ಧನುಷ್ ಮತ್ತು ಮಮಿತಾ ಬೈಜು ನಟಿಸಿದ ತಮಿಳು ಸಿನಿಮಾ ಕಾರಾ ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಘ್ನೇಶ್ ರಾಜಾ ನಿರ್ದೇಶಿಸಿದ ಈ ಚಿತ್ರವು ತನ್ನ ಥಿಯೇಟರ್ ಪ್ರದರ್ಶನದ ಸಮಯದಲ್ಲಿ ವಿಶ್ವಾದ್ಯಂತ ₹50 ಕೋಟಿಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ.
ಈಗ, ಬಿಡುಗಡೆಯಾದ ಕೆಲವೇ ವಾರಗಳ ನಂತರ, ಚಿತ್ರವು ಅದರ OTT ಪ್ರೀಮಿಯರ್ಗೆ ಸಿದ್ಧವಾಗಿದೆ. ಪ್ಲಾಟ್ಫಾರ್ಮ್ ಲಿಸ್ಟ್ ಪ್ರಕಾರ, ಕಾರಾ ಮೇ 28 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುತ್ತದೆ. ಚಿತ್ರ ತಂಡ ಅಥವಾ ಒಟಿಟಿ ಪ್ಲಾಟ್ಫಾರ್ಮ್ ಕಡೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲವಾದರೂ, ಲಿಸ್ಟ್ನಲ್ಲಿ ಸಿನಿಮಾ ಈಗಾಗಲೇ ಗುರುತಿಸಲಾಗಿದೆ ಮತ್ತು ಆನ್ಲೈನ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಈ ತ್ವರಿತ ಬದಲಾವಣೆಯು ಅನೇಕ ವೀಕ್ಷಕರನ್ನು ಅಚ್ಚರಿಗೊಳಿಸಿದೆ. ವಿಶೇಷವಾಗಿ ಚಿತ್ರವು ಒಂದು ತಿಂಗಳೊಳಗೆ OTT ಯಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಒಟಿಟಿ ರಿಲೀಸ್ ಲಿಸ್ಟ್ ಸ್ಕ್ರೀನ್ಶಾಟ್ಗಳು X (ಹಿಂದೆ ಟ್ವಿಟರ್) ನಲ್ಲಿ ಪ್ರಸಾರವಾಗುತ್ತಿವೆ.
ಕೆಲವು ಬಳಕೆದಾರರು ಇದು ಥಿಯೇಟರ್ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸುತ್ತಾರೆ. ಏಕೆಂದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗುವ ಬದಲು ಡಿಜಿಟಲ್ ಬಿಡುಗಡೆಗಾಗಿ ಕಾಯಲು ಬಯಸುತ್ತಾರೆ. ಇನ್ನು ಸ್ವಲ್ಪ ದಿನ ಅಲ್ವಾ ಅಂತ ಥಿಯೇಟರ್ಗೆ ಹೋಗದೆ ಕಾಯುತ್ತಾರೆ. ಇನ್ನು ಕೆಲವರು ಇದು ಚಿತ್ರದ ಬಾಕ್ಸ್ ಆಫೀಸ್ ಪರ್ಫಾಮೆನ್ಸ್ ಪ್ರತಿಬಿಂಬಿಸುತ್ತದೆ ಎಂದು ನಂಬುತ್ತಾರೆ.
ಥಿಯೇಟರ್ ಆವೇಗ ನಿಧಾನವಾದಾಗ OTT ಪ್ಲಾಟ್ಫಾರ್ಮ್ಗಳು ಬೇಗನೆ ಸಿನಿಮಾ ಸ್ಟ್ರೀಮ್ ಮಾಡುತ್ತವೆ. X ನಲ್ಲಿ ಒಬ್ಬ ಬಳಕೆದಾರರು, ಕಾರಾ ಒಟಿಟಿ ರಿಲೀಸ್. ಬಿಡುಗಡೆ ದಿನಾಂಕ: ಏಪ್ರಿಲ್ 30. ಸ್ಟ್ರೀಮಿಂಗ್ ದಿನಾಂಕ: ಮೇ 28. ಸ್ಟ್ರೀಮಿಂಗ್ಗೆ ಬರುವ ಸಮಯ: 29 ದಿನಗಳು. ಉದ್ಯಮವು ಥಿಯೇಟರ್ಗಳನ್ನು ಹೀಗೆ ಉಳಿಸುವುದಾ? NETFLIX ಚಂದಾದಾರಿಕೆ ಮತ್ತು ಟೊರೆಂಟ್ ಮಾಡಲು ವಿವಿಧ ವೆಬ್ಸೈಟ್ಗಳಿಗೆ ಪ್ರವೇಶವನ್ನು ಹೊಂದಿರುವವರು, 29 ದಿನಗಳಲ್ಲಿ 4K ಪ್ರಿಂಟ್ ಪಡೆಯಬಹುದು ಎಂದು ತಿಳಿದಾಗ ಅವರು ಥಿಯೇಟರ್ಗೆ ಏಕೆ ಭೇಟಿ ನೀಡುತ್ತಾರೆ? ಎಂದು ಬರೆದಿದ್ದಾರೆ.
“ಧನುಷ್ ಅವರ Kara ಮೇ 28 ಗುರುವಾರ ನೆಟ್ಫ್ಲಿಕ್ಸ್ನಲ್ಲಿ ಬರುತ್ತಿದೆ. ಅದು ಬಾಕ್ಸ್ ಆಫೀಸ್ ನಲ್ಲಿ ವಿಫಲವಾಯಿತು, OTT ಯಲ್ಲಿ ನೋಡೋಣ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. “ಎಲ್ಲಾ ಧನುಷ್ ಸಿನಿಮಾಗಳ ಕಂಟೆಂಟ್ ನನಗೆ ತಿಳಿದಿಲ್ಲ. ಆದರೆ ನನ್ನ ಜ್ಞಾನದ ಪ್ರಕಾರ, ಉತ್ತಮ ಥಿಯೇಟ್ರಿಕಲ್ ವ್ಯವಹಾರ ಮಾಡುವ ಸಿನಿಮಾಗಳು ಸಾಮಾನ್ಯವಾಗಿ ತಡವಾಗಿ ಬಿಡುಗಡೆಯಾಗುತ್ತವೆ. ಆದರೆ ಕಾರದ ವಿಷಯದಲ್ಲಿ, ಅದರ ಥಿಯೇಟ್ರಿಕಲ್ ವ್ಯವಹಾರ ಬಹುತೇಕ ಮುಗಿದಿದೆ, ಆದ್ದರಿಂದ ತಂಡವು ಅದರ ಥಿಯೇಟ್ರಿಕಲ್ ವ್ಯವಹಾರಕ್ಕಾಗಿ ಹೆಚ್ಚು ಸಮಯ ಕಾಯದಿರಬಹುದು ಎಂದಿದ್ದಾರೆ.
ಈ ಚಿತ್ರವು 1990 ರ ದಶಕದಲ್ಲಿ ನಡೆಯಲಿದ್ದು, ಒಬ್ಬ ಕಳ್ಳನು ತನ್ನ ಅಪರಾಧ ಇದ್ದಂತಹ ಹಿಂದಿನ ಜೀವನ ಬಿಟ್ಟು ಹೋಗಲು ಪ್ರಯತ್ನಿಸುತ್ತಾನೆ, ಆದರೆ ಬ್ಯಾಂಕ್ ಅವನ ಪೂರ್ವಜರ ಮನೆಯನ್ನು ವಶಪಡಿಸಿಕೊಂಡಾಗ ಅವನು ಹಿಂದಿನಂತಾಗುತ್ತಾನೆ. ಇದನ್ನು ವಿಘ್ನೇಶ್ ರಾಜ ಮತ್ತು ಆಲ್ಫ್ರೆಡ್ ಪ್ರಕಾಶ್ ಬರೆದಿದ್ದಾರೆ. ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಮತ್ತು ಥಿಂಕ್ ಸ್ಟುಡಿಯೋಸ್ ನಿರ್ಮಿಸಿವೆ.
ಪ್ರಮುಖ ಜೋಡಿಯ ಜೊತೆಗೆ, ಚಿತ್ರದಲ್ಲಿ ಕೆಎಸ್ ರವಿಕುಮಾರ್, ಸೂರಜ್ ವೆಂಜರಮೂಡು, ಕರುಣಾಸ್, ಜಯರಾಮ್, ಪೃಥ್ವಿರಾಜ್ ಮತ್ತು ಶ್ರೀಜಾ ರವಿ ಇದ್ದಾರೆ.
ಸ್ಯಾಕ್ನಿಲ್ಕ್ ಪ್ರಕಾರ, ಕಾರಾ ಭಾರತದಲ್ಲಿ ಸುಮಾರು ₹37.50 ಕೋಟಿ ನಿವ್ವಳ ಮತ್ತು ವಿಶ್ವಾದ್ಯಂತ ₹53.65 ಕೋಟಿ ಗಳಿಕೆ ಮಾಡಿದೆ. ಚಿತ್ರಮಂದಿರಗಳಲ್ಲಿ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಮತ್ತು ಅದರ ಆರಂಭಿಕ OTT ಬಿಡುಗಡೆಯು ಈಗ ಸಿನಿಮಾಗಳು ಚಿತ್ರಮಂದಿರಗಳಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಎಷ್ಟು ಬೇಗನೆ ಬರುತ್ತಿದೆ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಗೆ ಕಾರಣವಾಗಿದೆ.












