Shruti Haasan: ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೆ; ಶ್ರುತಿ ಹಾಸನ್ ಬೋಲ್ಡ್ ಹೇಳಿಕೆ! | | ACTPnews

News18


Last Updated:

ನಟಿ ಶ್ರುತಿ ಹಾಸನ್ (Shruti Haasan) ಯಾವುದೇ ವಿಷಯದ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ . ಇದೀಗ ನಟಿ ಮಹಿಳೆಯರ ಪಿರಿಯಡ್ಸ್ , ಹಾಗೂ ಆ ವೇಳೆ ಎದುರಾಗುವ ನೋವು ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳ ಕುರಿತು ಮಾತನಾಡಿದ್ದಾರೆ.

News18
News18

ನಟಿ ಶ್ರುತಿ ಹಾಸನ್ (Shruti Haasan) ಯಾವುದೇ ವಿಷಯದ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ . ಇದೀಗ ನಟಿ ಮಹಿಳೆಯರ ಪಿರಿಯಡ್ಸ್ , ಹಾಗೂ ಆ ವೇಳೆ ಎದುರಾಗುವ ನೋವು ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳ ಕುರಿತು ಮಾತನಾಡಿದ್ದಾರೆ. ಸೋಹಾ ಅಲಿ ಖಾನ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶ್ರುತಿ ಹಾಸನ್, ಪುರುಷರಿಗೂ ಒಮ್ಮೆ ಪಿರಿಯಡ್ಸ್ ಅನುಭವವಾಗಲಿ ಎಂದು ತಾವು ಸಾವಿರ ಬಾರಿ ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.

ಸೋಹಾ ಅಲಿ ಖಾನ್ ಪಾಡ್‌ಕಾಸ್ಟ್‌ನಲ್ಲಿ ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಅನುಭವಗಳ ಕುರಿತು ಮಾತನಾಡಿದ್ದಾರೆ. ಮಹಿಳೆಯರು ಪ್ರತೀ ತಿಂಗಳು ಎದುರಿಸುವ ಋತುಚಕ್ರದ ನೋವಿಗೆ ಸಮಾಜದಲ್ಲಿ ನಿರೀಕ್ಷಿತ ಮಟ್ಟದ ಮಹತ್ವ ಸಿಗುತ್ತಿಲ್ಲ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪಿರಿಯಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಅದರ ಸುತ್ತಲಿನ ಮುಜುಗರದ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಶ್ರುತಿ ಹಾಸನ್ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪುರುಷರಿಗೂ ಪಿರಿಯಡ್ಸ್ ಅನುಭವವಾದರೆ ಮಹಿಳೆಯರು ಎದುರಿಸುವ ನೋವು ಮತ್ತು ಸಮಸ್ಯೆಗಳನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದು ಎಂಬ ಅರ್ಥದಲ್ಲಿ ನಟಿ ತಮ್ಮ ಮಾತನ್ನು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸೋಹಾ ಅಲಿ ಖಾನ್ ಕೂಡ ಶ್ರುತಿ ಮಾತಿಗೆ ಪ್ರತಿಕ್ರಿಯಿಸಿದ್ದು, ಪುರುಷರು ಕೂಡ ರಕ್ತಸ್ರಾವದ ಪ್ರಮಾಣ ಅಥವಾ ಬಳಸುವ ಟ್ಯಾಂಪೂನ್‌ಗಳ ಗಾತ್ರದ ಬಗ್ಗೆ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಎದುರಾಗಬಹುದು ಎಂದು ಹಾಸ್ಯಮಯವಾಗಿ ಹೇಳಿದ್ದಾರೆ. ಇಬ್ಬರ ಸಂಭಾಷಣೆಯಲ್ಲಿ ಪಿರಿಯಡ್ಸ್ ಅನುಭವವನ್ನು ಪುರುಷರು ಅರ್ಥಮಾಡಿಕೊಳ್ಳಬೇಕಾದ ಅಗತ್ಯದ ವಿಚಾರವೂ ಚರ್ಚೆಯಾಗಿದೆ.

ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಆರೋಗ್ಯ ಅನುಭವದ ಬಗ್ಗೆಯೂ ಮಾತನಾಡಿದ್ದಾರೆ. ಪಿಸಿಓಎಸ್‌ನಿಂದಾಗಿ ತಾವು ನೋವಿನಿಂದ ಕೂಡಿದ ಋತುಚಕ್ರವನ್ನು ಎದುರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಈ ವಿಚಾರದ ಬಗ್ಗೆ ಮಾತನಾಡಲು ತಾವು ಹಿಂಜರಿಯುತ್ತಿದ್ದೆ ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ಭಾಷೆ, ಉಚ್ಚಾರಣೆ ಬಗ್ಗೆ ಟ್ರೋಲ್; ರಶ್ಮಿಕಾ ಮಂದಣ್ಣ ಕೊಟ್ಟ ಖಡಕ್ ಉತ್ತರ!

ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಪಿರಿಯಡ್ಸ್ ಬಗ್ಗೆ ಹೇಳಿದರೆ ಅದನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ತಮ್ಮಲ್ಲಿತ್ತು ಎಂದು ಅವರು ವಿವರಿಸಿದ್ದಾರೆ. ಆದರೆ ಕಾಲ ಕಳೆದಂತೆ ತಮ್ಮ ಸಮಸ್ಯೆಯನ್ನು ಸಹೋದ್ಯೋಗಿಗಳು ಮತ್ತು ನಿರ್ದೇಶಕರೊಂದಿಗೆ ಹಂಚಿಕೊಳ್ಳುವುದರಿಂದ ಕೆಲಸವನ್ನು ಉತ್ತಮ ರೀತಿಯಲ್ಲಿ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಂಡಿರುವುದಾಗಿ ಹೇಳಿದ್ದಾರೆ.

ತಮ್ಮ ಪಿರಿಯಡ್ಸ್ ಸಮಸ್ಯೆಯನ್ನು ಮೊದಲ ಬಾರಿಗೆ ನಿರ್ದೇಶಕರೊಬ್ಬರ ಬಳಿ ಹೇಳಿಕೊಂಡ ಸಂದರ್ಭವನ್ನೂ ಶ್ರುತಿ ಹಾಸನ್ ನೆನಪಿಸಿಕೊಂಡಿದ್ದಾರೆ. ತಮಗೆ ಋತುಚಕ್ರವಿದೆ ಎಂದು ಹೇಳಿದಾಗ ಆ ನಿರ್ದೇಶಕರು ತಮ್ಮ ಮಗಳಿಗೂ ತೀವ್ರ ಸೆಳೆತದ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸಿದ್ದರಂತೆ.

ಈ ಸಂಭಾಷಣೆಯ ನಂತರ ಪರಿಸ್ಥಿತಿಯೇ ಬದಲಾಗಿತ್ತು ಎಂದು ಶ್ರುತಿ ಹೇಳಿದ್ದಾರೆ. ತಮ್ಮ ಸಮಸ್ಯೆಯನ್ನು ಮುಚ್ಚಿಡುವುದಕ್ಕಿಂತ ಅದರ ಬಗ್ಗೆ ಮುಕ್ತವಾಗಿ ಮಾತನಾಡಿದಾಗ ಕೆಲಸದ ವೇಳಾಪಟ್ಟಿಯನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಅನುಭವ ಅವರಿಗೆ ಆಗಿದೆ. ಮಹಿಳೆಯರು ತಮ್ಮ ದೈಹಿಕ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡುವ ವಾತಾವರಣದ ಅಗತ್ಯವನ್ನೂ ಅವರ ಮಾತುಗಳು ಸೂಚಿಸುತ್ತವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed