Last Updated:
ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್‌ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!
ಮಕ್ಕಳನ್ನು (children) ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಬಿಡಿ, ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು (parents) ಮಕ್ಕಳಿಗೆ ತಿಳಿಸಬೇಕು. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ (All-round growth) ತುಂಬಾನೇ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗೆಯೇ ಮಕ್ಕಳು ಸಹ ಬೆಳೆಯುತ್ತಾ ಹೋದಂತೆ ತಮ್ಮ ಪೋಷಕರನ್ನು ಹೆಚ್ಚು ಗೌರವಿಸಬೇಕು ಎಂದರೆ ಅವರಲ್ಲಿ ಕೆಲವು ಒಳ್ಳೆಯ ರೀತಿಯ ಗುಣಗಳಿರಬೇಕಾಗುತ್ತದೆ. ಮಕ್ಕಳನ್ನು ಬೆಳೆಸುವುದು ಟ್ರಯಲ್ ಆಂಡ್ ಎರರ್ (Trial and error) ವಿಧಾನ ಎಂಬಂತೆ ಇರುತ್ತದೆ ಅಂತ ಹೇಳಬಹುದು. ಆದ್ದರಿಂದ ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸಬೇಕೆಂದು ಬಯಸಿದರೆ, ನೀವು ಈ ಅಭ್ಯಾಸಗಳಿಗೆ ಗುಡ್‌ಬೈ ಹೇಳಿ..
ಅನೇಕ ಪೋಷಕರು ಈ ಒಂದು ಮಾತಿನಲ್ಲಿ ಎಡುವುತ್ತಾರೆ, ತಮ್ಮ ಮಕ್ಕಳು ಹೇಳುವುದನ್ನು ಸರಿಯಾಗಿ ಮತ್ತು ಪೂರ್ತಿಯಾಗಿ ಕೇಳಿಸಿಕೊಳ್ಳದೆ ತಮ್ಮದೇ ಆದ ಉಪನ್ಯಾಸ ನೀಡಲು ಶುರು ಮಾಡುತ್ತಾರೆ. ಪೋಷಕರಾಗಿ, ತಮ್ಮ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಮಾರ್ಗದರ್ಶನ ಮಾಡುವುದು ಅವರ ಕರ್ತವ್ಯವಾಗಿರುತ್ತದೆ. ಹಾಗಾಗಿ ಮಕ್ಕಳು ಹೇಳುವುದನ್ನು ಮೊದಲು ಸರಿಯಾಗಿ ಕೇಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಕೇಳುವ ಮೊದಲೇ ಅವರಿಗೆ ಉಪನ್ಯಾಸ ನೀಡಲು ಶುರು ಮಾಡುವುದು ಮಕ್ಕಳಿಗೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಹುಟ್ಟು ಹಾಕುವಂತೆ ಮಾಡಬಹುದು.
ಪೋಷಕರು ಅಥವಾ ದೊಡ್ಡವರು ಏನಾದರೂ ತಪ್ಪು ಮಾಡಿದಾಗ, ಅದನ್ನು ಅವರು ಬೇಗನೆ ಒಪ್ಪಿಕೊಳ್ಳುವುದಿಲ್ಲ. ಈ ಗುಣವನ್ನು ಮಕ್ಕಳು ಸ್ವಲ್ಪವೂ ಇಷ್ಟಪಡುವುದಿಲ್ಲ. ಇದು ಮಕ್ಕಳಿಗೆ ಪೋಷಕರಿಗೆ ನೇರವಾಗಿ ನೀವು ತಪ್ಪು ಮಾಡಿದ್ದೀರಿ ಅಂತ ಹೇಳುವುದಕ್ಕೂ ಸಹ ಆಗದೆ ತುಂಬಾನೇ ಒದ್ದಾಡುತ್ತಾರೆ. ತಮ್ಮದು ತಪ್ಪು ಅಂತ ಗೊತ್ತಾದಾಗ ಅದನ್ನು ಒಪ್ಪಿಕೊಳ್ಳುವುದು ಮತ್ತು ಅಗತ್ಯವಿದ್ದರೆ ಅವರ ಬಳಿ ಕ್ಷಮೆ ಕೇಳುವುದು ಪ್ರಜ್ಞಾಪೂರ್ವಕ ಪ್ರಯತ್ನ ಅಂತ ಹೇಳಬಹುದು. ಹೀಗೆ ಮಾಡುವುದು ನಿಮ್ಮ ಮಕ್ಕಳಲ್ಲಿ ನಿಮ್ಮ ಬಗ್ಗೆ ಇರುವಂತಹ ಗೌರವವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಹೊರತು ಕಡಿಮೆ ಮಾಡುವುದಿಲ್ಲ.
