ತು 1TB ವರ್ಶನ್ನ ಬೆಲೆ ₹2,39,900. ಟಾಪ್-ಎಂಡ್ ವರ್ಶನ್ 2TB ಸ್ಟೋರೇಜ್ನೊಂದಿಗೆ ಬರುತ್ತದೆ ಮತ್ತು ಇದರ ಬೆಲೆ ₹3,14,900.
ಐಫೋನ್ 18 ಪ್ರೊ ಮ್ಯಾಕ್ಸ್ನ ಮೂಲ ವರ್ಶನ್ ಬೆಲೆ 1,79,900 ರೂ.ಗಳಾಗಿದ್ದು, ಇದು 256GB ಸ್ಟೋರೇಜ್ ಅನ್ನು ನೀಡುತ್ತದೆ.
512GB ಸ್ಟೋರೇಜ್ ವರ್ಶನ್ ಬೆಲೆ ₹204,900, ಮತ್ತು 1TB ವರ್ಶನ್ ಬೆಲೆ ₹254,900. ಟಾಪ್-ಎಂಡ್ 2TB ವರ್ಶನ್ ಬೆಲೆ ₹329,900. ಎರಡೂ ಹ್ಯಾಂಡ್ಸೆಟ್ಗಳು ಕಪ್ಪು, ಬೆಳ್ಳಿ, ಗ್ಲೇಸಿಯರ್ ಮತ್ತು ಬರ್ಗಂಡಿ ಬಣ್ಣಗಳಲ್ಲಿ ಬರುತ್ತವೆ.
ಮೊದಲ ಮಾರಾಟದ ಸಮಯದಲ್ಲಿ, ಐಫೋನ್ 18 ಪ್ರೊ ಸರಣಿಯು ಆಯ್ದ ಬ್ಯಾಂಕ್ ಕಾರ್ಡ್ಗಳೊಂದಿಗೆ ₹7,000 ಬ್ಯಾಂಕ್ ಕೊಡುಗೆಯೊಂದಿಗೆ ಲಭ್ಯವಿದೆ. ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು ಸಹ ಲಭ್ಯವಿದೆ.













