Last Updated:
ಮೈಸೂರು ಮೈ ಭಾರತ್ ಕೇಂದ್ರದಿಂದ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಮೈ ಭಾರತ್ ಪೋರ್ಟಲ್ ನೋಂದಣಿ ಕಡ್ಡಾಯ, ಜೂನ್ 03ರೊಳಗೆ ಅರ್ಜಿ, ಸಕ್ರಿಯ ಸಂಘಗಳಿಗೆ ಆದ್ಯತೆ
ಮೈಸೂರಿನ (Mysuru) ಯುವಕರಲ್ಲಿ ಕ್ರೀಡಾ ಹುಮ್ಮಸ್ಸು ಹೆಚ್ಚಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಇದೀಗ ಮೈ ಭಾರತ್ ಕೇಂದ್ರ ಭರ್ಜರಿ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಕ್ರೀಡಾ ಸಾಮಗ್ರಿಗಳ (Sports Equipment) ವಿತರಣೆಗಾಗಿ ಮೈ ಭಾರತ್ ಕೇಂದ್ರದ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಯುವ ಸಂಘಗಳು (Youth Association) ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.
ಆಸಕ್ತ ಯುವ ಸಂಘಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಜೂನ್ 03ರೊಳಗೆ ತಮ್ಮ ಅರ್ಜಿಯನ್ನು ಜಿಲ್ಲಾ ಯುವ ಅಧಿಕಾರಿ, ಮೈ ಭಾರತ್ ಕೇಂದ್ರ, ಮೈಸೂರು ಕಚೇರಿಗೆ ಸಲ್ಲಿಸಬೇಕು.
ನೀವು ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಕಚೇರಿಗೆ ಭೇಟಿ ನೀಡಲು ಬಯಸಿದರೆ, #26/ಎ, ರಾಜರಾಜೇಶ್ವರಿ ದೇವಸ್ಥಾನದ ರಸ್ತೆ, ವಿಶ್ವೇಶ್ವರ ನಗರ, 3ನೇ ಹಂತ, ಮೈಸೂರು–570008 ವಿಳಾಸಕ್ಕೆ ಭೇಟಿ ನೀಡಬಹುದು. ಅಲ್ಲದೆ, 0821-2489858 ಅಥವಾ 7736426247 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
Mysore,Mysore,Karnataka