ಪ್ರತಿಯೊಂದು ಮಗುವು ತನ್ನದೇ ಆದಂತಹ ಸಾಮರ್ಥ್ಯ ಮತ್ತು ದೌರ್ಬಲ್ಯಗಳೊಂದಿಗೆ ವಿಶಿಷ್ಟವಾಗಿರುತ್ತವೆ. ಆದರೂ, ನಿಮ್ಮ ಮಗುವನ್ನು ಇತರರೊಂದಿಗೆ ಹೋಲಿಸುವ ಬಲೆಗೆ ಬೀಳುವುದು ತುಂಬಾನೇ ಸುಲಭ ಅಂತ ನಿಮಗೆ ಅನ್ನಿಸಬಹುದು. ಆದರೆ ಇದು ಮಕ್ಕಳ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಮಗುವನ್ನು ಬೇರೆ ಮಕ್ಕಳಂತೆ ಇರಬೇಕೆಂದು ನೀವು ಬಯಸುವ ಬದಲು ಅವರು ಅವರಾಗಿಯೇ ಇರಲು ಬಿಡುವುದು ಒಳ್ಳೆಯದು ಅಂತ ಅನ್ನಿಸುತ್ತದೆ. ಅವರು ತಮ್ಮ ಅತ್ಯುತ್ತಮ ಆವೃತ್ತಿಯಾಗಲು ಅವರನ್ನು ಪ್ರೋತ್ಸಾಹಿಸಿ. ಮತ್ತು ಅವರ ಪ್ರತ್ಯೇಕತೆಯನ್ನು ಗೌರವಿಸಿ ಹಾಗೂ ಪ್ರತಿಯಾಗಿ ಆಗ ಅವರು ನಿಮ್ಮನ್ನು ಹಿಂದೆಗಿಂತಲೂ ಹೆಚ್ಚು ಗೌರವಿಸಲು ಶುರು ಮಾಡುತ್ತಾರೆ.
ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮದ ಪ್ರಾಮುಖ್ಯತೆಯ ಬಗ್ಗೆ ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ತುಂಬಾನೇ ತಿಳಿಸುತ್ತಾರೆ. ಆದರೆ ಎಷ್ಟೋ ಪೋಷಕರು ಕೆಲಸದ ಒತ್ತಡದಿಂದ ಅವರೇ ಆ ಎಲ್ಲಾ ನಿಯಮಗಳನ್ನು ಅಥವಾ ಒಳ್ಳೆಯ ಜೀವನಶೈಲಿಯನ್ನು ಪಾಲಿಸಲು ಆಗುವುದಿಲ್ಲ. ಆದನ್ನು ಮಕ್ಕಳು ಕೇಳಿ ಕಲಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುತ್ತಾರೆ. ನಿಮ್ಮ ಮಗುವು ವಯಸ್ಸಾದಂತೆ ನಿಮ್ಮನ್ನು ಗೌರವಿಸಬೇಕೆಂದು ನೀವು ಬಯಸಿದರೆ, ನೀವು ಅವರಿಂದ ನಿರೀಕ್ಷಿಸುವ ನಡವಳಿಕೆಯನ್ನು ನೀವು ರೂಪಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ನಮ್ಮೆಲ್ಲರಂತೆ ಮಕ್ಕಳೂ ಸಹ ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡುತ್ತಾರೆ. ಮಕ್ಕಳು ತಪ್ಪು ಮಾಡಿದಾಗ, ಅವರನ್ನು ಅತಿಯಾಗಿ ಬಯ್ಯುವುದು, ಹೊಡೆಯುವುದು ಮತ್ತು ನಿಂದಿಸುವುದು ಮಾಡಿದರೆ ಮಕ್ಕಳು ಪೋಷಕರ ಬಗ್ಗೆ ತುಂಬಾನೇ ಗಾಬರಿಯಾಗುತ್ತಾರೆ ಮತ್ತು ಹೆದರಲು ಶುರು ಮಾಡುತ್ತಾರೆ. ಆದ್ದರಿಂದ ಮಕ್ಕಳು ಮಾಡುವ ತಪ್ಪುಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವ ಪೋಷಕರ ಬಗ್ಗೆ ಮಕ್ಕಳಲ್ಲಿ ಒಂದು ರೀತಿಯ ಭಯ ಮತ್ತು ಆತಂಕ ಮನೆ ಮಾಡುತ್ತದೆ. ನಾವು ಅತಿಯಾಗಿ ಪ್ರತಿಕ್ರಿಯಿಸಿದರೆ, ಗದರಿಸಿದರೆ ಅಥವಾ ಅವರನ್ನು ಅತಿಯಾಗಿ ಶಿಕ್ಷಿಸಿದರೆ, ಅವರು ನಮ್ಮನ್ನು ಗೌರವಿಸುವ ಬದಲು ನಮಗೆ ಭಯಪಡಲು ಪ್ರಾರಂಭಿಸಬಹುದು.
ನಿಮ್ಮ ಮಗುವಿನ ವಯಸ್ಸಾದಂತೆ ಗೌರವವನ್ನು ಗಳಿಸಲು ನೀವು ಮಾಡಬಹುದಾದ ಪ್ರಮುಖ ವಿಷಯವೆಂದರೆ ಅವರಿಗೆ ಬೆಳೆಯಲು ಮತ್ತು ಕಲಿಯಲು ಅವಕಾಶ ನೀಡುವುದು. ಪೋಷಕರಂತೆ, ನಮ್ಮ ಮಕ್ಕಳನ್ನು ಹಾನಿ ಮತ್ತು ವೈಫಲ್ಯದಿಂದ ರಕ್ಷಿಸುವುದು ನಮ್ಮ ಪ್ರವೃತ್ತಿಯಾಗಿದೆ.













