Wedding Financial Burden: ತಂದೆಯ ಕೊನೆ ಆಸೆಗಾಗಿ 10 ಸಹೋದರಿಯರ ಮದುವೆ ಹೊಣೆ ಹೊತ್ತ ಮಗ; ಮೂರೇ ಮದುವೆಗೆ ಮಾಡಿದ ಸಾಲ ಎಷ್ಟು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Viral Video: ಈ ಸ್ಟೋರಿ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುವುದಂತು ಸತ್ಯ. ತಂದೆ ಸಾಯೋ ಮುನ್ನ ಕೊನೆ ಆಸೆ ಅಂತ 11 ಜನ ತಂಗಿಯರನ್ನ ಸೆಟ್ಲ ಮಾಡೋ ಜವಾಬ್ದಾರಿನ 11ನೇ ಮಗನ ಹೆಗಲಿಗೆ ಹಾಕಿಹೋಗ್ತಾರೆ. ಪಾಪ, ಆ ಹುಡುಗ ತಂದೆಗೆ ಕೊಟ್ಟ ಮಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಸ್ಯಾಡ್ ರಿಯಾಲಿಟಿ ಏನಂದ್ರೆ, ಜಸ್ಟ್ ಮೂರೇ ಮೂರು ಮದುವೆ ಮುಗಿಸೋಷ್ಟರಲ್ಲಿ ಆತ ಮಾಡಿರೋ ಸಾಲ ಎಷ್ಟು ಗೊತ್ತಾ?

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಈ ಸ್ಟೋರಿ (Story) ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುವುದಂತು ಸತ್ಯ. ತಂದೆ ಸಾಯೋ ಮುನ್ನ ಕೊನೆ ಆಸೆ ಅಂತ 11 ಜನ ತಂಗಿಯರನ್ನ(Sister) ಸೆಟ್ಲ ಮಾಡೋ ಜವಾಬ್ದಾರಿನ 11ನೇ ಮಗನ (Son) ಹೆಗಲಿಗೆ ಹಾಕಿಹೋಗ್ತಾರೆ. ಪಾಪ, ಆ ಹುಡುಗ ತಂದೆಗೆ  (Father) ಕೊಟ್ಟ ಮಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಸ್ಯಾಡ್ ರಿಯಾಲಿಟಿ ಏನಂದ್ರೆ, ಜಸ್ಟ್ ಮೂರೇ ಮೂರು ಮದುವೆ ಮುಗಿಸೋಷ್ಟರಲ್ಲಿ ಆತ ಮಾಡಿರೋ ಸಾಲ ಎಷ್ಟು ಗೊತ್ತಾ? ಅಕ್ಷರಶಃ ಮೂವತ್ತೈದು ಲಕ್ಷ ರೂಪಾಯಿ (35 Lack Rupees).

ಮಾಡಬೇಕಿದೆ ಇನ್ನು 9 ಜನರ ಮದುವೆ!

ಇನ್ನು ಒಂಬತ್ತು ಜನ ತಂಗಿಯರ ಲೈಫ್ ಸೆಟ್ ಮಾಡೋದು ಬಾಕಿ ಇದೆ, ಆದ್ರೆ ಈ ಅಣ್ಣ ಈಗಲೇ ಸಾಲದ ಸುಳಿಯಲ್ಲಿ ಸಿಕ್ಕಿಹಾಕೊಂಡು ಕಂಗಾಲಾಗಿದ್ದಾನೆ. ಅಪ್ಪನ ಮಾತಿಗಾಗಿ ಇಷ್ಟೊಂದು ಸ್ಯಾಕ್ರಿಫೈಸ್ ಮಾಡೋ ಅಣ್ಣ ಸಿಗೋಕೆ ಸಾಧ್ಯನೇ ಇಲ್ಲ ಎಂದು ನೆಟ್ಟಿಗರು ಭಾವನಾತ್ಮಕವಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ: Iran Parliament: ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಈ ವ್ಯಕ್ತಿ ಆಯ್ಕೆ; ವಾರ್ ವೈಬ್ಸ್ ನಿಲ್ಲುತ್ತಾ ಅಥವಾ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಇಲ್ಲಿದೆ ಕಂಪ್ಲೀಟ್​ ಮಾಹಿತಿ!

ಕುಟುಂಬದಲ್ಲಿನ ಹೆಣ್ಣುಮಕ್ಕಳು ಸಂಖ್ಯೆ ಎಷ್ಟು ಗೊತ್ತಾ?

ಗುಜರಾತ್​ ನಗರದ ಕುಟುಂಬದಲ್ಲಿ ಒಟ್ಟು 11 ಮಕ್ಕಳು. ಮೊದಲಿಗೆ 10 ಹೆಣ್ಣುಮಕ್ಕಳು ಜನಿಸಿದ್ದರಿಂದ, ಮಗುವಾಗಿ ಒಬ್ಬ ಗಂಡು ಮಗ ಹುಟ್ಟಬೇಕು ಎಂಬುದು ತಂದೆಯ ಆಸೆಯಾಗಿತ್ತು. ನಂತರ ಕೊನೆಗೆ ಮಗ ಜನಿಸಿದನು. ಆದರೆ ಕೆಲವು ವರ್ಷಗಳ ಬಳಿಕ ತಂದೆಗೆ ಕ್ಯಾನ್ಸರ್ ತಗುಲಿ, ಅವರು ಸಾಯುವ ಸ್ಥಿತಿಯಲ್ಲಿದ್ದಾಗ ಮಗನನ್ನು ಕರೆದು ಒಂದು ಮಾತು ಕೇಳಿದರು. “ನಿನ್ನ 10 ಅಕ್ಕಂದಿರ ಮದುವೆಯನ್ನು ನೀನೇ ಮಾಡಿಸಬೇಕು. ಯಾರ ಮೇಲೂ ಅವಲಂಬಿಸಬೇಡ” ಎಂದು ಹೇಳಿ ವಾಗ್ದಾನ ಮಾಡಿಸಿಕೊಂಡರು. ತಂದೆಯ ಕೊನೆಯ ಇಚ್ಛೆಗೆ ಗೌರವ ನೀಡಿ ಯುವಕ ಕೂಡಲೇ ಒಪ್ಪಿಕೊಂಡ. ಆಗ ಆ ಹೊಣೆಗಾರಿಕೆಯ ಗಂಭೀರತೆ ಎಷ್ಟು ದೊಡ್ಡದು ಎಂಬುದು ಅವನಿಗೆ ಅಷ್ಟಾಗಿ ಅರ್ಥವಾಗಿರಲಿಲ್ಲ. ಆದರೆ ಈಗ ಅದು ಅವನ ಬದುಕಿನ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಲ್ಲಿವರೆಗೂ ಮಾಡಿಕೊಂಡ ಸಾಲ ಎಷ್ಟು ಗೊತ್ತಾ?

