Last Updated:
ಭಾರತದ ಕ್ರಿಕೆಟ್ ಪಿತಾಮಹ ಎಂಬ ಬಿರುದು ಪಡೆದಿರುವ ಈ ಆಟಗಾರ ಎಂದಿಗೂ ಭಾರತಕ್ಕಾಗಿ ಕ್ರಿಕೆಟ್ ಆಡಲಿಲ್ಲ. ಬದಲಿಗೆ ವಿಕ್ಟೋರಿಯನ್ ಬ್ರಿಟನ್‌ನಲ್ಲಿ ತಮ್ಮ ಕ್ರಿಕೆಟ್ ವೃತ್ತಿಯನ್ನು ಆರಂಭಿಸಿದರು.
ಭಾರತದಲ್ಲಿ ಕ್ರಿಕೆಟ್ (Cricket) ಕೇವಲ ಒಂದು ಆಟವಲ್ಲ, ಅದೊಂದು ಧರ್ಮ. ಬೇರೆ ಕ್ರೀಡೆಗಳಿಗೆ ಹೋಲಿಸಿದರೆ, ಕ್ರಿಕೆಟ್ ಮೇಲೆ ಭಾರತೀಯರಿಗೆ ಪ್ರೀತಿ ಜಾಸ್ತಿ. ಕೋಟ್ಯಾಂತರ ಜನರು ಕ್ರಿಕೆಟ್ ಅನ್ನು ಆರಾಧಿಸುತ್ತಾರೆ. ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ (India) ಕಾಲಿಟ್ಟ ಈ ಆಟ, ಇಂದು ದೇಶದ ಪ್ರತಿಯೊಂದು ಗಲ್ಲಿ-ಗಲ್ಲಿಯಲ್ಲೂ ಜೀವಂತವಾಗಿದೆ. ಆದರೆ, ಈ ಕ್ರಿಕೆಟ್ ಸಾಮ್ರಾಜ್ಯಕ್ಕೆ ಭಾರತದಲ್ಲಿ ಭದ್ರವಾದ ಬುನಾದಿ ಹಾಕಿದವರು ಯಾರು ಗೊತ್ತಾ?














