Last Updated:
ದುನಿಯಾ ವಿಜಯಕುಮಾರ್ ಡೈರೆಕ್ಷನ್ ಮಾಡಿರೋ ಸಿಟಿ ಲೈಟ್ಸ್ ಚಿತ್ರ ಟ್ರೈಲರ್ ರಿಲೀಸ್ ಆಗಿದೆ. ‘ಸ್ಯಾಂಡಲ್ವುಡ್ ಮಯೂರ’ ಅನ್ನುವ ವಿನಯ್ ಹೊಸ ಬಿರುದು ಕೂಡ ರಿವೀಲ್ ಆಗಿದೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಸಿಟಿ ಲೈಟ್ಸ್ ಚಿತ್ರದ (City Lights Movie) ಟ್ರೈಲರ್ ರಿಲೀಸ್ ಆಗಿದೆ. ಇಡೀ ಚಿತ್ರದ ಚಿತ್ರಣ ಇಲ್ಲಿ ದೊರೆಯುತ್ತದೆ. ವಿನಯ್ ರಾಜ್ಕುಮಾರ್ (Vinay Rajkumar) ಈ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಈ ಚಿತ್ರ ತುಂಬಾನೆ ನೈಜ ಮತ್ತು ಸಹಜ ಸಿನಿಮಾ ಅನಿಸುತ್ತದೆ. ಮೊನಿಷಾ ವಿಜಯ್ಕುಮಾರ್ ಗಮನ ಸೆಳೆದಿದ್ದಾರೆ. ಎಂದಿನಂತೆ ದುನಿಯಾ ವಿಜಯಕುಮಾರ್ (Duniya Vijaykumar) ಇಲ್ಲೂ ಹೊಸ ಕಲಾವಿದರಿಗೆ ಚಾನ್ಸ್ ಕೊಟ್ಟಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ ಕೂಡ ಈ ಚಿತ್ರದಲ್ಲಿದ್ದಾರೆ. ಇಷ್ಟೆಲ್ಲ ಇರೋ ಚಿತ್ರದ ನಾಯಕ ವಿನಯ್ ರಾಜ್ಕುಮಾರ್ ಅವರಿಗೆ ‘ಸ್ಯಾಂಡಲ್ವುಡ್ ಮಯೂರ’ ಅನ್ನುವ ಹೊಸ ಬಿರುದು ಕೂಡ ಕೊಡಲಾಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.