ಇಲ್ಲಿಯವರೆಗೆ ಯುವಕ ತನ್ನ ಮೂವರು ಅಕ್ಕಂದಿರ ಮದುವೆಗಳನ್ನು ನೆರವೇರಿಸಿದ್ದಾನೆ. ಆದರೆ ಅದಕ್ಕಾಗಿ ಅವನು ಸುಮಾರು ₹35 ಲಕ್ಷ ಸಾಲ ಮಾಡಬೇಕಾಯಿತು. ಮದುವೆ ವೆಚ್ಚ, ಆಭರಣ, ಸಮಾರಂಭದ ಖರ್ಚು ಮತ್ತು ಸಮಾಜದ ನಿರೀಕ್ಷೆಗಳನ್ನು ಪೂರೈಸುವ ಹೊಣೆ, ಈ ಎಲ್ಲವೂ ಸೇರಿ ಅವನನ್ನು ಸಾಲದ ಕಾಡಿಗೆ ತಳ್ಳಿವೆ. ಇನ್ನೂ ಏಳು ಅಕ್ಕಂದಿರ ಮದುವೆ ಬಾಕಿಯಿದೆ. ಇದಕ್ಕಾಗಿ ಮುಂದಿನ ವರ್ಷಗಳಲ್ಲಿ ₹2ರಿಂದ ₹3 ಕೋಟಿ ವರೆಗೆ ಹಣ ಬೇಕಾಗಬಹುದು ಎಂದು ಆತ ಅಂದಾಜಿಸಿದ್ದಾನೆ. ಈ ವಿಚಾರವನ್ನು ಹೇಳುವಾಗಲೂ ಆತ ತನ್ನ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇಬೇಕು ಎಂಬ ದೃಢತೆಯನ್ನೇ ವ್ಯಕ್ತಪಡಿಸಿದ್ದಾನೆ.

ವೈರಲ್​ ಆದ ವಿಡಿಯೋ!

ವೈರಲ್ ವಿಡಿಯೋದಲ್ಲಿ ಆತ ನಗುತ್ತಾ, “ಎಲ್ಲ ಅಕ್ಕಂದಿರ ಮದುವೆ ಮುಗಿದ ಮೇಲೆ ಸಾಲ ಉಳಿದಿದ್ದರೆ, ನಂತರ ನಾನು ಮದುವೆಯಾಗುತ್ತೇನೆ. ಆಗ ನನ್ನ ಮಕ್ಕಳಾಗುವ ವೇಳೆಗೆ ನನಗೆ 60–70 ವರ್ಷವಾಗಬಹುದು” ಎಂದು ಹೇಳಿದ್ದಾನೆ. ಅವನ ಮಾತು ಕೇಳಿದ ಅನೇಕರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಯುವಕನ ತ್ಯಾಗವನ್ನು ಶ್ಲಾಘಿಸಿ, “ಇದು ನಿಜವಾದ ಕುಟುಂಬ ಪ್ರೀತಿ” ಎಂದು ಹೇಳಿದ್ದಾರೆ. ಮತ್ತವರು, “ಪ್ರೀತಿ ಮುಖ್ಯ, ಆದರೆ ಭವಿಷ್ಯವನ್ನೇ ಸಾಲಕ್ಕೆ ತಳ್ಳುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ.

ಕಠಿಣ ವಾಸ್ತವದ ಪ್ರತಿಬಿಂಬ ಎಂದ ಸಾರ್ವಜನಿಕರು!

ಈ ಘಟನೆ ಭಾರತದಲ್ಲಿ ಮದುವೆಗಳ ಹೆಚ್ಚುತ್ತಿರುವ ವೆಚ್ಚ, ಕುಟುಂಬದ ಮೇಲಿನ ಸಾಮಾಜಿಕ ಒತ್ತಡ ಮತ್ತು ಸಂಪ್ರದಾಯದ ಹೆಸರಿನಲ್ಲಿ ಜನರು ಎದುರಿಸುವ ಆರ್ಥಿಕ ಸಂಕಷ್ಟದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಸರಳ ಮದುವೆಗಳಿಗೆ ಒತ್ತು ನೀಡಬೇಕು ಮತ್ತು ಕುಟುಂಬಗಳು ಹಣಕಾಸಿನ ಯೋಜನೆ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಯುವಕನ ಕಥೆ ಈಗ ಕೇವಲ ವೈರಲ್ ಸುದ್ದಿ ಮಾತ್ರವಲ್ಲ, ಸಮಾಜದ ಒಂದು ಕಠಿಣ ವಾಸ್ತವ್ಯದ ಪ್ರತಿಬಿಂಬವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed